ಅಸಲಿ ಕಥೆ ಈಗ ಶುರು, ಸತ್ಯ ಒಪ್ಪಿಕೊಂಡು ತಾಳ್ಮೆ ಕಳೆದುಕೊಂಡ ಶಿವಸೇನೆ ! ಸೋನಿಯಾಗೆ ಭಾರಿ ಮುಜುಗರ ! ಅಷ್ಟಕ್ಕೂ ನಡೆದದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಮಹಾರಾಷ್ಟ್ರ ರಾಜ್ಯದಲ್ಲಿ ಬಹುತೇಕ ರಾಜಕೀಯ ಪಂಡಿತರ ಲೆಕ್ಕಾಚಾರಗಳು ಸತ್ಯವಾಗುತ್ತಿವೆ. ಸಚಿವ ಸಂಪುಟ ವಿಸ್ತರಣೆಯಾದ ಮೇಲೆ ಅಂದು ಕೊಂಡಂತೆ ಮೈತ್ರಿಯಲ್ಲಿ ಭಿನ್ನಮತ ಭುಗಿಲೆದ್ದಿದೆ. ಇಷ್ಟು ದಿವಸ ಕಾಂಗ್ರೆಸ್ ಪಕ್ಷ ಏನೇ ಮಾಡಿದರೂ ಸುಮ್ಮನೆ ಕೂರುತ್ತಿದ್ದ ಶಿವಸೇನಾ ಪಕ್ಷವು ಇದೀಗ ತಾಳ್ಮೆ ಕಳೆದುಕೊಂಡಿದೆ.

ಹೌದು, ಕಾಂಗ್ರೆಸ್ ಪಕ್ಷದ ಹಲವಾರು ಷರತ್ತಿಗೆ ಒಪ್ಪಿಕೊಂಡ ಶಿವಸೇನಾ ಪಕ್ಷದ ನಾಯಕ ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿ ಹುದ್ದೆಗೆ ಏರಿದ್ದರು. ಆದರೆ ಇಷ್ಟೆಲ್ಲಾ ಮಾಡಿದ ಮಾಡಿದ ಬಳಿಕ ಕಾಂಗ್ರೆಸ್ ಪಕ್ಷದ ವರ್ತನೆಯಿಂದ ಇದೀಗ ಕೊನೆಗೂ ತಾಳ್ಮೆ ಕಳೆದು ಕೊಂಡಿದ್ದಾರೆ.‌ ಇದೀಗ ಇದರ ಕುರಿತು ವರದಿ ಮಾಡಿರುವ ಶಿವಸೇನಾ ಪಕ್ಷದ ಮುಖವಾಣಿ ಪತ್ರಿಕೆಯು ಸಂಪೂರ್ಣವಾಗಿ ಉದ್ಧವ್ ಠಾಕ್ರೆ ಅವರ ಮಾತು ಹಾಗೂ ಅವರ ಅಭಿಪ್ರಾಯಗಳನ್ನು ವರದಿ ಮಾಡಿದೆ. ಇಷ್ಟು ದಿವಸ ಶಿವಸೇನಾ ಪಕ್ಷವು ಮಾಡುತ್ತಿದ್ದ ಪ್ರತಿಭಟನೆಯನ್ನು ಕಾಂಗ್ರೆಸ್ ಪಕ್ಷ “ರಾಢಾ ಸಂಸ್ಕೃತಿ” ಸಂಸ್ಕೃತಿ ಅಥವಾ ಗುಂಡಾಗಿರಿ ಎಂದು ಟೀಕೆ ಮಾಡುತ್ತಿತ್ತು. ಇದೀಗ ಇದರ ಕುರಿತು ಕೂಡ ಉದ್ಧವ್ ಠಾಕ್ರೆ ಅವರು ಬಹಿರಂಗವಾಗಿ ಮಾತನಾಡಿದ್ದಾರೆ.

ಸಚಿವ ಸಂಪುಟ ವಿಸ್ತರಣೆಯ ನಂತರ ಎಲ್ಲರಲ್ಲೂ ಅಸಮಾಧಾನ ಇದೆ ಎಂದು ಸತ್ಯ ಒಪ್ಪಿ ಕೊಂಡಿರುವ ಉದ್ಧವ್ ಠಾಕ್ರೆ ಅವರು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸಂಗಮ್ ಟೋಪ್ಟ್ ಅವರ ಬೆಂಬಲಿಗರು ಕಾಂಗ್ರೆಸ್ ಪಕ್ಷದ ಕಚೇರಿಯನ್ನು ಧ್ವಂಸ ಮಾಡಿದ್ದಾರೆ, ಇಷ್ಟು ದಿವಸ ಶಿವಸೇನಾ ಪಕ್ಷದ ಪ್ರತಿಭಟನೆಯನ್ನು ಗುಂಡಗಿರಿ ಎಂದು ಕರೆಯುತ್ತಿದ್ದ ಕಾಂಗ್ರೆಸ್ ‌ ಪಕ್ಷದಲ್ಲಿ ಇಂದು ಅದೇ ನಡೆದಿದೆ ಎಂದು ಉದ್ಧವ್ ಠಾಕ್ರೆ ರವರು ಸೋನಿಯಾ ಗಾಂಧಿ ರವರಿಗೆ ಪರೋಕ್ಷ ಟಾಂಗ್ ನೀಡಿದ್ದಾರೆ ಎಂದು ಪತ್ರಿಕೆಯಲ್ಲಿ ವರದಿ ಮಾಡಲಾಗಿದೆ. ಅಷ್ಟೇ ಅಲ್ಲದೇ, ಅಜಿತ್ ಪವರ್ ರವರ ಜೊತೆ ಸೇರಿಕೊಂಡು ಯಾರಿಗೆ ಯಾವ ಮಂತ್ರಿಗಿರಿ ನೀಡಬೇಕು ಎಂಬುದು ಚರ್ಚೆಯಾಗಿದೆ. ಇತರ ವಿಷಯಗಳ ಬಗ್ಗೆಯೂ ಕೂಡ ಚರ್ಚೆ ನಡೆಸಿದ್ದೇವೆ, ಸದ್ಯದಲ್ಲೇ ಎಲ್ಲಾ ಆದೇಶಗಳು ಹೊರಗಡೆ ಬರಲಿವೆ, ಅಲ್ಲಿಯವರೆಗೂ ಕಾಯಲೇಬೇಕು ಎಂದು ಸೋನಿಯಾ ಗಾಂಧಿ ರವರಿಗೆ ಉತ್ತರ ನೀಡಿದ್ದಾರೆ ಎನ್ನಲಾಗಿದೆ.

Post Author: Ravi Yadav