ರಾಹುಲ್ ಹೇಳಿಕೆಗೆ ಟಾಂಗ್ ನೀಡಿದ ಶಿವಸೇನೆ ! ಇದೇ ಮೊದಲ ಬಾರಿಗೆ ಎಚ್ಚೆತ್ತುಕೊಂಡು ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಕಳೆದ ಕೆಲವು ದಿನಗಳಿಂದ ಶಿವಸೇನಾ ಪಕ್ಷದ ಮೇಲೆ ಹಲವಾರು ಟೀಕೆಗಳು ಕೇಳಿಬರುತ್ತಿವೆ. ಅದರಲ್ಲಿಯೂ ತನ್ನ ಸಿದ್ಧಾಂತಗಳಿಗೆ ವಿರುದ್ಧವಾಗಿ ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡ ಕಾರಣ, ಶಿವಸೇನಾ ಪಕ್ಷವು ಎಲ್ಲೆಡೆ ಟೀಕೆಗಳ ಬಾಣಗಳನ್ನು ಎದುರಿಸಬೇಕಾಯಿತು. ಇಂದೂ ಕೂಡ ಶಿವಸೇನೆಯ ಮೇಲೆ ಟೀಕೆಗಳ ಬಾಣಗಳು ನಿಂತಿಲ್ಲ.

ಇತ್ತೀಚೆಗಷ್ಟೇ ನಡೆದ ಪೌರತ್ವ ತಿದ್ದುಪಡೆಯ ವಿಚಾರ ದಲ್ಲಿಯೂ ಕೂಡ ಇದೇ ರೀತಿಯಾಗಿತ್ತು, ಲೋಕಸಭಾ ಕಲಾಪದಲ್ಲಿ ಬಿಜೆಪಿ ಪಕ್ಷದ ಪರವಾಗಿ ಮತ ಚಲಾವಣೆ ಮಾಡಿದ ಶಿವಸೇನ ಪಕ್ಷವು ತದನಂತರ ಮಹಾರಾಷ್ಟ್ರದಲ್ಲಿ ನಮಗೆ ನಾಲ್ಕೈದು ಸಚಿವ ಸ್ಥಾನಗಳು ಮುಖ್ಯವಲ್ಲ ಎಂಬ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸಂದೇಶ ಬಂದ ಕೂಡಲೇ ಸರ್ಕಾರ ಉಳಿಸಿಕೊಳ್ಳುವುದಕ್ಕಾಗಿ ರಾಜ್ಯಸಭಾ ಕಲಾಪದಲ್ಲಿ ಸಭೆಯಿಂದ ಹೊರ ನಡೆದು ಪೌರತ್ವ ತಿದ್ದುಪಡಿ ಮಸೂದೆಗೆ ಬೆಂಬಲ ಸೂಚಿಸಿರಲಿಲ್ಲ. ಇದೀಗ ನಾನು ಕ್ಷಮೆ ಕೇಳಲು ರಾಹುಲ್ ಸಾರ್ವರ್ಕರ್ ಅಲ್ಲ, ನಾನು ರಾಹುಲ್ ಗಾಂಧಿ ಎಂದು ಹೇಳಿಕೆ ನೀಡಿರುವ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ರವರ ವಿರುದ್ಧ ಶಿವಸೇನಾ-ಕಾಂಗ್ರೆಸ್ ಮೈತ್ರಿಯ ರುವಾರಿ ಸಂಜಯ್ ರಾವತ್ ರವರ ಪ್ರತಿಕ್ರಿಯೆ ನೀಡಿದ್ದಾರೆ.

ಹೌದು, ರಾಹುಲ್ ಗಾಂಧಿ ರವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಂಜಯ್ ರಾವತ್ ರವರು ಹಿಂದುತ್ವದ ಸಿದ್ಧಾಂತದ ಬಗ್ಗೆ, ಗೌರವದ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳಲು ನಾವು ಒಪ್ಪುವುದಿಲ್ಲ. ವೀರ ಸಾವರ್ಕರ್ ಅವರು ಕೇವಲ ಮಹಾರಾಷ್ಟ್ರಕ್ಕೆ ಮಾತ್ರವಲ್ಲದೇ, ಇಡೀ ದೇಶಕ್ಕೆ ಒಂದು ವಿಗ್ರಹ ವಿದ್ದಂತೆ. ವೀರ ಸಾವರ್ಕರ್ ಅವರ ಹೆಸರು ದೇಶದ ಬಗ್ಗೆ ಹೆಮ್ಮೆಯನ್ನು ಸೂಚಿಸುತ್ತದೆ, ಜವಾಹರ್ಲಾಲ್ ನೆಹರು ಹಾಗೂ ಮಹಾತ್ಮ ಗಾಂಧಿಯವರ ರೀತಿ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ ಅವರಲ್ಲಿ ವೀರ ಸಾರ್ವರ್ಕರ್ ಕೂಡ ಸೇರುತ್ತಾರೆ. ವೀರ ಸಾರ್ವರ್ಕರ್ ರವರನ್ನು ವಿಗ್ರಹ ಎಂದು ಕರೆದು ಇಡೀ ದೇಶವೇ ಇವರನ್ನು ಪೂಜೆ ಮಾಡಬೇಕು ಎಂದು ಸಂಜಯ್ ರಾವತ್ ಅವರು ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲದೆ ಈ ಕೂಡಲೇ ರಾಹುಲ್ ಗಾಂಧಿ ಅವರು ಕ್ಷಮೆಯಾಚಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.

Post Author: Ravi Yadav