ಅಖಾಡಕ್ಕೆ ಅಮಿತ್ ಶಾ ! NRC, CAB ಜಾರಿಗೊಳಿಸುವುದಿಲ್ಲ ಎಂದು ಬೀಗಿದ ರಾಜ್ಯಗಳಿಗೆ ಅಮಿತ್ ಶಾ ಹೊರಡಿಸಿದ ಆದೇಶ ಏನು ಗೊತ್ತಾ??

ಅಖಾಡಕ್ಕೆ ಅಮಿತ್ ಶಾ ! NRC, CAB ಜಾರಿಗೊಳಿಸುವುದಿಲ್ಲ ಎಂದು ಬೀಗಿದ ರಾಜ್ಯಗಳಿಗೆ ಅಮಿತ್ ಶಾ ಹೊರಡಿಸಿದ ಆದೇಶ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ದೇಶದಲ್ಲಿ ಎಲ್ಲೆಡೆ ಅಕ್ರಮ ರೋಹಿಂಗ್ಯಾ ವಲಸಿಗರನ್ನು ಹೊರಹಾಕುವ NRC ಹಾಗೂ ರಾಷ್ಟ್ರೀಯ ಪೌರತ್ವ ತಿದ್ದುಪಡಿ (CAB) ಮಸೂದೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಹಲವಾರು ವರ್ಷಗಳಿಂದ ಜಾರಿಗೊಳಿಸಲಾಗದ ಯೋಜನೆಗಳನ್ನು ಮೋದಿ ಸರ್ಕಾರ ಅಧಿಕಾರಕ್ಕೆ ಏರಿದ ಕೆಲವೇ ಕೆಲವು ತಿಂಗಳುಗಳಲ್ಲಿ ಜಾರಿಗೊಳಿಸಿ, ರಾಷ್ಟ್ರಪತಿ ಅಂಕಿತವನ್ನು ಹಾಕಿಸಿದೆ. ಹೀಗಿರುವಾಗ ಕೆಲವು ರಾಜ್ಯಗಳು ಈ ಎರಡು ಯೋಜನೆಗಳನ್ನು ವಿರೋಧಿಸುತ್ತಿವೆ.

ಹೌದು, ಕೆಲವೊಂದು ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳು ಹಾಗೂ ಪಶ್ಚಿಮ ಬಂಗಾಳ, ಕೇರಳ ರಾಜ್ಯಗಳು ಈ ಎರಡು ಯೋಜನೆಗಳನ್ನು ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರ ನಮ್ಮ ಮೇಲೆ ಹೇರಲು ಸಾಧ್ಯವಿಲ್ಲ ಎಂದು ಗುಡುಗಿವೆ. ಕೆಲವೊಂದು ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ ನಡೆಯುತ್ತಿದ್ದರೂ ಕೂಡ ಅಲ್ಲಿನ ರಾಜ್ಯ ಸರ್ಕಾರಗಳು ಈ ಯೋಜನೆಗಳು ನಮಗೆ ಬಹಳ ಮುಖ್ಯ ಎಂದು ಜಾರಿಗೊಳಿಸಲು ಸಿದ್ಧವಾಗಿವೆ. ಆದರೆ ಪಶ್ಚಿಮ ಬಂಗಾಳ ಸೇರಿದಂತೆ ಕೇರಳ ಹಾಗೂ ಕಾಂಗ್ರೆಸ್ ಅಧಿಕಾರದಲ್ಲಿರುವ ಕೆಲವು ರಾಜ್ಯಗಳು ಯಾವುದೇ ಕಾರಣಕ್ಕೂ ನಾವು ಈ ಎರಡು ಯೋಜನೆಗಳನ್ನು ನಮ್ಮಲ್ಲಿ ಜಾರಿಗೆ ತರಲು ಬಿಡುವುದಿಲ್ಲ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ಖಡಾ ಖಂಡಿತಾವಾಗಿ ಘೋಷಣೆ ಮಾಡಿವೆ. ಆದರೆ ಈ ರಾಜ್ಯಗಳ ಘೋಷಣೆಯ ನಂತರ ಇದೀಗ ಗೃಹ ಸಚಿವ ಅಮಿತ್ ಶಾ ರವರು ಅಖಾಡಕ್ಕಿಳಿದಿದ್ದಾರೆ.

ಭಾರತದ ಸಂವಿಧಾನದ ಪ್ರಕಾರ ಲೋಕಸಭಾ ಹಾಗೂ ರಾಜ್ಯಸಭಾಗಳಲ್ಲಿ ಅನುಮೋದನೆ ಗೊಂಡು ರಾಷ್ಟ್ರಪತಿ ಅಂಕಿತ ಬಿದ್ದ ಮೇಲೆ ಯಾವುದೇ ಮಸೂದೆಗಳು ಆಗಲಿ ಭಾರತೀಯ ಕಾನೂನು ಗಳಾಗುತ್ತವೆ. ದೇಶದ ಪ್ರತಿಯೊಬ್ಬರು ಕಾನೂನನ್ನು ಗೌರವಿಸಲೇಬೇಕು, ಸಂವಿಧಾನದ ಏಳನೇ ಶೆಡ್ಯೂಲ್ ನ ಪ್ರಕಾರ ಕೇಂದ್ರ ಸರ್ಕಾರ ರೂಪಿಸುವ ಕಾನೂನುನನ್ನು ಎಲ್ಲಾ ರಾಜ್ಯ ಸರ್ಕಾರಗಳು ಪಾಲಿಸಲೇಬೇಕು. ಕೇಂದ್ರ ಸರ್ಕಾರಕ್ಕೆ ರಕ್ಷಣೆ, ರೈಲ್ವೆ, ಪೌರತ್ವ ಹೀಗೆ ಒಟ್ಟು 97 ಅಂಶಗಳಲ್ಲಿ ಕಾನೂನು ರಚಿಸುವ ಅಧಿಕಾರವಿದೆ. ಹೀಗೆ ಕೇಂದ್ರ ಸರ್ಕಾರ ರಚಿಸಿದ ಪ್ರತಿಯೊಂದು ಕಾನೂನುಗಳನ್ನು ರಾಜ್ಯ ಸರ್ಕಾರಗಳು ಪಾಲಿಸಲೇಬೇಕು, ಇಲ್ಲವಾದಲ್ಲಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಮಿತ್ ಶಾ ರವರು ಗೃಹ ಸಚಿವಾಲಯದ ಮೂಲಕ ಉನ್ನತ ಅಧಿಕಾರಿಗಳಿಂದ ರಾಜ್ಯ ಸರ್ಕಾರಕ್ಕೆ ಕಡಕ್ ಸಂದೇಶವನ್ನು ರವಾನೆ ಮಾಡಿದ್ದಾರೆ. ಒಟ್ಟಿನಲ್ಲಿ ಈ ಕಾನೂನಿನ ಪ್ರಕಾರ ಒಂದು ವೇಳೆ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ಆದೇಶಗಳನ್ನು ಪಾಲಿಸದೇ ಇದ್ದಲ್ಲಿ ಭಾರತೀಯ ಸೇನೆಯನ್ನು ಜಮಾವಣೆ ಮಾಡಿ ಅಲ್ಲಿನ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಬಹುದಾಗಿದೆ.