ತುಕ್ದೆ ಗ್ಯಾಂಗಿಗೆ ಬಾರಿ ಮುಖಭಂಗ ! JNU ಕಾಲೇಜಿನ ಪ್ರಕರಣವನ್ನು ಭೇದಿಸಿದ ದೆಹಲಿ ಪೊಲೀಸರು ! ಇಲ್ಲಿದೆ ಅಸಲಿ ಕಥೆ !

ತುಕ್ದೆ ಗ್ಯಾಂಗಿಗೆ ಬಾರಿ ಮುಖಭಂಗ ! JNU ಕಾಲೇಜಿನ ಪ್ರಕರಣವನ್ನು ಭೇದಿಸಿದ ದೆಹಲಿ ಪೊಲೀಸರು ! ಇಲ್ಲಿದೆ ಅಸಲಿ ಕಥೆ !

ಇಡೀ ದೇಶದಲ್ಲಿ ಸದ್ದು ಮಾಡಿದ JNU ಕಾಲೇಜಿನಲ್ಲಿ ನಡೆದ ಪ್ರಕರಣವನ್ನು ಇದೀಗ ದೆಹಲಿ ಪೊಲೀಸರು ಭೇದಿಸಿದ್ದಾರೆ. ನಿಮಗೆಲ್ಲರಿಗೂ ಈ ಕಾಲೇಜಿನಲ್ಲಿ ನಡೆದ ಪ್ರಕರಣ ದೇಶದಲ್ಲಿ ಸದ್ದು ಮಾಡಲು ಪ್ರಮುಖ ಕಾರಣ ರಾಜಕೀಯ. ಹೌದು ಈ ಪ್ರಕರಣವನ್ನು ಮೋದಿ ಸರ್ಕಾರದ ವಿರುದ್ಧ ಟೀಕೆ ಮಾಡಲು ವಿಪಕ್ಷಗಳು ಸೇರಿದಂತೆ ಹಲವಾರು ನಾಯಕರು ಬಳಸಿಕೊಂಡಿದ್ದರು.

ದೆಹಲಿ ಪೊಲೀಸರನ್ನು ಸುಮ್ಮನೆ ಇರುವಂತೆ ಮಾಡಿ ಕೇಂದ್ರ ಸರ್ಕಾರದ ಬೆಂಬಲಿತ ಸಂಘಟನೆಗಳು ಈ ರೀತಿ ಮಾಡಿವೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಆದರೆ ಇದೀಗ ಸತ್ಯ ಬಯಲಾಗಿದೆ, ಸಿಂಪತಿ ಪಡೆದುಕೊಂಡು, ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಲು ಕಾದು ಕುಳಿತಿದ್ದ ತುಕ್ದೆ ಗ್ಯಾಂಗ್ ಗಳಿಗೆ ಇನ್ನಿಲ್ಲದ ಮುಖಭಂಗ ಉಂಟಾಗಿದೆ. ದೆಹಲಿ ಪೊಲೀಸರು ನಡೆಸಿದ ಸುದ್ದಿಘೋಷ್ಠಿಯಲ್ಲಿ CCTV ಕ್ಯಾಮೆರಾಗಳ ಮೂಲಕ ಸಾಕ್ಷಿ ಸಂಗ್ರಹ ಮಾಡಿ ಬಿಡುಗಡೆ ಮಾಡಿರುವ ಪೊಲೀಸರು ಎಡಪಂಥೀಯ ಸಂಘಟನೆಗಳು ಈ ಕಾರ್ಯ ನಡೆಸಿವೆ ಎಂದು ತಿಳಿಸಿದ್ದಾರೆ.

ಅಷ್ಟೇ ಅಲ್ಲದೇ JNUSU ಪ್ರೆಸಿಡೆಂಟ್ ಐಷೆ ಘೋಷ್ ಈ ದಾಳಿಯ ನೇತೃತ್ವ ವಹಿಸಿದ್ದರು ಎಂದು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಬರೋಬ್ಬರಿ 9 ಜನರ ಗುರುತನ್ನು ಪತ್ತೆ ಹಚ್ಚಿ ವಿಡಿಯೋ ಗಳ ಮೂಲಕ ಹೆಸರನ್ನು ಗುರುತಿಸಿದ್ದಾರೆ. ಈ ಸುದ್ದಿಘೋಷ್ಠಿಯ ನಂತರ ಐಶ್ ಘೋಷ್ ಯಾವುದೇ ಪ್ರತಿಕ್ರಿಯೆ ನೀಡದೇ ಸುಮ್ಮನಾಗಿದ್ದಾರೆ(ವಿಡಿಯೋ ಬಗ್ಗೆ ಬಿಟ್ಟು ಉಳಿದ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ.) ಇನ್ನು ದೆಹಲಿ ಪೊಲೀಸರು CCTV ದಾಖಲೆಗಳನ್ನು ಆಧರಿಸಿ ಕಠಿಣ ಕ್ರಮದ ಎಚ್ಚರಿಕೆ ರವಾನೆ ಮಾಡಿದ್ದಾರೆ. ಈ ಮೂಲಕ ದೇಶದಲ್ಲಿ ಬಾರಿ ಚರ್ಚೆಗೆ ಗ್ರಾಸವಾಗಿದ್ದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು ಇವರನ್ನು ಬೆಂಬಲಿಸಿ ದೀಪಿಕಾ, ಪ್ರಕಾಶ್ ರಾಜ್, ಕೇಜ್ರಿವಾಲ್, ಕಾಂಗ್ರೆಸ್ ಪಕ್ಷದ ಹಲವಾರು ನಾಯಕರು ಏನು ಹೇಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.