ಕನ್ನಡಿಗ ಸೇರಿದಂತೆ ಈ ಮೂರು ಆಟಗಾರರನ್ನು ಖರೀದಿಸಿದರೇ ಈ ಸಲ ಕಪ್ ನಮ್ದೇ ! ಆ ಆಟಗಾರರು ಯಾರು ಗೊತ್ತಾ?

ಕನ್ನಡಿಗ ಸೇರಿದಂತೆ ಈ ಮೂರು ಆಟಗಾರರನ್ನು ಖರೀದಿಸಿದರೇ ಈ ಸಲ ಕಪ್ ನಮ್ದೇ ! ಆ ಆಟಗಾರರು ಯಾರು ಗೊತ್ತಾ?

ಈ ಬಾರಿ ಹಲವಾರು ಆಟಗಾರರನ್ನು ತಂಡದಿಂದ ಕೈಬಿಟ್ಟಿರುವ ಆರ್ಸಿಬಿ ತಂಡವು ಅಭಿಮಾನಿಗಳಿಗೆ ಈ ಬಾರಿಯಾದರೂ ಗುಡ್ ನ್ಯೂಸ್ ನೀಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಹರಾಜು ಪ್ರಕ್ರಿಯೆ ಆರಂಭವಾಗಲಿದೆ. ಈ ಬಾರಿ ಹೇಗಾದರೂ ಮಾಡಿ ಬಲಿಷ್ಠ ತಂಡವನ್ನು ರಚನೆ ಮಾಡಿಕೊಳ್ಳಬೇಕು ಎಂಬ ಲೆಕ್ಕಾಚಾರದಲ್ಲಿ ಆರ್ಸಿಬಿ ಮ್ಯಾನೇಜ್ಮೆಂಟ್ ತನ್ನದೇ ಆದ ಲೆಕ್ಕಾಚಾರ ಗಳಲ್ಲಿ ತೊಡಗಿಕೊಂಡಿದೆ.

ವಿಶ್ವ ಕ್ರಿಕೆಟ್ ಕಂಡ 2 ಅದ್ಭುತ ಆಟಗಾರರನ್ನು ತನ್ನ ತೆಕ್ಕೆಯಲ್ಲಿ ಇಟ್ಟುಕೊಂಡಿರುವ ಆರ್ಸಿಬಿ ತನ್ನಲ್ಲಿರುವ ಲೋಪಗಳನ್ನು ಸರಿಪಡಿಸಿಕೊಳ್ಳಲು ಬಹಳ ಲೆಕ್ಕಾಚಾರದ ಮೂಲಕ ಈ ಬಾರಿ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕಾದ ಒತ್ತಡದಲ್ಲಿ ಇದೆ. ಹೀಗಿರುವಾಗ ಕ್ರಿಕೆಟ್ ವಿಶ್ಲೇಷಕರ ಪ್ರಕಾರ ಒಂದು ವೇಳೆ ಆರ್ಸಿಬಿ ತಂಡವು ಈ ಮೂವರು ಆಟಗಾರರನ್ನು ಖರೀದಿ ಮಾಡಿದಲ್ಲಿ, ಆರ್ಸಿಬಿ ತಂಡವು ಬಹಳ ಬಲಿಷ್ಠ ತಂಡವಾಗಿ ಹೊರಹೊಮ್ಮಲಿದೆ. ಅಷ್ಟೇ ಅಲ್ಲದೆ ಈ ಸಲ ಕಪ್ ನಮ್ಮದಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ, ಆರ್ಸಿಬಿ ತಂಡದ ಲೆಕ್ಕಾಚಾರ ಕೂಡ ಇದೇ ಆಗಿದೆ. ಮೊದಲಿಗೆ ಹಲವಾರು ವರ್ಷಗಳಿಂದ ಆರ್ಸಿಬಿ ತಂಡದಲ್ಲಿ ಆರಂಭಿಕರ ಕೊರತೆಯಿದೆ, ಕೊಹ್ಲಿ ಆರಂಭಿಕರಾಗಿ ಬರುವುದರಿಂದ ಮಧ್ಯಮ ಕ್ರಮಾಂಕ ಕ್ಷೀಣಿಸುತ್ತದೆ. ಅದೇ ಕಾರಣಕ್ಕಾಗಿ ಇದೀಗ ಕನ್ನಡಿಗ ರಾಬಿನ್ ಉತ್ತಪ್ಪ ರವರ ಮೇಲೆ ಆರ್ಸಿಬಿ ತಂಡ ಕಣ್ಣಿಟ್ಟಿದೆ. ತವರಿನ ಪಿಚ್ ಗುಣವನ್ನು ಬಹಳ ಚೆನ್ನಾಗಿ ತಿಳಿದಿರುವ ರಾಬಿನ್ ಉತ್ತಪ್ಪ ರವರನ್ನು ಖರೀದಿಸಿದರೆ ಆರ್ಸಿಬಿ ತಂಡ ಉತ್ತಮ ಆರಂಭವನ್ನು ಪಡೆಯುವುದರಲ್ಲಿ ಅನುಮಾನವಿಲ್ಲ.

ಇನ್ನು ಮಧ್ಯಮ ಕ್ರಮಾಂಕದಲ್ಲಿ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಅವರನ್ನು ಹೊರತುಪಡಿಸಿ ಉಳಿದ ಯಾವ ಆಟಗಾರರು ಪಂದ್ಯ ಗೆಲ್ಲಿಸಿ ಕೊಡುವುದರಲ್ಲಿ ವಿಫಲರಾಗುತ್ತಿದ್ದಾರೆ. ಅದೇ ಕಾರಣಕ್ಕಾಗಿ ಆಸ್ಟ್ರೇಲಿಯಾದ ಆಲ್-ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ರವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಮೂಲಕ ಮಧ್ಯಮ ಕ್ರಮಾಂಕವನ್ನು ಬಲಿಷ್ಠಗೊಳಿಸುವ ಲೆಕ್ಕಾಚಾರದಲ್ಲಿ ತೊಡಗಿಕೊಂಡಿದೆ. ಅಷ್ಟೇ ಅಲ್ಲದೆ ಕೊನೆಯದಾಗಿ ಉತ್ತಮ ಬೌಲರ್ ನಿರೀಕ್ಷೆಯಲ್ಲಿರುವ ಆರ್ಸಿಬಿ ತಂಡವು ಟೆಸ್ಟ್ ಜಗತ್ತಿನ ನಂಬರ್ ಒನ್ ಬೌಲರ್ ಆಗಿರುವ ಪ್ಯಾಟ್ ಕಮಿನ್ಸ್ ರವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಮೂಲಕ ಉಮೇಶ್ ಯಾದವ್, ಸೈನಿ ಹಾಗೂ ಸಿರಾಜ್ ರವರ ಜೊತೆ ಸೇರಿಸಿಕೊಂಡು ವೇಗದ ಬೌಲಿಂಗ್ ವಿಭಾಗವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಲೆಕ್ಕಾಚಾರದಲ್ಲಿ ತೊಡಗಿಕೊಂಡಿದೆ. ಏನೇ ಆಗಲಿ ಈ ಸಲ ಕಪ್ ನಮ್ದೇ ಎನ್ನುವ ಟ್ರೆಂಡಿಂಗ್ ಈಗಾಗಲೇ ಆರಂಭವಾಗಿರುವ ಕಾರಣ ಈ ಬಾರಿ ಯಾರಾದರೂ ಮ್ಯಾನೇಜ್ಮೆಂಟ್ ಕೊಂಚ ಆಲೋಚನೆ ಮಾಡಿ ಆಟಗಾರರನ್ನು ಖರೀದಿ ಮಾಡಬೇಕು ಎಂಬುದು ಅಭಿಮಾನಿಗಳ ಅಭಿಪ್ರಾಯ.