ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಯಾರ್ಯಾರು ಆಡಲಿದ್ದಾರೆ ಗೊತ್ತಾ??

ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಯಾರ್ಯಾರು ಆಡಲಿದ್ದಾರೆ ಗೊತ್ತಾ??

ವೆಸ್ಟ್ ಇಂಡೀಸ್ ತಂಡದ ವಿರುದ್ಧ ಈಗಾಗಲೇ ಭಾರತ ಕ್ರಿಕೆಟ್ ತಂಡವು ಟಿ-ಟ್ವೆಂಟಿ ಸರಣಿಯನ್ನು ಗೆದ್ದು ಬೀಗಿದೆ. ಬ್ಯಾಟಿಂಗ್ ವಿಭಾಗವು ಅತ್ಯುತ್ತಮ ಫಾರ್ಮ್ ನಲ್ಲಿ ಇದ್ದು, ಏಕದಿನ ಸರಣಿ ಗೆಲ್ಲುವ ಫೇವರಿಟ್ ತಂಡ ಎನಿಸಿಕೊಂಡಿದೆ. ಆದರೆ ಕೆರಿಬಿಯನ್ನರು ಯಾವ ಕ್ಷಣದಲ್ಲಿ ಬೇಕಾದರೂ ಪಂದ್ಯದ ಗತಿಯನ್ನು ಬಹಳ ಸುಲಭವಾಗಿ ಕೆಲವೇ ಕೆಲವು ಓವರ್ಗಳಲ್ಲಿ ಬದಲಾಯಿಸುತ್ತಾರೆ. ಹೀಗಿರುವಾಗ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಕಾದಾಡಲು ಭಾರತ ತಂಡ ತನ್ನದೇ ಆದ ಲೆಕ್ಕಾಚಾರ ಗಳೊಂದಿಗೆ ಆಡುವ 11 ಸಂಭಾವ್ಯ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಶಿಖರ್ ಧವನ್ ಹಾಗೂ ಭುವನೇಶ್ವರ್ ಕುಮಾರ್ ರವರು ಗಾಯಗೊಂಡಿರುವ ಕಾರಣ ಪಂದ್ಯದಿಂದ ಹೊರಗಿದ್ದಾರೆ. ಉಳಿದಂತೆ ತಂಡ ಹೀಗಿದೆ,

ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಆಯ್ಕೆಯಾಗಿದ್ದಾರೆ, ಮಾಯಾಂಕ್ ಅಗರ್ವಾಲ್ ರವರು ಸ್ಥಾನ ಪಡೆಯುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಕೆಎಲ್ ರಾಹುಲ್ ರವರು ಆಯ್ಕೆಯಾಗುವ ಮೂಲಕ ಎಲ್ಲಾ ಚರ್ಚೆಗಳಿಗೆ ಬ್ರೇಕ್ ಬಿದ್ದಿದೆ. ಮೂರನೇ ಕ್ರಮಾಂಕದಲ್ಲಿ ನಾಯಕ ಕೊಹ್ಲಿ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಹಾಗೂ ರಿಷಬ್ ಪಂತ್ ರವರು ಬ್ಯಾಟಿಂಗ್ ಬಲ ಹೆಚ್ಚಿಸಲಿದ್ದಾರೆ. ಆಲ್ ರೌಂಡರ್ ಗಳ ವಿಭಾಗದಲ್ಲಿ ಕೇದಾರ್ ಜಾಧವ್ ಹಾಗೂ ರವೀಂದ್ರ ಜಡೇಜಾ ರವರು ಬಲ ತುಂಬಲಿದ್ದು, ಬೌಲರ್ಗಳ ವಿಭಾಗದಲ್ಲಿ ಯುವ ಬೌಲರ್ ದೀಪಕ್ ಚಹರ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ ಹಾಗೂ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ರವರು ಸ್ಥಾನ ಪಡೆಯಲಿದ್ದಾರೆ. (ಕೊನೆ ಕ್ಷಣದ ಬದಲಾವಣೆಗಳನ್ನು ಹೊರತುಪಡಿಸಿ )