ಇದಪ್ಪ ಘೋಷಣೆ ಅಂದ್ರೆ, ಮಂಗಳೂರು ಪೊಲೀಸರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ ಬಿಎಸ್ವೈ ! ಮಾಡಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಪೌರತ್ವ ತಿದ್ದುಪಡಿ ಕಾಯಿದೆ ಕುರಿತು ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಪ್ರಕರಣದಲ್ಲಿ ಪರಿಹಾರ ಘೋಷಣೆ ಮಾಡಿದ ಬಿಎಸ್ ಯಡಿಯೂರಪ್ಪ ನವರ ವಿರುದ್ಧ ಹಲವಾರು ಜನ ಕಿಡಿಕಾರಿದ್ದರು. ಆದರೆ ಪೊಲೀಸರ ವಿಡಿಯೋ ಬಿಡುಗಡೆ ನಂತರ ಬಳಿಕ ಎಚ್ಚೆತ್ತುಕೊಂಡ ಬಿಎಸ್ ಯಡಿಯೂರಪ್ಪ ನವರು, ತನಿಖೆ ಪೂರ್ಣ ಗೊಳ್ಳುವವರೆಗೂ ಒಂದು ರೂಪಾಯಿ ಬಿಡುಗಡೆ ಮಾಡುವುದಿಲ್ಲ ಎನ್ನುವ ಘೋಷಣೆ ಮಾಡಿದ್ದರು.

ಈ ಮೂಲಕ ಜನಾಭಿಪ್ರಾಯಕ್ಕೆ ಮನ್ನಣೆ ನಡೆದ ಮುಖ್ಯಮಂತ್ರಿ ಎಂದು ಯಡಿಯೂರಪ್ಪ ನವರನ್ನು ಹಾಡಿ ಹೊಗಳಿದ್ದರು. ಇದೇ ವಿಷಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಯಡಿಯೂರಪ್ಪ ನವರಿಗೆ ಪ್ರಶಂಸೆಗಳ ಮಹಾ ಪೂರವೇ ಹರಿದು ಬಂದಿತ್ತು. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಬಿಎಸ್ ಯಡಿಯೂರಪ್ಪ ನವರು ಮಂಗಳೂರಿನಲ್ಲಿ ನಡೆಯ ಬೇಕಾಗಿದ್ದ ಅತಿ ದೊಡ್ಡ ಅವಘಡವನ್ನು ತಡೆದ ಪೊಲೀಸರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ, ಈ ಮೂಲಕ ಮತ್ತೊಮ್ಮೆ ಜನರ ಮನಸ್ಸನ್ನು ಅರ್ಥ ಮಾಡಿಕೊಂಡು ಬಹುಮಾನ ತಲುಪಬೇಕಿದ್ದ ಜಾಗಕ್ಕೆ ತಲುಪಿಸಿದ್ದಾರೆ. ಅಷ್ಟಕ್ಕೂ ನಡೆದದ್ದೇನು ಗೊತ್ತಾ? ತಿಳಿಯಲು ಕೆಳಗಡೆ ಓದಿ.

ಮಂಗಳೂರಿನಲ್ಲಿ ನಡೆಯಬೇಕಿದ್ದ ಭಾರಿ ಅವಘಡವನ್ನು ಯಶಸ್ವಿಯಾಗಿ ಹತ್ತಿಕ್ಕಿದ ಹಿನ್ನಲೆಯಲ್ಲಿ 149 ಪೊಲೀಸರಿಗೆ ಒಟ್ಟು ಬರೋಬ್ಬರಿ 10 ಲಕ್ಷ ರೂಪಾಯಿ ಗಳನ್ನು ಬಹುಮಾನ ವಾಗಿ ಘೋಷಿಸಲಾಗಿದೆ. ಇನ್ನು ಕದ್ರಿ ಪೊಲೀಸ್ ಅಧಿಕಾರಿ ಶಾಂತರಾಮ್ ರವರಿಗೆ 10,000 ನಗದು ಬಹುಮಾನ, ಡಿಎಸ್ಪಿ, ಎಸಿಪಿ ಹಾಗೂ ಪೋಲಿಸ್ ಇನ್ಸ್ಪೆಕ್ಟರ್ ಸೇರಿದಂತೆ 8 ಅಧಿಕಾರಿಗಳಿಗೆ ತಲಾ 50,000 ನಗದು ಬಹುಮಾನವನ್ನು ಘೋಷಣೆ ಮಾಡಲಾಗಿದೆ. ಈ ಮೂಲಕ ಜನರ ಅಭಿಪ್ರಾಯವನ್ನು ಮತ್ತೊಮ್ಮೆ ಅರ್ಥ ಮಾಡಿಕೊಂಡಿರುವ ಮುಖ್ಯಮಂತ್ರಿಗಳಿಗೆ ನಮ್ಮ ತಂಡದ ವತಿಯಿಂದ ವಂದನೆಗಳು.

Post Author: Ravi Yadav