ಸಿದ್ದುಗೆ ಮರ್ಮಘಾತ ! ಸಿದ್ದು ಗೆ ಬಾರಿ ಗುದ್ದು ನೀಡಿ ಖಡಕ್ ಸಂದೇಶ ರವಾನಿಸಿದ ಸೋನಿಯಾ ಗಾಂಧಿ ಮಾಡಿದ್ದೇನು ಗೊತ್ತಾ?

ಸಿದ್ದುಗೆ ಮರ್ಮಘಾತ ! ಸಿದ್ದು ಗೆ ಬಾರಿ ಗುದ್ದು ನೀಡಿ ಖಡಕ್ ಸಂದೇಶ ರವಾನಿಸಿದ ಸೋನಿಯಾ ಗಾಂಧಿ ಮಾಡಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಕಳೆದ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾದ ಸೋಲನ್ನು ಕಂಡ ಮೇಲೆ ಸಿದ್ದರಾಮಯ್ಯರವರು ಸೋಲಿನ ಹೊಣೆಯನ್ನು ಹೊತ್ತುಕೊಂಡು ಸಿಎಲ್ಪಿ ಹಾಗೂ ವಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ತಮ್ಮ ಬೆಂಬಲಿಗ ಶಾಸಕರ ಮೂಲಕ ರಾಹುಲ್ ಗಾಂಧಿಯವರ ಬಳಿ ಚರ್ಚೆ ಮಾಡುವಂತೆ ಮಾಡಿ ರಾಜೀನಾಮೆ ವಾಪಸ್ ತೆಗೆದುಕೊಳ್ಳಲು ಮನವೊಲಿಸುವ ತಂತ್ರ ರೂಪಿಸಿದ್ದರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.

ಇಷ್ಟೆಲ್ಲಾ ತಂತ್ರಗಳನ್ನು ಹೂಡಿದ ಸಿದ್ದರಾಮಯ್ಯರವರಿಗೆ ಎರಡು ವಿಷಯದಲ್ಲಿ ಒಮ್ಮೆಲೆ ಸೋನಿಯಾಗಾಂಧಿ ರವರು ಶಾಕ್ ನೀಡಿದ್ದಾರೆ. ಮೊದಲಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟವನ್ನು ಡಿಕೆ ಶಿವಕುಮಾರ್ ಅವರಿಗೆ ನೀಡಿದರೇ ಪಕ್ಷದಲ್ಲಿ ತನ್ನ ಪ್ರಾಬಲ್ಯ ಇರುವುದಿಲ್ಲ ಎಂಬುದನ್ನು ಬಲವಾಗಿ ನಂಬಿದ್ದ ಸಿದ್ದರಾಮಯ್ಯ ನವರು ತಮ್ಮ ಬಣ್ಣದ ಬೇರೆ ಯಾವುದಾದರೂ ನಾಯಕರಿಗೆ ಈ ಪಟ್ಟವನ್ನು ದಕ್ಕುವಂತೆ ಮಾಡಬೇಕು ಎಂದು ಲಾಬಿ ನಡೆಸಿದ್ದರು. ಅಷ್ಟೇ ಅಲ್ಲದೆ ತನ್ನ ರಾಜೀನಾಮೆಯನ್ನು ವಾಪಸ್ ಪಡೆಯುವಂತೆ ಹೈಕಮಾಂಡ್ನ ಬಳಿ ತನ್ನದೇ ಬೆಂಬಲಿಗರಿಂದ ಲಾಬಿ ನಡೆಸಿ ಇದೀಗ ಎರಡರಲ್ಲೂ ವಿಫಲರಾಗಿದ್ದಾರೆ.

ಹೌದು ಇದೀಗ ಸೋನಿಯಾ ಗಾಂಧಿ ಅವರು ಖಡಕ್ ಆದೇಶ ಹೊರಡಿಸಿದ್ದು, ಕಾಂಗ್ರೆಸ್ ಪಕ್ಷವು ಕಳೆದ 11 ವರ್ಷದಲ್ಲಿ ಸಿದ್ದರಾಮಯ್ಯರವರಿಗೆ ಎಲ್ಲವನ್ನೂ ನೀಡಿದೆ, ಇದೀಗ ಬದಲಾವಣೆಯ ಸಮಯ. ನಾನು ಎಐಸಿಸಿ ಅಧ್ಯಕ್ಷೆ ಆದಾಗ ದೇಶದ ಎಲ್ಲೆಡೆ ಕಾಂಗ್ರೆಸ್ ಪಕ್ಷ ನಶಿಸುತ್ತಿತ್ತು, ಆದರೂ ಹಲವಾರು ನಾಯಕರನ್ನು ಬದಲಾವಣೆ ಮಾಡಿದೆ, ಅದೇ ಕಾರಣಕ್ಕೆ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಏರಿತು. ಇಲ್ಲಿ ಯಾರು ಪಕ್ಷಕ್ಕೆ ಅನಿವಾರ್ಯವಲ್ಲ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ರವರ ರಾಜೀನಾಮೆ ವಾಪಸ್ ಪಡೆಯುವಂತೆ ಆದೇಶ ಹೊರಡಿಸುವುದು ಇಲ್ಲ. ಎರಡು ರಾಜೀನಾಮೆಗಳನ್ನು ಅಂಗೀಕಾರ ಮಾಡಿಯೇ ತೀರುತ್ತೇವೆ ಎಂದು ಖಡಕ್ ಸಂದೇಶ ರವಾನೆ ಮಾಡಿದ್ದಾರೆ ಹಾಗೂ ಒಕ್ಕಲಿಗರ ನಾಯಕ ಎಂದು ಮುದ್ದಹನುಮೇಗೌಡರ ಹೆಸರು ಪ್ರಸ್ತಾವನೆ ಮಾಡಿದ್ದ ಸಿದ್ದರಾಮಯ್ಯರವರ ಮನವಿಯನ್ನು ಹೈಕಮಾಂಡ್ ಪಕ್ಕಕ್ಕೆ ತಳ್ಳಿ ಹಾಕಿ ಮುಂದಿನ ನಿರ್ಧಾರಕ್ಕಾಗಿ ಹಿರಿಯ ಕಾಂಗ್ರೆಸ್ ನಾಯಕರ ಅಭಿಪ್ರಾಯ ತೆಗೆದುಕೊಳ್ಳಲು ನಿರ್ಧಾರ ಮಾಡಿದೆ.