ಕಾಂಗ್ರೆಸ್ ಗೆ ಭಾರೀ ಮುಜುಗರ ! ಅಕ್ರಮ ವಲಸಿಗರ ಮೇಲೆ ಪ್ರೀತಿ ಯಾಕೆ ಎಂಬುದರ ಕುರಿತು ಸತ್ಯ ಒಪ್ಪಿಕೊಂಡ ಕಾಂಗ್ರೆಸ್ ನ ಹಿರಿಯ ನಾಯಕ ! ಹೇಳಿದ್ದೇನು ಗೊತ್ತಾ??

ಕಾಂಗ್ರೆಸ್ ಗೆ ಭಾರೀ ಮುಜುಗರ ! ಅಕ್ರಮ ವಲಸಿಗರ ಮೇಲೆ ಪ್ರೀತಿ ಯಾಕೆ ಎಂಬುದರ ಕುರಿತು ಸತ್ಯ ಒಪ್ಪಿಕೊಂಡ ಕಾಂಗ್ರೆಸ್ ನ ಹಿರಿಯ ನಾಯಕ ! ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ಕೇಂದ್ರ ಸರ್ಕಾರವು ಅಕ್ರಮ ವಲಸಿಗರು ಹೆಚ್ಚಾಗಿ ನೆಲೆಸಿರುವ ರಾಜ್ಯಗಳನ್ನು ಗುರುತಿಸಿ ಎನ್ಆರ್ಸಿ ಯೋಜನೆಯ ಮೂಲಕ ಅಕ್ರಮ ವಲಸಿಗರನ್ನು ತಮ್ಮ ಮಾತೃ ದೇಶಗಳಿಗೆ ಕಳುಹಿಸಲು ನಿರ್ಧಾರ ಮಾಡಿದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಅಸ್ಸಾಮ್ ರಾಜ್ಯದಲ್ಲಿ ಮೊದಲು ಎನ್ಆರ್ಸಿ ಯೋಜನೆ ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ.

ಆದರೆ ಈ ಕಾಯ್ದೆಯ ವಿರುದ್ಧ ಹಲವಾರು ಹೋರಾಟಗಳು ನಡೆಯುತ್ತಿವೆ, ಕೆಲವು ರಾಜ್ಯಗಳಿಗೆ ಈ ಕಾಯ್ದೆಯ ಸಂಬಂಧವಿಲ್ಲ ವಾದರೂ ಏನೋ ತಮ್ಮ ಸಂಬಂಧಿಕರನ್ನು ಕಳೆದು ಕೊಂಡಂತೆ ಅಕ್ರಮ ವಲಸಿಗರನ್ನು ಹೊರ ಹಾಕುವ ಯೋಜನೆಯ ಕುರಿತು ಧ್ವನಿ ಎತ್ತಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷವು ಕೂಡ ಈ ಕಾಯ್ದೆಯನ್ನು ಇಡೀ ದೇಶದಲ್ಲಿ ಬಲವಾಗಿ ವಿರೋಧಿಸುತ್ತಾ ಪ್ರತಿಭಟನೆಗಳನ್ನು ನಡೆಸುತ್ತಿದೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಯಾಕೆ ಅಕ್ರಮ ವಲಸಿಗರ ಮೇಲೆ ಇಷ್ಟೊಂದು ಪ್ರೀತಿ ಎಂದು ಬಿಜೆಪಿ ಪಕ್ಷ ಟೀಕೆ ಮಾಡುತ್ತಿರುವ ಸಂದರ್ಭದಲ್ಲಿಯೇ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸತ್ಯವನ್ನು ಒಪ್ಪಿಕೊಂಡಿದ್ದಾರೆ.

ಹೌದು, ಅಸ್ಸಾಂ ರಾಜ್ಯದ ಗುವಾಹಟಿ ಸಂಸದರಾಗಿರುವ ಕಿರಿಪ್ ಚಾಲಿಹ ರವರು, ನಾನು ಎನ್ಆರ್ಸಿ ಯೋಜನೆಯ ಪರವಾಗಿ ನಿಂತಿದ್ದೇನೆ. ಕಾಂಗ್ರೆಸ್ ಪಕ್ಷದ ಮಾಜಿ ಮುಖ್ಯಮಂತ್ರಿ ಹಿತೆಸ್ವರ್ ಸೈಕಿಯ ರವರು ಅಕ್ರಮ ವಲಸಿಗರನ್ನು ದೇಶದಲ್ಲಿ ಬಿಟ್ಟುಕೊಂಡು ರಾಜ್ಯದಲ್ಲಿ ನೆಲೆಸುವಂತೆ ಮಾಡಿದರು, ಇದಕ್ಕೆಲ್ಲ ಕಾರಣ ಕೇವಲ ರಾಜಕೀಯ ಉದ್ದೇಶ ಎಂದು ಹೇಳಿಕೆ ನೀಡುವ ಮೂಲಕ ಒಮ್ಮೆಲೆ ದೇಶವನ್ನು ಬೆಚ್ಚಿ ಬೀಳಿಸಿದ್ದಾರೆ. ಅಲ್ಲಾ ಸ್ವಾಮಿ, ಕೇವಲ ರಾಜಕೀಯ ಲಾಭ ಗಳಿಗಾಗಿ ಮತ್ತೊಂದು ದೇಶದ ವಲಸಿಗರನ್ನು ಅಕ್ರಮವಾಗಿ ದೇಶದ ಒಳಗಡೆ ಬಿಟ್ಟುಕೊಳ್ಳುತ್ತಾರೆ ಎಂದರೆ ಏನು ಅರ್ಥ?? ದೇಶದ ಭದ್ರತೆಯ ಕುರಿತು ಕಿಂಚಿತ್ತೂ ಯೋಚನೆ ಮಾಡುವ ಆಲೋಚನೆಯೇ ಬಂದಿಲ್ಲವಾಯಿತಾ? ಯಾರೇ ಆಗಲಿ, ಈ ಕುರಿತು ಸಮಗ್ರ ತನಿಖೆ ನಡೆದು ಕಠಿಣ ಶಿಕ್ಷೆಯ ನೀಡಿಲೇ ಬೇಕು ಏನಂತೀರಾ?? ದೇಶ ಮೊದಲು ಉಳಿದದ್ದೆಲ್ಲಾ ಆಮೇಲೆ