ಬಿವೈ ವಿಜಯೇಂದ್ರ ರವರ ವಿರುದ್ಧ ಹೈಕಮಾಂಡ್ ಗೆ ದೂರು ಕೊಟ್ಟ ಬಿಜೆಪಿ ಸಚಿವರು ! ಯಾಕೆ ಗೊತ್ತಾ??

ಬಿವೈ ವಿಜಯೇಂದ್ರ ರವರ ವಿರುದ್ಧ ಹೈಕಮಾಂಡ್ ಗೆ ದೂರು ಕೊಟ್ಟ ಬಿಜೆಪಿ ಸಚಿವರು ! ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ಕಳೆದ ಕೆಲವು ದಿನಗಳ ಹಿಂದಷ್ಟೇ ಜೆಡಿಎಸ್ ಪಕ್ಷದ ಭದ್ರ ಕೋಟೆಯಾದ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿ ವೈ ವಿಜಯೇಂದ್ರ ರವರಿಗೆ ಬಾರಿ ಪ್ರಶಂಸೆಗಳು ವ್ಯಕ್ತವಾಗಿದ್ದವು. ಅಮಿತ್ ಶಾ ರವರು ಕೂಡ ವಿಜಯೇಂದ್ರ ರವರಿಗೆ ದೆಹಲಿಗೆ ಕರೆಸಿ ಕೊಂಡು ಆತಿಥ್ಯ ನೀಡಿದ್ದರು.

ಈ ಎಲ್ಲಾ ವಿದ್ಯಮಾನಗಳು ನಡೆದ ಕೆಲವೇ ಕೆಲವು ದಿನಗಳ ಬಳಿಕ ಇದೀಗ ಇದ್ದಕ್ಕಿದ್ದ ಹಾಗೆ ಬಿಜೆಪಿ ಪಕ್ಷದ ಹಲವಾರು ನಾಯಕರು ಹಾಗೂ ಸಚಿವರು ಬಿ ವೈ ವಿಜಯೇಂದ್ರ ರವರ ವಿರುದ್ಧ ಮುನಿಸಿ ಕೊಂಡಿದ್ದಾರೆ ಎನ್ನಲಾಗಿದೆ. ಮೊದಲಿನಿಂದಲೂ ಬಿ ವೈ ವಿಜಯೇಂದ್ರ ರವರು ಸರ್ಕಾರದ ಕೆಲವೊಂದು ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಆರೋಪವು ಹಲವಾರು ಬಾರಿ ಹೈಕಮಾಂಡ್ ಕದ ತಟ್ಟಿತ್ತು, ಇದೀಗ ಇದೇ ಆರೋಪದ ಮೇಲೆ ಮತ್ತೊಮ್ಮೆ ಹಲವಾರು ಸಚಿವರು ಹೈಕಮಾಂಡ್ ಕದ ತಟ್ಟಿದ್ದಾರೆ.

ಹೌದು, ಬಿ ವೈ ವಿಜಯೇಂದ್ರ ರವರು ಮತ್ತೊಮ್ಮೆ ಸರ್ಕಾರದ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ, ಅದರಲ್ಲಿಯೂ ಉಪ ಚುನಾವಣೆಯಲ್ಲಿ ಗೆಲುವಿನ ನಂತರ ವಿಜಯೇಂದ್ರ ರವರನ್ನು ತಡೆಯುವವರು ಯಾರೂ ಇಲ್ಲದಂತಾಗಿದೆ. ಮುಖ್ಯಮಂತ್ರಿಗಳ ಪುತ್ರ ವಿಜಯೇಂದ್ರ ರವರು ಪಕ್ಷ ಸಂಘಟನೆ ಮಾಡಲಿ ಈ ವಿಷಯದಲ್ಲಿ ಯಾರೂ ಅವರಿಗೆ ಅಡ್ಡ ಬರುವುದಿಲ್ಲ. ಆದರೆ ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಮುಂದಾದರೆ ನಾವು ಸಾರ್ವಜನಿಕರ ಮುಂದೆ ಮುಜುಗರಕ್ಕೆ ಒಳಗಾಗ ಬೇಕಾಗುತ್ತದೆ. ಇದೀಗ ಅವರು ತಂದೆಯ ಜೊತೆ ಕಾಣಿಸುವುದಿಲ್ಲ, ಅದನ್ನು ಹೊರತು ಪಡಿಸಿದರೆ ಉಳಿದೆಲ್ಲವೂ ಹಾಗೆಯೇ ಇದೆ ಆದ್ದರಿಂದ ಈ ಕೂಡಲೇ ಬಿಜೆಪಿ ಪಕ್ಷದ ಹೈಕಮಾಂಡ್ ಇದರ ಕುರಿತು ಗಮನಹರಿಸಬೇಕು ಎಂದು ದೂರು ನೀಡಲಾಗಿದೆ ಎನ್ನುವ ವಿಷಯ ತಿಳಿದುಬಂದಿದೆ.