ತುಕಡೆ ಗ್ಯಾಂಗ್ ಗಳ ಸಿದ್ಧಾಂತ ಹಾಗೂ ದೀಪಿಕಾ ರವರಿಗೆ ತಕ್ಕ ತಿರುಗೇಟು ನೀಡಿದ ನಟಿ ಜೂಹಿಚಾವ್ಲಾ ! ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವ ಹಾಗೇ ದೀಪಿಕಾ ಪಡುಕೋಣೆ ರವರು ಬೇರೆ ವಿದ್ಯಾರ್ಥಿಗಳ ಮೇಲೆ ಯಾವುದಾದರೂ ದಾಳಿ ನಡೆದಿದ್ದ ಸಂದರ್ಭದಲ್ಲಿ ಪ್ರತಿಭಟನೆ ಮಾಡಿದ್ದರೇ ಯಾವುದೇ ವಿವಾದ ಸೃಷ್ಟಿಯಾಗುತ್ತಿರಲಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ದೇಶವನ್ನು ವಿಭಜನೆ ಮಾಡುತ್ತೇವೆ ಎಂಬ ಸಿದ್ಧಾಂತದಿಂದ ಹೋರಾಡುತ್ತಿರುವ ತುಕಡೆ ಗ್ಯಾಂಗ್ ಗಳ ಪರವಾಗಿ ನಿಂತಿದ್ದ ಕಾರಣಕ್ಕಾಗಿ ದೀಪಿಕಾ ರವರ ಮೇಲೆ ಟೀಕೆಗಳ ಬಾಣ ಗಳು ಹರಿದು ಬಂದಿದೆ ಎನ್ನಲಾಗುತ್ತಿದೆ.

ಇದೀಗ ಜೆಎನ್ಯು ಕಾಲೇಜ್ ಪ್ರತಿಭಟನೆ ಹಾಗೂ ಅಲ್ಲಿ ನಡೆಯುತ್ತಿರುವ ಘಟನೆಗಳ ಕುರಿತು ಮಾತನಾಡಿರುವ ಖ್ಯಾತ ನಟಿ ಜೂಹಿ ಚಾವ್ಲಾ ರವರು ಪರೋಕ್ಷವಾಗಿ ದೀಪಿಕಾ ಪಡುಕೋಣೆಯವರ ಸಿದ್ಧಾಂತಕ್ಕೆ ಟಾಂಗ್ ನೀಡುವುದಷ್ಟೇ ಅಲ್ಲದೇ ತುಕಡೆ ಗ್ಯಾಂಗ್ ಗಳ ಸಿದ್ಧಾಂತ ವಿರುದ್ಧ ಹರಿಹಾಯ್ದಿದ್ದಾರೆ. ಸದಾ ತನ್ನ ದೇಶದ ವಿರುದ್ಧ ಕಿಡಿಕಾರುವ ಬದಲು ತಮ್ಮ ನಡವಳಿಕೆಯಲ್ಲಿ ಜನರು ಬದಲಾವಣೆ ತಂದರೆ ಸೂಕ್ತ ಎಂದು ಮಾತನ್ನು ಆರಂಭಿಸಿದ ಜೂಹಿಚಾವ್ಲಾ ರವರು,CAA ಅಥವಾ NRC ಆಗಿರಲಿ ಮೊದಲು ಎಲ್ಲರೂ ಅದನ್ನು ಅರ್ಥಮಾಡಿಕೊಳ್ಳಬೇಕು, ಅದರ ಬಗ್ಗೆ ಚರ್ಚೆ ಯಾಕೆ ನಡೆಯುತ್ತದೆ ಎಂಬುದರ ಸಂಪೂರ್ಣ ಮಾಹಿತಿ ತಿಳಿದುಕೊಂಡು ಮುಂದಕ್ಕೆ ಮಾತನಾಡಬೇಕು. ಸದಾ ವಿಭಜನೆ ಮಾಡುತ್ತೇವೆ ಎಂದು ಧ್ವನಿಯೆತ್ತುವ ಬದಲು ನಾವು ಯಾಕೆ ಒಂದಾಗುವ ಮಾತು ಮಾತನಾಡಬಾರದು ಎಂದು ತುಕಡೆ ಗ್ಯಾಂಗ್ ಗಳಿಗೆ ಮೊದಲ ಟಾಂಗ್ ನೀಡಿದ್ದಾರೆ.

ಇನ್ನು ಕೆಲವರು ಪ್ರತಿಕ್ರಿಯಿಸಲೇ ಬೇಕು ಎಂಬ ಕಾರಣದಿಂದ ಪ್ರಶ್ನಿಸುತ್ತಾರೆ, ಅಂತಹ ಜನರಿಗೆ ನಾವು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಸಮಯ ನೀಡಬೇಕು, ನಾವು ಕೆಲಸಕ್ಕೆ ಹೋಗಿರುತ್ತೇವೆ, ಅಲ್ಲಿ ಕೆಲಸ ಹೇಗೆ ಮಾಡಲು ಎಂದು ಯೋಚಿಸುತ್ತಿರುವ ಸಂದರ್ಭದಲ್ಲಿ ಹೊರಗಡೆ ಏನಾದರೂ ನಡೆದರೇ ನಮಗೆ ಅದರ ಬಗ್ಗೆ ಅರಿವು ಇರುವುದಿಲ್ಲ. ಆದರೆ ಮಾಧ್ಯಮದವರು ಇದರ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂದಾಗ ಉತ್ತರಿಸಬೇಕು ಎಂಬ ಕಾರಣದಿಂದ ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳದೇ ಪ್ರತಿಕ್ರಿಯೆ ನೀಡುತ್ತಾರೆ ಎಂದು ಪರೋಕ್ಷವಾಗಿ ದೀಪಿಕಾ ಪಡುಕೋಣೆ ರವರಿಗೆ ಟಾಂಗ್ ನೀಡಿದ್ದಾರೆ. ಇನ್ನು ಕೆಲವರು ಸರ್ಕಾರ ಮಾಡುತ್ತಿರುವು ದಾದರೂ ಏನು? ಯಾಕೆ ಈ ರೀತಿ ಮಾಡುತ್ತಿದೆ? ಎಂದು ಪ್ರಶ್ನೆ ಮಾಡುತ್ತಾರೆ. ಆದರೆ ಒಬ್ಬರ ಕಡೆ ನೀವು ಬೆರಳು ಮಾಡಿದರೇ ನಿಮ್ಮ ಮೂರು ಬೆರಳುಗಳು ನಿಮ್ಮ ಕಡೆ ತಿರುಗಿರುತ್ತವೆ. ಆದ ಕಾರಣದಿಂದ ನಾವು ಏನು ಮಾಡುತ್ತಿದ್ದೇವೆ ಎಂಬುದರ ಬಗ್ಗೆ ಗಮನವಿರಲಿ. ಎಲ್ಲರೂ ಸಮಾಧಾನದಿಂದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿಕೆ ನೀಡಿದ್ದಾರೆ.

Post Author: Ravi Yadav