ವ್ಹಾ ಮೋದಿ ಕನಸನ್ನು ಜಾರಿಗೆ ತಂದೇ ಬಿಟ್ಟ ಬಿಎಸ್ವೈ ! ಸದ್ದಿಲ್ಲದೆ ಅಕ್ರಮ ವಲಸಿಗರನ್ನು ತಡೆಯಲು ರಾಜ್ಯ ಸರ್ಕಾರ ಮಾಡಿದ್ದೇನು ಗೊತ್ತಾ??

ವ್ಹಾ ಮೋದಿ ಕನಸನ್ನು ಜಾರಿಗೆ ತಂದೇ ಬಿಟ್ಟ ಬಿಎಸ್ವೈ ! ಸದ್ದಿಲ್ಲದೆ ಅಕ್ರಮ ವಲಸಿಗರನ್ನು ತಡೆಯಲು ರಾಜ್ಯ ಸರ್ಕಾರ ಮಾಡಿದ್ದೇನು ಗೊತ್ತಾ??

ದೇಶದ ಹಲವು ರಾಜ್ಯಗಳು ಅಕ್ರಮ ವಲಸಿಗರ ಕುರಿತು ನಡೆಯುತ್ತಿರುವ ಪ್ರತಿಭಟನೆಗೆ ಕೈ ಜೋಡಿಸಿವೆ. ಬಿಜೆಪಿ ಪಕ್ಷವು ಸ್ಪಷ್ಟವಾಗಿ ಎರಡು ಮಸೂದೆಗಳನ್ನು ಜಾರಿಗೆ ತರುತ್ತೇವೆ ಎಂದು ಪ್ರಣಾಳಿಕೆಯಲ್ಲಿ ತಿಳಿಸಿದ ನಂತರವಷ್ಟೇ ಅಧಿಕಾರಕ್ಕೆ ಏರಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಅದೇ ಕಾರಣಕ್ಕಾಗಿ ಪ್ರತಿಭಟನೆಗಳು ನಡೆಯುತ್ತಿದ್ದರೂ ಬಿಜೆಪಿ ಸರ್ಕಾರ ತಲೆಕೆಡಿಸಿಕೊಂಡಿಲ್ಲ.

ಇನ್ನು ರಾಜ್ಯದ ವಿಷಯಕ್ಕೆ ಬಂದರೇ ಬಿ.ಎಸ್ ಯಡಿಯೂರಪ್ಪ ನವರು ಬಹಳ ಸ್ಪಷ್ಟವಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಮಸೂದೆ ಹಾಗೂ ಎನ್ಆರ್ಸಿ ಯೋಜನೆಗಳನ್ನು ಕರ್ನಾಟಕ ರಾಜ್ಯದಲ್ಲಿ ಜಾರಿಗೆ ತಂದು ತೀರುತ್ತೇನೆ, ಯಾವ ಪಕ್ಷಗಳು ವಿರೋಧ ಮಾಡಿದರೂ ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದರು. ಈಗ ಬಿ ಎಸ್ ಯಡಿಯೂರಪ್ಪ ನವರು ಹೇಳಿದ ಮಾತಿಗೆ ಪೂರಕವಾಗಿ ರಾಜ್ಯ ಸರ್ಕಾರ ರಾಜಕೀಯ ನಾಯಕರು ಅಧಿಕಾರಯುತ ಪಾರ್ಟಿ ಬಿಜೆಪಿ ಪಕ್ಷದ ಮೇಲೆ ಹಾಗೂ ಮಂಗಳೂರು ಪೊಲೀಸರ ಮೇಲೆ ಕೆಸರೆರಚಾಟದಲ್ಲಿ ತೊಡಗಿರುವಾಗ ಸದ್ದಿಲ್ಲದೆ ನಿರಾಶ್ರಿತರ ವಿಚಾರಣೆಗಾಗಿ ಭರ್ಜರಿ ತಯಾರಿ ನಡೆಸಿದೆ. ಈ ವಿಷಯವು ಇದೀಗ ಹೊರಬಿದ್ದಿದ್ದು, ವಿಪಕ್ಷಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ರಾಜಧಾನಿ ಬೆಂಗಳೂರಿನ ನೆಲಮಂಗಲ ತಾಲೂಕಿನಲ್ಲಿ ಅಕ್ರಮವಾಗಿ ನೆಲೆಸಿರುವ ಅನ್ಯದೇಶಿ ವಲಸಿಗರನ್ನು ಪತ್ತೆಹಚ್ಚಿ ವಿಚಾರಣೆಗೆ ಒಳಪಡಿಸಿ ತದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲು ಬೃಹತ್ ಕಟ್ಟಡವೊಂದನ್ನು ಸಿದ್ದಪಡಿಸಲಾಗಿದೆ. ಸೊಂಡೆಕೊಪ್ಪ ಪ್ರದೇಶದಲ್ಲಿ ಇರುವ ಈ ಕಟ್ಟಡದಲ್ಲಿ ಆರು ಕೊಠಡಿಗಳು ಸೇರಿದಂತೆ 2 ವಾಚ್ ಟವರ್ ಗಳಿದ್ದು, ಪ್ರವೇಶ ದ್ವಾರದಲ್ಲಿ ಒಂದು ಭದ್ರತಾ ಕೊಠಡಿಯನ್ನು ನಿರ್ಮಾಣ ಮಾಡಲಾಗಿದೆ. ಕಟ್ಟಡದ ಭದ್ರತೆಗಾಗಿ ಸುತ್ತಲೂ 20 ಅಡಿ ಗೋಡೆಯನ್ನು ನಿರ್ಮಾಣ ಮಾಡಲಾಗಿದ್ದು, ಈ ಗೋಡೆಯು ಮುಳ್ಳಿನ ತಂತಿಯನ್ನು ಒಳಗೊಂಡಿದೆ. ಇನ್ನು ಕಟ್ಟಡದ ಒಳಗಡೆ ಅಡುಗೆ ಮನೆ, ಶೌಚಾಲಯ ಹಾಗೂ ಇತರ ವಸ್ತುಗಳನ್ನು ಇಟ್ಟುಕೊಳ್ಳಲು ಪ್ರತ್ಯೇಕ ಕೊಠಡಿಗಳು ಇವೆ. ಒಟ್ಟಿನಲ್ಲಿ ವಿಪಕ್ಷಗಳು ರಾಜ್ಯ ಸರ್ಕಾರವನ್ನು ಟೀಕೆ ಮಾಡುವ ಕೆಲಸದಲ್ಲಿ ನಿರತರಾಗಿದ್ದರೇ, ರಾಜ್ಯ ಸರ್ಕಾರ ಅಕ್ರಮ ವಲಸಿಗರನ್ನು ತಡೆಯಲು ಮಹತ್ವದ ಹೆಜ್ಜೆಯಿಟ್ಟಿದೆ. ಮುಂದಿನ ಜನವರಿ ತಿಂಗಳಲ್ಲಿ ಈ ಕಟ್ಟಡ ಉದ್ಘಾಟನೆ ಯಾಗಲಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನೆಲೆಸಿರುವ ಅಕ್ರಮ ವಲಸಿಗರನ್ನು ಪತ್ತೆಹಚ್ಚಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.