ಮಮತಾ ಕೋಟೆಯಲ್ಲಿಯೇ ಆಟ ಆರಂಭಿಸಿ ಗೆಲುವು ಸಾಧಿಸಿದ ಶಾ ! ಮಮತಾಗೆ ಬಿಗ್ ಶಾಕ್.. ನಡೆದ್ದದೇನು ಗೊತ್ತಾ??

ಮಮತಾ ಕೋಟೆಯಲ್ಲಿಯೇ ಆಟ ಆರಂಭಿಸಿ ಗೆಲುವು ಸಾಧಿಸಿದ ಶಾ ! ಮಮತಾಗೆ ಬಿಗ್ ಶಾಕ್.. ನಡೆದ್ದದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಪೌರತ್ವ ತಿದ್ದು ಪಡಿ ಮಸೂದೆ ಹಾಗೂ NRC ವಿರುದ್ಧ ಮೊದಲ ಹೋರಾಟ ಆರಂಭವಾಗಿದ್ದು ಪಶ್ಚಿಮ ಬಂಗಾಳದಲ್ಲಿ ಎಂದು ನಿಮಗೆಲ್ಲರಿಗೂ ತಿಳಿದೇ ಇದೆ. ಇಲ್ಲಿ ಖುದ್ದು ಮುಖ್ಯಮಂತ್ರಿಗಳೇ ಬೆಂಬಲ ನೀಡಿ ಪ್ರಚೋದನೆ ನೀಡಿದ ಕಾರಣ ಹೋರಾಟದ ಕಿಚ್ಚು ಬಹಳ ವೇಗವಾಗಿ ಹಾಗೂ ಅಶಾಂತಿಯ ಮಾರ್ಗದಲ್ಲಿ ನಡೆದಿತ್ತು.

ರೋಹಿಂಗ್ಯಗಳನ್ನು ಹೆಚ್ಚಾಗಿ ತನ್ನ ತೆಕ್ಕೆಯಲ್ಲಿ ಇಟ್ಟಿಕೊಂಡಿರುವ ಪಶ್ಚಿಮ ಬಂಗಾಳದಲ್ಲಿ ಇವರ ಬೆಂಬಲವನ್ನು ಪಡೆದುಕೊಂಡು ಪ್ರತಿಭಟನೆಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋದದ್ದು ಇದೇ ಮಮತಾ. ಇದರ ಬೆನ್ನಲ್ಲೇ ಮಾಧ್ಯಮಗಳನ್ನು ನೋಡಿದರೇ ಬಂಗಾಳದಲ್ಲಿ ತುರ್ತು ಪರಿಸ್ಥಿತಿ ಜಾರಿಯಾದಂತೆ ಭಾಸವಾಗುತಿತ್ತು. ಇದರ ಕುರಿತು ಇಡೀ ಬಂಗಾಳದ ಜನತೆಯು ವಿರೋಧಿಸುತ್ತಿದ್ದಾರೆ ಎಂಬ ಭಾವನೆಗಳನ್ನು ಮಾಧ್ಯಮಗಳು ತೋರಿಸಿದ್ದವು. ಅಷ್ಟೇ ಅಲ್ಲದೇ ಕೇಂದ್ರ ಸರ್ಕಾರಕ್ಕೆ ಸವಾಲುಗಳನ್ನು ಎಸೆಯಲು ಆರಂಭಿಸಿದ ಮಮತಾ ರವರಿಗೆ ಇದೀಗ ಅಮಿತ್ ಶಾ ರವರು ತಕ್ಕ ಪಾಠ ಕಲಿಸಿದ್ದಾರೆ. ಈ ಯೋಜನೆ ಶಾ ರವರದ್ದಾದರೇ ಯಶಸ್ವಿಯಾಗಿ ಪೂರ್ಣ ಗೊಳಿಸಿದ್ದು ಜೆಪಿ ನಡ್ಡಾ. ಅಷ್ಟಕ್ಕೂ ನಡೆದ್ದದೇನು ಗೊತ್ತಾ? ತಿಳಿಯಲು ಕೆಳಗಡೆ ಓದಿ.

ಹೌದು, ಬಂಗಾಳದಲ್ಲಿಯೇ ಮಮತಾರವರಿಗೆ ಸಡ್ಡು ಹೊಡೆಯಲು ನಿರ್ಧಾರ ಮಾಡಿದ ಅಮಿತ್ ಶಾ ರವರಿಗೆ, CAA ವಿರುದ್ಧ ಹೋರಾಟಕ್ಕಾಗಿ ಅಲ್ಲಿಯೇ CAA ಬೆಂಬಲಿಸುವವರನ್ನು ಒಟ್ಟುಗೂಡಿಸಿ ಎಲ್ಲಾ ಅನುಮಾನಗಳಿಗೆ ಬ್ರೇಕ್ ಹಾಕುವುದು ಅನಿವಾರ್ಯವಾಗಿತ್ತು. ಅದರಂತೆಯೇ CAA ಬೆಂಬಲಿಸಿ ಒಂದು ರ್ಯಾಲಿ ನಡೆಸಲು ಬಿಜೆಪಿ ಆದೇಶ ಹೊರಡಿಸಿತು. ಜೆಪಿ ನಡ್ಡಾ ರವರು ಮುಂದಾಳತ್ವವನ್ನು ವಹಿಸಿಕೊಂಡು ರ್ಯಾಲಿ ನಡೆಸಿದರು. ಆದರೆ ಇಲ್ಲಿ ಬಿಜೆಪಿ ಕೂಡ ಊಹಿಸದ ರೀತಿಯಲ್ಲಿ ಲಕ್ಷಾಂತರ ಬೆಂಬಲಿಗರು ಸೇರಿ ರ್ಯಾಲಿ ಯಲ್ಲಿ ಪಾಲ್ಗೊಂಡರು. ಇದರಿಂದ ಎಲ್ಲಾ ಅನುಮಾನಗಳಿಗೆ ಬ್ರೇಕ್ ಬೀಳುವುದಷ್ಟೇ ಅಲ್ಲದೇ, ಪಶ್ಚಿಮ ಬಂಗಾಳದಲ್ಲಿ ರೋಹಿಂಗ್ಯಗಳನ್ನು ಹೊರತು ಪಡಿಸಿ ಉಳಿದ ಜನರ ಅಭಿಪ್ರಾಯ ತೋರಿಸಿದಂತಾಯಿತು. ಕೊನೆಗೂ ಬಿಜೆಪಿ ಅದನ್ನೇ ಮಾಡಿ ತೋರಿಸಿದೆ. ಬಿಜೆಪಿಯ ಈ ನಡೆ ಮಮತಾರಾರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. (ಮೇಲಿನ ಚಿತ್ರಗಳೇ ಸಾಕ್ಷಿ)