ಅಮಿತ್ ಶಾ ಮೋದಿ ಮಾತನ್ನು ಖ್ಯಾರೇ ಎನ್ನದ ಬಿಜೆಪಿ ಅಭಿಮಾನಿಗಳು ! ಮುಜುಗರ ಅನುಭವಿಸುತ್ತದೆಯೇ ಬಿಜೆಪಿ?? ಇನ್ನಾದರೂ ಎಚ್ಚೆತ್ತುಕೊಳ್ಳುವರೇ ಬಿಜೆಪಿ ಅಭಿಮಾನಿಗಳು??

ಅಮಿತ್ ಶಾ ಮೋದಿ ಮಾತನ್ನು ಖ್ಯಾರೇ ಎನ್ನದ ಬಿಜೆಪಿ ಅಭಿಮಾನಿಗಳು ! ಮುಜುಗರ ಅನುಭವಿಸುತ್ತದೆಯೇ ಬಿಜೆಪಿ?? ಇನ್ನಾದರೂ ಎಚ್ಚೆತ್ತುಕೊಳ್ಳುವರೇ ಬಿಜೆಪಿ ಅಭಿಮಾನಿಗಳು??

ನಮಸ್ಕಾರ ಸ್ನೇಹಿತರೇ, ಇಡೀ ದೇಶದಲ್ಲಿ ಕೆಲವು ವರ್ಷಗಳಿಂದ ಬಿಜೆಪಿಗೆ ಹಾಗೂ ಮೋದಿ ಅಮಿತ್ ಶಾ ಜೋಡಿಗೆ ಬಹುತೇಕ ಜನರು ಅಭಿಮಾನಿಗಳಾಗಿದ್ದಾರೆ. ಅದರಲ್ಲಿಯೂ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಯಾವುದೇ ಡಿಜಿಟಲ್ ಪ್ಲಾಟ್ ಫಾರ್ಮ್ ನಲ್ಲಿ ಬಿಜೆಪಿ ಪಕ್ಷದ ಅಭಿಮಾನಿಗಳು ಕೋಟ್ಯಂತರ ಜನರು ಇದ್ದಾರೆ ಎಂದರೆ ತಪ್ಪಾಗಲಾರದು.

ಆದರೆ ಇದೀಗ ಬಿಜೆಪಿ ಪಕ್ಷದ ಅಭಿಮಾನಿಗಳು ಅದ್ಯಾಕೋ ತಿಳಿದಿಲ್ಲ ಬಿಜೆಪಿ ಪಕ್ಷದ ನಾಯಕರ ಮನವಿಗೆ ಕ್ಯಾರೆ ಎನ್ನುತ್ತಿಲ್ಲ. ಒಂದು ವೇಳೆ ಇದು ಹೀಗೆ ಮುಂದುವರೆದರೆ ಮೋದಿ, ಅಮಿತ್ ಷಾ ಅವರನ್ನು ಸೇರಿಸಿ ಇಡೀ ಬಿಜೆಪಿ ಪಕ್ಷಕ್ಕೆ ಭಾರೀ ಮುಖಭಂಗ ವಾಗುವುದರಲ್ಲಿ ಎರಡು ಮಾತಿಲ್ಲ. ಅಷ್ಟಕ್ಕೂ ನಡೆಯುತ್ತಿರುವುದಾದರೂ ಏನು ಗೊತ್ತಾ?? ಹಾಗೂ ಒಂದು ವೇಳೆ ನೀವು ಬಿಜೆಪಿ ಪಕ್ಷದ ಅಭಿಮಾನಿಯಾಗಿದ್ದರೆ ನೀವು ಏನು ಮಾಡಬೇಕು ಗೊತ್ತಾ?? ತಿಳಿಯಲು ಸಂಪೂರ್ಣವಾಗಿ ಓದಿ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಳೆದು ಕೆಲವು ದಿನಗಳ ಹಿಂದೆ ಬಿಜೆಪಿ ಪಕ್ಷವು ಪೌರತ್ವ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸಿತು. ಮಾಧ್ಯಮಗಳಲ್ಲಿ ಇದಕ್ಕೆ ಬಾರಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ ಎಂಬಂತೆ ಬಿಂಬಿಸುತ್ತಿದ್ದ ಕಾರಣ ಬಿಜೆಪಿ ಪಕ್ಷವು ತನ್ನ ನಿರ್ಧಾರಕ್ಕೂ ಕೂಡ ಬೆಂಬಲವಿದೆ ಎಂಬುದನ್ನು ನಿರೂಪಿಸಲು ಹೊಸ ಯೋಜನೆಯೊಂದನ್ನು ರೂಪಿಸಿತ್ತು. ಅದುವೇ ಮಿಸ್ ಕಾಲ್ ಗಳ ಮೂಲಕ ಪೌರತ್ವ ತಿದ್ದುಪಡಿ ಮಸೂದೆಗೆ ಬೆಂಬಲ ಪಡೆದು ಕೊಳ್ಳುವುದು.

ಹೌದು, ನೀವು ಒಂದು ವೇಳೆ ಪೌರತ್ವ ತಿದ್ದುಪಡಿ ಮಸೂದೆಗೆ ಬೆಂಬಲ ಸೂಚಿಸುವುದಾದರೆ, 8866288662 ಈ ನಂಬರ್ಗೆ ಮಿಸ್ ಕಾಲ್ ನೀಡಿ ಎಂದು ಮನವಿ ಮಾಡಿತ್ತು. ಕೋಟ್ಯಾಂತರ ಮಿಸ್ ಕಾಲ್ ಗಳ ನಿರೀಕ್ಷೆಯಲ್ಲಿದ್ದ ಬಿಜೆಪಿ ಪಕ್ಷದ ಅಭಿಯಾನ ಆರಂಭವಾಗಿ ಹಲವು ದಿನಗಳು ಕಳೆದರು ಕೇವಲ 56 ಲಕ್ಷ ಮಿಸ್ ಕಾಲ್ ಗಳನ್ನು ಪಡೆದುಕೊಂಡಿದೆ. ಜೀ ವಾಹಿನಿ ನಡೆಸಿದ ಸುದ್ದಿ ಸಮೀಕ್ಷೆಯಲ್ಲಿ ಬರೋಬ್ಬರಿ ಒಂದು ಕೋಟಿಗೂ ಹೆಚ್ಚು ಮಿಸ್ ಕಾಲ್ ಬಂದಿದ್ದವು. ಆದರೆ ಬಿಜೆಪಿ ಪಕ್ಷದ ಅಧಿಕೃತ ಅಭಿಯಾನಕ್ಕೆ ಕೇವಲ 56 ಲಕ್ಷ ಮಿಸ್ ಕಾಲ್ ಬಂದಿರುವುದು ಬಿಜೆಪಿ ಪಕ್ಷಕ್ಕೆ ಭಾರೀ ಮುಜುಗರ ಉಂಟಾಗಿದೆ.‌ ಒಂದು ವೇಳೆ ಈ ಅಭಿಯಾನ ಇದೇ ರೀತಿ ಮುಂದುವರಿದಲ್ಲಿ ಒಂದು ಕೋಟಿ ತಲುಪುವುದು ಅನುಮಾನವಾಗಿದೆ. ಒಂದು ವೇಳೆ ಅದೇ ನಡೆದಲ್ಲಿ ಬಿಜೆಪಿ ಪಕ್ಷ ಕೇವಲ ರಾಷ್ಟ್ರೀಯವಾಗಿ ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಕೂಡ ಭಾರಿ ಮುಜುಗರ ಅನುಭವಿಸಲಿದೆ. ರಾಷ್ಟ್ರೀಯ ಮಾಧ್ಯಮಗಳು ಹಾಗೂ ಅಂತರರಾಷ್ಟ್ರೀಯ ಮಾಧ್ಯಮಗಳಿಗೆ ತಿರುಗೇಟು ನೀಡಿ, ವಿರೋಧ ಪಕ್ಷದ ನಾಯಕರ ಬಾಯಿಗೆ ಬೀಗ ಹಾಕಲು ಅಭಿಯಾನ ಆರಂಭ ಮಾಡಿದ ಬಿಜೆಪಿ ಪಕ್ಷಕ್ಕೆ ಈ ಅಭಿಯಾನ ಮತ್ತೊಂದು ಹೊಸ ಸವಾಲಾಗಿ ಉದ್ಭವಿಸಿದೆ.