ಸಿಡಿದೆದ್ದ ಶಾಂತ ಸ್ವರೂಪಿ ಶಿವರಾಜ್ ಸಿಂಗ್ ಚೌಹಾನ್ ! ಯಾಕೆ ಮತ್ತು ತಾಳ್ಮೆ ಕಳೆದುಕೊಂಡು ರಾಹುಲ್ಗೆ ಹೇಳಿದ್ದೇನು ಗೊತ್ತಾ??

ಸಿಡಿದೆದ್ದ ಶಾಂತ ಸ್ವರೂಪಿ ಶಿವರಾಜ್ ಸಿಂಗ್ ಚೌಹಾನ್ ! ಯಾಕೆ ಮತ್ತು ತಾಳ್ಮೆ ಕಳೆದುಕೊಂಡು ರಾಹುಲ್ಗೆ ಹೇಳಿದ್ದೇನು ಗೊತ್ತಾ??

ಇದೀಗ ರಾಹುಲ್ ಗಾಂಧಿ ರವರು ತನ್ನ ಹೆಸರಿನ ಜೊತೆ ಸಾರ್ವರ್ಕರ್ ಅವರ ಹೆಸರನ್ನು ತಳುಕು ಹಾಕಿಕೊಂಡು ನೀಡಿರುವ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ವೀರ ಸಾವರ್ಕರ್ ಅವರು ದೇಶಕ್ಕಾಗಿ ಮಾಡಿದ ತ್ಯಾಗವನ್ನು ಯಾರು ಮರೆಯಲು ಸಾಧ್ಯವಿಲ್ಲ, ಆದರೆ ರಾಹುಲ್ ಗಾಂಧಿ ರವರು ಉದಾಹರಣೆ ನೀಡುವ ಸಮಯದಲ್ಲಿ ವೀರ ಸಾವರ್ಕರ್ ಅವರು ಬ್ರಿಟಿಷರ ಕ್ಷಮೆ ಕೇಳಿದ್ದಾರೆ ಎಂದು ಆರೋಪ ಮಾಡಿ ನಾನು ಕ್ಷಮೆ ಕೇಳಲು ವೀರ ಸಾರ್ವರ್ಕರ್ ಅವರಂತೆ ರಾಹುಲ್ ಸಾರ್ವರ್ಕರ್ ಅಲ್ಲ ಬದಲಾಗಿ ನಾನು ರಾಹುಲ್ ಗಾಂಧಿ ಎಂದು ಹೇಳುವ ಮೂಲಕ ವಿವಾದ ಸೃಷ್ಟಿ ಮಾಡಿದರು. ಬಹುಶಹ ತಾವು ರಫೆಲ್ ಯುದ್ಧ ವಿಮಾನ ಹಾಗೂ ಮೋದಿ ಅವರ ವೈಯಕ್ತಿಕ ಟೀಕೆ ಕುರಿತು ಬಹಿರಂಗವಾಗಿ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಕ್ಷಮೆ ಕೇಳಿದ್ದನ್ನು ಮರೆತು ರಾಹುಲ್ ಗಾಂಧಿ ಅವರು ತಮ್ಮ ಜೀವನದಲ್ಲಿಯೇ ಕ್ಷಮೆ ಕೇಳಿಲ್ಲ ಎಂಬುವಂತೆ ಈ ಹೇಳಿಕೆ ನೀಡಿದ್ದಾರೆ.

ಈ ಹೇಳಿಕೆ ಎಷ್ಟು ಚರ್ಚೆಗೆ ಗ್ರಾಸವಾಗಿದೆ ಎಂದರೆ ಸದಾ ಶಾಂತ ಸ್ವರೂಪಿಯಾಗಿರುವ ಶಿವರಾಜ್ ಸಿಂಗ್ ಚೌಹಾನ್ ರವರು ಕೂಡ ಇದೇ ಮೊಟ್ಟ ಮೊದಲ ಬಾರಿಗೆ ತಾಳ್ಮೆ ಕಳೆದುಕೊಂಡಿದ್ದಾರೆ. ಹೌದು ಇದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ಶಿವರಾಜ್ ಸಿಂಗ್ ಚೌಹಾನ್ ರವರು, ನೀವು ಮೊದಲು ಧೈರ್ಯಶಾಲಿ ಯಾಗಿ ತದನಂತರ ವೀರ ಸಾವರ್ಕರ್ ಅವರ ಹೆಸರನ್ನು ನಿಮ್ಮ ಹೆಸರಿನ ಜೊತೆ ಸೇರಿಸಿಕೊಳ್ಳಿ ಎಂದು ತಿರುಗೇಟು ನೀಡಿದ್ದಾರೆ. ಸಾಮಾನ್ಯವಾಗಿ ಸದಾ ಶಾಂತ ರೀತಿಯಲ್ಲಿ ವರ್ತನೆ ಮಾಡುವ ಶಿವರಾಜ್ ಸಿಂಗ್ ಚೌಹಾಣ್ ರವರು ತಮ್ಮ ಪಕ್ಷ ಹಾಗೂ ದೇಶದ ಪರವಾಗಿ ಮಾತ್ರ ಮಾತನಾಡುತ್ತಾರೆ. ವಿರೋಧ ಪಕ್ಷದವರ ಹೇಳಿಕೆಗೆ ಎಂದು ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ, ಆದರೆ ದೇಶಭಕ್ತ ವೀರ ಸಾರ್ವರ್ಕರ್ ರವರ ತಂಟೆಗೆ ಬಂದ ಕಾರಣಕ್ಕೆ ಇದೀಗ ಶಿವರಾಜ್ ಸಿಂಗ್ ಚೌಹಾಣ್ ರವರು ತಾಳ್ಮೆ ಕಳೆದುಕೊಂಡಿದ್ದಾರೆ.