ದೀಪಿಕಾ ಪಡುಕೋಣೆಗೆ ಮತ್ತೊಂದು ಶಾಕ್ ನೀಡಿದ ಕೇಂದ್ರ ಸರ್ಕಾರ ! ತುಕ್ದೆ ಗ್ಯಾಂಗ್ ಗಳ ಪರ ನಿಂತಿದಕ್ಕೆ ತಕ್ಕ ಶಾಸ್ತಿ?

ನಮಸ್ಕಾರ ಸ್ನೇಹಿತರೇ, ದೀಪಿಕಾ ಪಡುಕೋಣೆ ರವರು JNU ಕಾಲೇಜಿನ ವಿದ್ಯಾರ್ಥಿಗಳ ಪರವಾಗಿ ನಿಂತಿದ್ದ ಕಾರಣ ಬಾರಿ ವಿವಾದವನ್ನು ಮೈಮೇಲೆ ಎಳೆದು ಕೊಂಡಿದ್ದಾರೆ. ಸಾಮಾನ್ಯವಾಗಿ ಬೇರೆ ಯಾವುದಾದರೂ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪರವಾಗಿ ಅಥವಾ ಬೇರೆ ವಿದ್ಯಾರ್ಥಿಗಳ ಪರವಾಗಿ ನಿಂತಿದ್ದರೇ ಇಷ್ಟಾಗಿ ಚರ್ಚೆಗೆ ಗ್ರಾಸವಾಗುತ್ತಿರಲಿಲ್ಲ. ಆದರೆ ದೇಶವನ್ನು ವಿಭಜನೆ ಮಾಡುತ್ತೇವೆ ಎನ್ನುವ ಸಿದ್ದಾಂತವನ್ನು ಹೊಂದಿರುವ ತುಕ್ದೆ ಗ್ಯಾಂಗ್ ಎಂದೇ ಕುಖ್ಯಾತಿ ಪಡೆದು ಕೊಂಡಿರುವ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತ ಕಾರಣ ಇದೀಗ ಬಾರಿ ವಿವಾದ ಸೃಷ್ಟಿಯಾಗಿದೆ. ಇದೀಗ ಈ ವಿವಾದ ಮತ್ತೊಂದು ಹಂತಕ್ಕೆ ತಲುಪಿದ್ದು ದೀಪಿಕಾ ರವರಿಗೆ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ನೀಡಿದೆ.

ಇದೀಗ ಕೇಂದ್ರ ಸರ್ಕಾರ ಮೋದಿ ರವರ ಕನಸಿನ ಸ್ಕಿಲ್ ಇಂಡಿಯಾ ಕಾರ್ಯಕ್ರಮದ ಪ್ರಚಾರದ ಕಿರು ಚಿತ್ರದಿಂದ ದೀಪಿಕಾ ರವರಿಗೆ ಗೇಟ್ ಪಾಸ್ ನೀಡಲಾಗಿದೆ. ಮೂಲಗಳ ಪ್ರಕಾರ ದೀಪಿಕಾ ಪಡುಕೋಣೆರವರು ಈ ಕಿರು ಚಿತ್ರದಲ್ಲಿ 45 ಸೆಕೆಂಡ್ ಗಳಷ್ಟು ಕಾಲ ನಟನೆ ಮಾಡಿದ್ದರು, ಅಷ್ಟೇ ಅಲ್ಲದೇ ಈ ಕಿರುಚಿತ್ರವನ್ನು ಬಿಡುಗಡೆ ಮಾಡುವ ಜವಾಬ್ದಾರಿ ಹೊತ್ತಿದ್ದರು. ಆದರೆ ಇದೀಗ ಬಂದಿರುವ ಅಧಿಕೃತ ಮಾಹಿತಿ ಪ್ರಕಾರ ದೀಪಿಕಾ ಮಾತನಾಡಿರುವ ಭಾವವನ್ನು ಕಿರು ಚಿತ್ರದಿಂದ ತೆಗೆದು ಹಾಕಲಾಗಿದ್ದು, ಅವರನ್ನು ಪ್ರಚಾರ ಕಾರ್ಯಕ್ರಮ ದಿಂದ ದೂರ ಇಟ್ಟು ಪ್ರಚಾರ ನಡೆಸಲಾಗಿದೆ. ಈ ಚಿತ್ರೀಕರಣದ ನಂತರ JNU ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತು, ಭೇಟಿ ಮಾಡಿದ್ದರು. ಆದರೆ ಯಾವ ಕಾರಣಕ್ಕೆ ದೀಪಿಕಾರವರನ್ನು ಕೈ ಬಿಡಲಾಗಿದೆ ಎಂದು ತಿಳಿಸಿಲ್ಲ.

Post Author: Ravi Yadav