ಒಂದಿಂಚು ಹಿಂದೆ ಸರಿಯುವುದಿಲ್ಲ ಎಂದ ಶಾ ರವರನ್ನು ಉದ್ದೇಶಿಸಿ ಮುಸ್ಲಿಮರಿಗೆ ಸಂಜಯ್ ರಾವತ್ ಹೇಳಿದ್ದೇನು ಗೊತ್ತಾ?? ಎಚ್ಚರಿಕೆಯ ಸಂದೇಶದಲ್ಲಿ ಏನಿತ್ತು??

ಒಂದಿಂಚು ಹಿಂದೆ ಸರಿಯುವುದಿಲ್ಲ ಎಂದ ಶಾ ರವರನ್ನು ಉದ್ದೇಶಿಸಿ ಮುಸ್ಲಿಮರಿಗೆ ಸಂಜಯ್ ರಾವತ್ ಹೇಳಿದ್ದೇನು ಗೊತ್ತಾ?? ಎಚ್ಚರಿಕೆಯ ಸಂದೇಶದಲ್ಲಿ ಏನಿತ್ತು??

ನಮಸ್ಕಾರ ಸ್ನೇಹಿತರೇ, ಶಿವಸೇನಾ ಪಕ್ಷಗಳು ಕೇಂದ್ರ ಸರ್ಕಾರದ ಬಿಜೆಪಿಯ ಪ್ರಣಾಳಿಕೆಯನ್ನು ಸಂಪೂರ್ಣವಾಗಿ ಬಳಸಿಕೊಂಡು ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ನಡೆಸಿತ್ತು. ಬಿಜೆಪಿ ಪಕ್ಷದ ಸಂಪೂರ್ಣ ಪ್ರಣಾಳಿಕೆಯಲ್ಲಿನ ಅಂಶಗಳಲ್ಲಿ ತಾವು ಬಿಜೆಪಿ ಪಕ್ಷದ ಪರವಾಗಿ ನಿಲ್ಲುತ್ತೇವೆ ಎಂದು ಘೋಷಣೆ ಮಾಡಿದ್ದರು.

ಆದರೆ ಮಹಾರಾಷ್ಟ್ರ ರಾಜ್ಯದಲ್ಲಿ ಬಿಜೆಪಿ ಪಕ್ಷದ ಮೈತ್ರಿ ಮುರಿದು ಕೊಂಡ ಕಾರಣ ಇದೀಗ ವಿರೋಧ ಪಕ್ಷದ ಪಕ್ಷಗಳ ಸಾಲಿನಲ್ಲಿ ಗುರುತಿಸಿ ಕೊಂಡಿರುವ ಶಿವಸೇನಾ ಪಕ್ಷವು ಯಾರೂ ಊಹಿಸದ ರೀತಿಯಲ್ಲಿ ಬಿಜೆಪಿ ಪಕ್ಷದ ಪ್ರಣಾಳಿಕೆಯಲ್ಲಿನ ಅಂಶಗಳ ವಿರುದ್ಧ ಮಾತನಾಡುತ್ತಿದೆ. ವಿಪರ್ಯಾಸವೆಂದರೇ ತಾನು ಜಾರಿ ಮಾಡಿಯೇ ತೀರುತ್ತೇನೆ ಎಂದು ಹೇಳಿದ ಮಸೂದೆಗಳ ವಿರುದ್ಧವಾಗಿ ಇದೀಗ ಮಾತನಾಡಿ, ಬಿಜೆಪಿ ಪಕ್ಷದ ವಿರುದ್ಧ ಹರಿಹಾಯ್ದುತ್ತಿದೆ ಶಿವಸೇನೆ. ಇದೀಗ ಇದೇ ವಿಚಾರದ ಕುರಿತು ಮಾತನಾಡಿರುವ ಸಂಜಯ್ ರಾವತ್ ರವರು ಗೃಹ ಸಚಿವ ಅಮಿತ್ ಷಾ ರವರಿಗೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ್ದಾರೆ. ಏನು ಹೇಳಿದ್ದಾರೆ ಹಾಗೂ ಸಂಪೂರ್ಣ ವಿವರಗಳಿಗಾಗಿ ಕೆಳಗಡೆ ಓದಿ. ಪೌರತ್ವ ತಿದ್ದುಪಡಿ ಮಸೂದೆಯನ್ನು ಇಷ್ಟು ದಿವಸ ಭಾರತೀಯ ಮುಸ್ಲಿಮರಿಗೆ ವಿರುದ್ಧವಾಗಿದೆ ಎನ್ನುತ್ತಿದ್ದ ಶಿವಸೇನಾ ಪಕ್ಷದ ನಾಯಕ ಸಂಜಯ್ ರಾವತ್ ರವರು,

ಇದೀಗ ಪೌರತ್ವ ತಿದ್ದುಪಡಿ ಮಸೂದೆಯು ಹಿಂದೂಗಳಿಗೆ ವಿರುದ್ಧವಾಗಿದೆ, ರಾಷ್ಟ್ರೀಯ ನಾಗರಿಕ ನೋಂದಣಿ ಮಸೂದೆ ಜೊತೆ ಪೌರತ್ವ ತಿದ್ದುಪಡಿ ಮಸೂದೆಯನ್ನು ಸೇರಿಸಿದರೆ ದೇಶದ 30 ಪರ್ಸೆಂಟ್ ಹಿಂದುಗಳಿಗೆ ತೊಂದರೆಯಾಗುತ್ತದೆ. ಇನ್ನು ಸಿಎಎ, ಎನ್ಪಿಆರ್, ಎನ್ಆರ್ಸಿ ಮಸೂದೆಯ ಬಗ್ಗೆ ಯಾವ ಮುಸ್ಲಿಮರು ಭಯ ಬೀಳಬಾರದು, ನಾವು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮಹಾರಾಷ್ಟ್ರದಲ್ಲಿ ನಮ್ಮ ತಾಕತ್ತು ಸಾಬೀತು ಪಡಿಸಿದ್ದೇವೆ, ಎಲ್ಲರೂ ಭಯದಿಂದ ಈ ಕೂಡಲೇ ಹೊರಬರಬೇಕು. ಕೆಲವರು ಹೇಳುತ್ತಾರೆ ಒಂದು ಇಂಚು ಹಿಂದೆ ಸರಿಯುವುದಿಲ್ಲ, ಅವ್ರು ತಿದ್ದುಪಡಿ ಮಸೂದೆಯನ್ನು ಜಾರಿಗೆ ತಂದೇ ತರುತ್ತೇವೆ ಎಂದು ಆದರೆ ನಾವು ಅವರನ್ನೇ ( ಅಮಿತ್ ಶಾ ರವರನ್ನು) ಹೊರ ದಬ್ಬುತ್ತೇವೆ ಎಂದು ನೇರವಾಗಿ ಗೃಹ ಸಚಿವರಿಗೆ ಎಚ್ಚರಿಕೆ ನೀಡಿದ್ದಾರೆ. ಇದೀಗ ಇವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶ ಹಾಗೂ ವ್ಯಂಗ್ಯದ ಮಾತುಗಳು ಕೇಳಿಬಂದಿವೆ.