ಸಿದ್ದು, ಖಾದರ್ ರವರಿಗೆ ಟಾಂಗ್ ನೀಡಿದ ತೇಜಸ್ವಿ ಸೂರ್ಯ ! ಹೇಳಿದ್ದೇನು ಗೊತ್ತಾ?

ಸಿದ್ದು, ಖಾದರ್ ರವರಿಗೆ ಟಾಂಗ್ ನೀಡಿದ ತೇಜಸ್ವಿ ಸೂರ್ಯ ! ಹೇಳಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ CAA ಪೌರತ್ವ ತಿದ್ದುಪಡಿ ಮಸೂದೆಯ ವಿಷಯದಲ್ಲಿ ರಾಜಕೀಯ ನಾಯಕರ ನಡುವೆ ಕಾಳಗ ತಾರಕಕ್ಕೆ ಏರಿದೆ. ಅದರಲ್ಲಿಯೂ ಬೆಂಗಳೂರಿನಲ್ಲಿ ನಡೆದ CAA ಬೆಂಬಲಿತ ಜಾಥಾ ದಲ್ಲಿ ಮಾಡಿದ ಭಾಷಣ ಕಾಂಗ್ರೆಸ್ ಪಕ್ಷದ ನಾಯಕರನ್ನು ಕೆಣಕಿದೆ.

ಅದೇ ಕಾರಣಕ್ಕೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ದಿನೇಶ್ ಗುಂಡೂರಾವ್, ಯು ಟಿ ಖಾದರ್ ಸೇರಿದಂತೆ ಹಲವಾರು ನಾಯಕರು ತೇಜಸ್ವಿ ಸೂರ್ಯ ರವರ ಮೇಲೆ ಟೀಕೆಗಳ ಬಾಣಗಳನ್ನು ಸುರಿಸಿದ್ದಾರೆ. ಈಗ ತೇಜಸ್ವಿ ಸೂರ್ಯ ರವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಯು ಟಿ ಖಾದರ್ ರವರಿಗೆ ಟಾಂಗ್ ನೀಡಿದ್ದಾರೆ. ಮಹಾನಗರ ಜಿಲ್ಲಾ ಬಿಜೆಪಿ ಪಕ್ಷದ ವತಿಯಿಂದ ಆಯೋಜನೆ ಮಾಡಿದ್ದ ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ಸಾಮಾನ್ಯ ಜನಜಾಗೃತಿ ಸಭೆಯಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ ರವರ ಎಂದಿನಂತೆ ತಮ್ಮ ಮಾತುಗಳಿಂದ ಜರಿದರು.

ಪೌರತ್ವ ತಿದ್ದುಪಡಿ ಮಸೂದೆಯ ಕುರಿತು ಸಂಪೂರ್ಣ ಮಾಹಿತಿ ಲಭ್ಯವಿದ್ದರೂ ಸಾಮಾನ್ಯ ನಾಗರಿಕರಲ್ಲಿ ಗೊಂದಲ ಮೂಡಿಸುವಂತಹ ಹೇಳಿಕೆ ನೀಡುತ್ತಿರುವ ನಾಯಕರು ದೇಶ ದ್ರೋಹಿಗಳು, ನೆರೆಯ ರಾಷ್ಟ್ರಗಳಾಗಿರುವ ಪಾಕಿಸ್ತಾನ, ಬಾಂಗ್ಲಾದೇಶ ದೇಶದ ಮುಸ್ಲಿಮರಿಗೆ ಪೌರತ್ವ ನೀಡಬೇಕು ಎಂಬುದು ಕಾಂಗ್ರೆಸ್ ಪಕ್ಷದ ಉದ್ದೇಶವಾಗಿದ್ದರೇ, ಎರಡು ದೇಶಗಳನ್ನು ಭಾರತದ ಒಳಗೆ ಸೇರಿಸಲು ಹೇಳಿ, ಅಖಂಡ ಭಾರತ ನಿರ್ಮಾಣವಾಗಲಿ, 2014 ಇಸವಿಯಿಂದ ಮೊದಲು ಭಾರತ ದೇಶಕ್ಕೆ ವಲಸೆ ಬಂದಿರುವ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನ ದೇಶಗಳಲ್ಲಿ ಅಲ್ಪಸಂಖ್ಯಾತರನ್ನು ಈ ಪೌರತ್ವ ತಿದ್ದುಪಡಿ ಮಸೂದೆ ರಕ್ಷಣೆ ಮಾಡುತ್ತದೆ. ಇದರಿಂದ ಇಲ್ಲಿನ ಮುಸ್ಲಿಮರಿಗೆ ತೊಂದರೆ ಇಲ್ಲ. ಯು ಟಿ ಖಾದರ್, ಸಿದ್ದರಾಮಯ್ಯ ಅವರ ಮಾತುಗಳನ್ನು ಯಾವುದೇ ಮುಸಲ್ಮಾನ್ ಭಾಂದವರು ಕೇಳಬಾರದು, ಇಬ್ಬರಿಗೂ ಮುಸ್ಲಿಮರ ಮೇಲೆ ಕಾಳಜಿ ಇಲ್ಲ ಎಂದು ಹೇಳಿಕೆ ನೀಡಿದರು.