ಸಾಕು ನಿಲ್ಲಿಸಿ, ಸುಖಾಸುಮ್ಮನೆ ಟೀಕೆಗಳು ಬೇಡ ! ಅಸಲಿಗೆ ಮಂಗಳೂರು ಘಟನೆಯ ಪರಿಹಾರದ ಕುರಿತು ಶ್ರೀ ರಾಮುಲು ಹೇಳಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಕೆಲವೇ ಕೆಲವು ಗಂಟೆಗಳ ಹಿಂದಷ್ಟೇ ಮುಖ್ಯಮಂತ್ರಿ ಯಡಿಯೂರಪ್ಪ ನವರು ಭಾರಿ ಜನಾಕ್ರೋಶಕ್ಕೆ ಕಾರಣವಾಗಿದ್ದ ಮಂಗಳೂರು ಪ್ರತಿಭಟನೆಯ ಗೋಲಿಬಾರ್ ಘಟನೆಯ ವಿಚಾರದಲ್ಲಿ ಘೋಷಣೆ ಮಾಡಿದ್ದ 10 ಲಕ್ಷ ರೂಪಾಯಿ ಪರಿಹಾರವನ್ನು ತಡೆ ಹಿಡಿದು ಆದೇಶ ಹೊರಡಿಸಿದ್ದರು. ಬಿ ಸ್ ಯಡಿಯೂರಪ್ಪ ನವರ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆಗಳು ಆರಂಭವಾಗಿವೆ. ಬಹುತೇಕ ಜನರು ಪರಿಹಾರ ವಾಪಸ್ಸು ತೆಗೆದುಕೊಂಡದ್ದೇ ಉತ್ತಮ ಎಂದಿದ್ದಾರೆ.

ಇನ್ನು ಕೆಲವರು ಸರ್ಕಾರದ ನಿರ್ಧಾರದ ವಿರುದ್ಧ ಟೀಕೆಗಳನ್ನು ಆರಂಭಿಸಿದ್ದಾರೆ. ಆದರೆ ಇದೇ ವಿಷಯದಲ್ಲಿ ಶ್ರೀ ರಾಮುಲು ರವರ ಪ್ರತಿಕ್ರಿಯೆಯನ್ನು ತಿರುಚಿ ಪರಿಹಾರ ಕೊಡಲೇಬೇಕು ಎಂದು ಸರ್ಕಾರದ ವಿರುದ್ಧ ಮಾತನಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಇದೇ ಕಾರಣಕ್ಕೆ ಇದೀಗ ಬಿಜೆಪಿ ಪಕ್ಷದ ಕಾರ್ಯಕರ್ತರು ಶ್ರೀ ರಾಮುಲು ರವರ ನಿರ್ಧಾರ ಸರಿ ಇಲ್ಲ ಎಂದರೇ, ತಮ್ಮ ನಾಯಕರು ಈ ಹೇಳಿಕೆ ನೀಡಿದ್ದಾರೆಯೇ ಇಲ್ಲವೋ ಎಂಬುದರ ಬಗ್ಗೆ ವಿಚಾರಿಸಿಕೊಳ್ಳದೇ, ಶ್ರೀ ರಾಮುಲು ಬೆಂಬಲಿಗರು ವಾದ ಮಂಡಿಸಿದ್ದಾರೆ. ಅಷ್ಟಕ್ಕೂ ನಡೆದದ್ದೇನು ಗೊತ್ತಾ? ಸಂಪೂರ್ಣ ಡೀಟೇಲ್ಸ್ ಇಲ್ಲಿದೆ.

ಮೊದಲಿಂದಲೂ ಮಂಗಳೂರಿನಲ್ಲಿ ನಡೆದ ಪ್ರಕರಣಕ್ಕೆ ತನಿಖೆ ನಡಿಸಿ ಪರಿಹಾರ ನೀಡಿ ಎಂಬ ಮಾತುಗಳು ಕೇಳಿಬಂದಿವೆ, ಸರ್ಕಾರ ತನಿಖೆಗೂ ಮೊದಲೇ ಪರಿಹಾರ ಘೋಷಣೆ ಮಾಡಿ ತಪ್ಪು ಮಾಡಿತ್ತು, ಆದರೆ ಇದೀಗ ಮುಖ್ಯಮಂತ್ರಿಗಳೇ ತನಿಖೆ ನಡೆಸಿದ ನಂತರ ನಿರಪರಾಧಿ ಎಂದು ಸಾಭೀತಾದರೇ, ಪರಿಹಾರ ಘೋಷಣೆ ಮಾಡುತ್ತೇವೆ ಎಂದಿದ್ದಾರೆ, ಇದೇ ಮಾತನ್ನು ಆರೋಗ್ಯ ಸಚಿವ ಶ್ರೀ ರಾಮುಲು ಕೂಡ ಹೇಳಿದ್ದಾರೆ. ಹೌದು, ಸರ್ಕಾರ ಈ ಪ್ರಕರಣದಲ್ಲಿ ಪರಿಹಾರ ನೀಡಲೇ ಬೇಕು, ಮೊದಲಿಗೆ ನ್ಯಾಯಾಂಗ ತನಿಖೆ ನಡೆಸಲಿ, ತನಿಖೆಯಲ್ಲಿ ಎಲ್ಲ ಸತ್ಯ ತಿಳಿಯುತ್ತದೆ, ತದ ನಂತರ ಪರಿಹಾರ ಘೋಷಣೆ ಮಾಡಲಿ ಎಂದಿದ್ದಾರೆ. ಆದರೆ ಇವರ ಅರ್ಧ ಮಾತನ್ನು ಬಳಸಿಕೊಂಡು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳ ಬಾಣಗಳನ್ನು ಸುರಿಸುತ್ತಿದ್ದಾರೆ.