CAA ವಿರೋಧ ಮಾಡಿದ ರಾಜ್ಯಗಳಿಗೆ ಮರ್ಮಾಘಾತ ! ಮಾಸ್ಟರ್ ಪ್ಲಾನ್ ಮೂಲಕ ಅಮಿತ್ ಶಾ ಮೋಡಿ ! ಮಾಡಿದ್ದೇನು ಗೊತ್ತಾ??

CAA ವಿರೋಧ ಮಾಡಿದ ರಾಜ್ಯಗಳಿಗೆ ಮರ್ಮಾಘಾತ ! ಮಾಸ್ಟರ್ ಪ್ಲಾನ್ ಮೂಲಕ ಅಮಿತ್ ಶಾ ಮೋಡಿ ! ಮಾಡಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಪೌರತ್ವ ತಿದ್ದುಪಡಿ ಮಸೂದೆಗೆ ಹಲವಾರು ರಾಜ್ಯಗಳು ವಿರೋಧ ವ್ಯಕ್ತಪಡಿಸುತ್ತಾ ಯಾವುದೇ ಕಾರಣಕ್ಕೂ ನಮ್ಮ ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನು ಜಾರಿಗೆ ತರುವುದಿಲ್ಲ ಎಂದು ಕಿಡಿಕಾರಿದ್ದಾರೆ. ಆದರೆ ಇದೀಗ ಮೋದಿ ಹಾಗೂ ಅಮಿತ್ ಶಾ ಜೋಡಿಯು ಹೊಸದೊಂದು ಮಾಸ್ಟರ್ ಪ್ಲಾನ್ ಮೂಲಕ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧ ಮಾಡುತ್ತಿರುವ ರಾಜ್ಯಗಳಿಗೆ ಬಿಗ್ ಶಾಕ್ ನೀಡಿದ್ದಾರೆ.

ಹೌದು, ಒಮ್ಮೆ ಭಾರತೀಯ ಸಂವಿಧಾನದ ಪ್ರಕಾರ ಲೋಕಸಭಾ ಹಾಗೂ ರಾಜ್ಯಸಭಾ ಕಲಾಪಗಳಲ್ಲಿ ಅಂಗೀಕಾರವಾದ ಕಾನೂನನ್ನು ಇಡೀ ಭಾರತ ದೇಶದ ರಾಜ್ಯಗಳು ಒಪ್ಪಿಕೊಳ್ಳಲೇ ಬೇಕು. ಜನರಿಂದ ಜನರಿಗೋಸ್ಕರ ಆಯ್ಕೆಯಾಗಿ ತೆರಳಿರುವ ಸಂಸದರು ಹಾಗೂ ಸದಸ್ಯರು ಒಪ್ಪಿಕೊಂಡ ಮೇಲಷ್ಟೇ ಯಾವುದೇ ಕಾನೂನಾಗಲಿ ಜಾರಿ ಆಗುತ್ತದೆ. ಹೀಗೆ ಸಂಸತ್ ಕಲಾಪದಲ್ಲಿ ಅಂಗೀಕಾರವಾದ ಮೇಲೆ ಅಧಿಕೃತವಾಗಿ ಭಾರತೀಯ ಸಂವಿಧಾನದ ಕಾನೂನಾಗಿ ಮಾರ್ಪಡುತ್ತದೆ. ಆದರೆ ಕೆಲವು ರಾಜ್ಯಗಳು ಉದ್ಧಟತನ ಮೆರೆದು ಭಾರತೀಯ ಸಂವಿಧಾನದ ಕಾನೂನನ್ನು ಬದಲಿಸುತ್ತೇವೆ ಎಂಬಂತೆ ಯಾವುದೇ ಕಾರಣಕ್ಕೂ ಪೌರತ್ವ ತಿದ್ದುಪಡಿ ಮಸೂದೆಯನ್ನು ಜಾರಿಗೆ ತರುವುದಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ತೊಡೆತಟ್ಟಿದ್ದರು. ಹಲವಾರು ದಿನಗಳ ಹಿಂದೆಯೇ ಕೇಂದ್ರ ಸರ್ಕಾರವು ಈ ರಾಜ್ಯಗಳಿಗೆ ಪ್ರತಿಕ್ರಿಯೆ ನೀಡಿ ಸಂವಿಧಾನದ ಪ್ರಕಾರ ನಡೆದುಕೊಳ್ಳುವಂತೆ ಮಾಡುವ ತಾಕತ್ತು ಹಾಗೂ ಅಧಿಕಾರ ಎರಡು ನಮಗಿದೆ ಎಂದು ಪರೋಕ್ಷವಾಗಿ ಸಂದೇಶ ರವಾನೆ ಮಾಡಿದ್ದರು.

ಇದೀಗ ರಾಜ್ಯಸರ್ಕಾರಗಳಿಗೆ ಮತ್ತೊಂದು ಬಿಗ್ ಶಾಕ್ ನೀಡಿರುವ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಹಸ್ತಕ್ಷೇಪವಿಲ್ಲದೆ ಪೌರತ್ವ ತಿದ್ದುಪಡಿ ಮಸೂದೆಗೆ ಅರ್ಜಿಗಳನ್ನು ಆನ್ ಲೈನ್ ಮೂಲಕ ತೆಗೆದುಕೊಳ್ಳಲು ನಿರ್ಧಾರ ಮಾಡಿದೆ. ಈ ಮೊದಲು ಯಾರಿಗಾದರೂ ಭಾರತ ದೇಶದ ಪೌರತ್ವ ಬೇಕು ಎಂದರೆ ಮೊದಲು ಜಿಲ್ಲಾಧಿಕಾರಿ ಬಳಿ ತೆರಳಿ ಮನವಿ ಮಾಡಿದ ಬಳಿಕ ಭಾರತೀಯ ಸಂವಿಧಾನದ ಕಾನೂನಿನ ಅಡಿಯಲ್ಲಿ ಹಲವಾರು ಹಂತ ಹಂತವಾಗಿ ಪರಿಶೀಲನೆ ನಡೆಸಿ ಪೌರತ್ವ ನೀಡಲಾಗುತ್ತಿತ್ತು. ಆದರೆ ಹೀಗೆ ಮಾಡುವುದರಿಂದ ರಾಜ್ಯಸರ್ಕಾರ ಹಸ್ತಕ್ಷೇಪ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ ಎಂಬುದನ್ನು ಅರಿತಿರುವ ಕೇಂದ್ರ ಸರ್ಕಾರವು ಸಂಪೂರ್ಣವಾಗಿ ಆನ್ಲೈನ್ನಲ್ಲಿ ಪ್ರಕ್ರಿಯೆಗಳನ್ನು ನಡೆಸಲು ನಿರ್ಧಾರ ಮಾಡಿದೆ. ಇನ್ನು ಮುಂದೆ ಯಾವುದೇ ರಾಜ್ಯ ಸರ್ಕಾರಗಳಾಗಲಿ ಯಾವುದೇ ಹಂತಗಳಲ್ಲಿಯೂ ಪೌರತ್ವ ನೀಡುವಾಗ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ. ಇನ್ನು ವಿದೇಶಿಗರಿಗೆ ಪೌರತ್ವ ನೀಡುವ ಹಕ್ಕು ಭಾರತೀಯ ಸಂವಿಧಾನದ ಪ್ರಕಾರ ಕೇಂದ್ರ ಸರ್ಕಾರಕ್ಕೆ ಇದ್ದು ರಾಜ್ಯ ಸರ್ಕಾರಗಳು ಯಾವುದೇ ಕಾರಣಕ್ಕೂ ಇದನ್ನು ವಿರೋಧ ಮಾಡುವ ಹಕ್ಕು ಹೊಂದಿಲ್ಲ ಎಂದು ಖಡಕ್ ಸಂದೇಶ ರವಾನೆ ಮಾಡಿದ್ದಾಗಿದೆ.