ಶಹಬಾಸ್ ಮುಖ್ಯಮಂತ್ರಿಗಳೇ, CAA ಬಗ್ಗೆ ಧರ್ಮ ಎಳೆದುತಂದು ಅಪಪ್ರಚಾರ ಮಾಡುತ್ತಿದ್ದ ಎಲ್ಲರಿಗೂ ಒಂದೇ ವಾಕ್ಯದಲ್ಲಿ ಮುಖ್ಯಮಂತ್ರಿಗಳು ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಮಸೂದೆಯನ್ನು ಅಧಿಕೃತವಾಗಿ ಗೆಜೆಟ್ ಪ್ರಕಟಣೆಯ ಮೂಲಕ ಜಾರಿಗೊಳಿಸಿದೆ. ಆದರೆ ಇನ್ನು ರಾಜಕೀಯ ನಾಯಕರು ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ಭಾರತೀಯ ಮುಸಲ್ಮಾನರಿಗೆ ತೊಂದರೆಯಾಗುತ್ತದೆ ಎಂದು ರಾಜಕೀಯ ಬಣ್ಣ ಬಳಿಯುವುದನ್ನು ನಿಲ್ಲಿಸಿಲ್ಲ.

ಪೌರತ್ವ ತಿದ್ದುಪಡಿ ಮಸೂದೆಯು ಕೇವಲ ವಿದೇಶಗಳಿಂದ ವಲಸೆ ಬಂದಿರುವ ವಿದೇಶಿಗರಿಗೆ ಮಾತ್ರ ಅನ್ವಯವಾಗುತ್ತದೆ ಎಂಬುದನ್ನು ಸಾರಿ ಹೇಳಿದರೂ ಕೂಡ ರಾಜಕೀಯ ನಾಯಕರು ‌ ತಮ್ಮ ಲಾಭಕ್ಕಾಗಿ ಧರ್ಮಗಳ ನಡುವೆ ಸಾಮರಸ್ಯದಲ್ಲಿ ತೊಡಕಾಗುವಂತೆ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಬೆಟ್ಟು ಮಾಡಿ ತೋರಿಸುವ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿರುವ ಸಂದರ್ಭದಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಹಾಗೂ ಎನ್ಆರ್ಸಿ ಕಾಯ್ದೆಗಳನ್ನು ಕರ್ನಾಟಕದಲ್ಲಿ ಜಾರಿಗೆ ತರುತ್ತೇವೆ ಎಂದು ಈಗಾಗಲೇ ಘೋಷಣೆ ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಬಹಳ ಮಹತ್ವದ ಹೇಳಿಕೆ ನೀಡುವ ಮೂಲಕ ಎಲ್ಲರ ಮನಗೆದ್ದಿದ್ದಾರೆ.

ಹೌದು, ಪೌರತ್ವ ತಿದ್ದುಪಡಿ ಮಸೂದೆ ಇಂದ ಭಾರತೀಯ ಮುಸ್ಲಿಮರಿಗೆ ತೊಂದರೆಯಾಗುತ್ತದೆ ಎಂದು ರಾಜಕೀಯ ಪಕ್ಷಗಳು ಬಿಂಬಿಸುತ್ತಿರುವ ಸಂದರ್ಭದಲ್ಲಿ, ಮುಖ್ಯಮಂತ್ರಿಗಳು ನಮ್ಮ ಕರ್ನಾಟಕದಲ್ಲಿ ಎರಡು ಯೋಜನೆಗಳನ್ನು ಜಾರಿ ಮಾಡಲಾಗುತ್ತದೆ. ಆದರೆ ಇದರಿಂದ ಯಾವುದಾದರೂ ಒಬ್ಬ ಭಾರತೀಯ ಮುಸಲ್ಮಾನರಿಗೆ ತೊಂದರೆಯಾದರೂ ನಾನು ವೈಯಕ್ತಿಕ ಜವಾಬ್ದಾರಿ ಹೊರುತ್ತೇನೆ ಎಂದು ಭಾರತೀಯ ಮುಸಲ್ಮಾನರಿಗೆ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಈ ಮಹತ್ವದ ಹೇಳಿಕೆಗೆ ಬಹಳ ಪ್ರಶಂಸೆಗಳು ವ್ಯಕ್ತವಾಗಿವೆ. ಈ ಮೂಲಕ ಕೇಂದ್ರ ಸರ್ಕಾರದ ಯಾವುದೇ ನೀತಿಗಳಿಂದ ಭಾರತೀಯ ಮುಸ್ಲಿಮರಿಗೆ ಆಗಲಿ ಅಥವಾ ಯಾವುದೇ ಧರ್ಮದವರಾಗಲಿ ತೊಂದರೆ ಇಲ್ಲ ಎಂಬುದನ್ನು ಸಾರಿ ಹೇಳಿದ್ದಾರೆ.

Post Author: Ravi Yadav