ಮೋದಿ ಬಗ್ಗೆ ‌ ಕಿಡಿಕಾರಿದ ಇಮ್ರಾನ್ ಖಾನ್ ರವರಿಗೆ ಮೊಹಮ್ಮದ್ ಕೈಫ್ ಹೇಳಿದ್ದೇನು ಗೊತ್ತಾ??

ಮೋದಿ ಬಗ್ಗೆ ‌ ಕಿಡಿಕಾರಿದ ಇಮ್ರಾನ್ ಖಾನ್ ರವರಿಗೆ ಮೊಹಮ್ಮದ್ ಕೈಫ್ ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಮೊದಲಿನಿಂದಲೂ ಪಾಕಿಸ್ತಾನ ದೇಶವು ತನ್ನ ಕೆಲಸವನ್ನು ತಾನೇ ನೋಡಿ ಕೊಳ್ಳದೇ ಸದಾ ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸುತ್ತಿರುತ್ತದೆ. ವಿಪರ್ಯಾಸವೆಂದರೆ ಪಾಕಿಸ್ತಾನದ ಹೇಳಿಕೆಗಳಿಗೂ ಕೂಡ ಬೆಂಬಲ ನೀಡುವ ಜನರು ನಮ್ಮ ನಡುವೆಯೇ ಇದ್ದಾರೆ. ಅದರ ಬಗ್ಗೆ ಈಗ ಮಾತು ಬಿಡಿ.

ಅದೇ ರೀತಿ ಎಂದಿನಂತೆ ಪಾಕಿಸ್ತಾನ ದೇಶವು ಇದೀಗ ಭಾರತ ದೇಶದ ಎಲ್ಲೆಡೆ ಸದ್ದು ಮಾಡುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಾದ ವಿಷಯದಲ್ಲಿ ಮೂಗು ತೂರಿಸಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಈ ಕಠಿಣ ಕಾಯ್ದೆಯನ್ನು ವಿರೋಧ ಮಾಡುತ್ತಿರುವ ಪಾಕಿಸ್ತಾನ ದೇಶವು ಮತ್ತೊಮ್ಮೆ ಭಾರತದ ಆಂತರಿಕ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಿದೆ. ಇನ್ನು ಇದರ ಕುರಿತು ಮಾತನಾಡಿರುವ ಪಾಕಿಸ್ತಾನದ ಅಧ್ಯಕ್ಷ ಪೌರತ್ವ ತಿದ್ದುಪಡಿ ಮಸೂದೆ ಇಂದ ಅಲ್ಪಸಂಖ್ಯಾತರಿಗೆ ತೊಂದರೆಯಾಗುತ್ತದೆ ಎಂದು ಬಿಂಬಿಸಲು ಪ್ರಯತ್ನ ಪಟ್ಟು, ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳಬೇಕು ಎಂದು ನಾನು ನರೇಂದ್ರ ಮೋದಿ ಹಾಗೂ ಅವರ ಸರ್ಕಾರಕ್ಕೆ ಹೇಳಿ ಕೊಡುತ್ತೇನೆ ಎಂದು ಹೇಳಿಕೆ ನೀಡಿದ್ದರು.

ಇವರ ಈ ಹೇಳಿಕೆಗೆ ಇದೀಗ ಪ್ರತಿಕ್ರಿಯೆ ನೀಡಿರುವ ಭಾರತ ಕ್ರಿಕೆಟ್ ತಂಡ ಕಂಡ ಅತ್ಯುತ್ತಮ ಫೀಲ್ಡರ್ ಗಳಲ್ಲಿ ಒಬ್ಬರಾಗಿರುವ ಮೊಹಮ್ಮದ್ ಕೈಫ್ ರವರು, ಪಾಕಿಸ್ತಾನ ದೇಶ ನಿರ್ಮಾಣ ವಾದಾಗ ಅಲ್ಲಿ ಶೇಕಡ 20ರಷ್ಟು ಅಲ್ಪಸಂಖ್ಯಾತರಿದ್ದರು.( ಹಿಂದೂ,ಬೌದ್ಧ, ಕ್ರಿಶ್ಚಿಯನ್ ಹಾಗೂ ಸಿಖ್). ಆದರೆ ಇದೀಗ ಕೇವಲ ಶೇಕಡ ಎರಡರಷ್ಟು ಅಲ್ಪಸಂಖ್ಯಾತರು ಮಾತ್ರ ಉಳಿದಿದ್ದಾರೆ. ನಮ್ಮ ಭಾರತ ದೇಶದಲ್ಲಿ ಅಲ್ಪಸಂಖ್ಯಾತ ರಾಗಿರುವ ಮುಸಲ್ಮಾನರ ಸಂಖ್ಯೆ ಕಡಿಮೆಯಾಗಿಲ್ಲ ಬದಲಾಗಿ ಹೆಚ್ಚಾಗಿದೆ. ಅಲ್ಪಸಂಖ್ಯಾತರನ್ನು ಹೇಗೆ ನಡೆಸಿ ಕೊಳ್ಳಬೇಕು ಎಂಬುದನ್ನು ಪಾಕಿಸ್ತಾನ ದಂತಹ ದೇಶದಿಂದ ಕಲಿಯುವ ಅವಶ್ಯಕತೆ ನಮ್ಮ ಭಾರತ ದೇಶಕ್ಕೆ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.