ನೂತನ ಶಾಸಕ ಅರುಣ್ ಕುಮಾರ್ ವಿಧಾನಸೌಧಕ್ಕೆ ಮೊದಲ ಬಾರಿ ಭೇಟಿ ನೀಡಿದಾಗ ಮಾಡಿದ್ದೇನು ಗೊತ್ತಾ?? ಭಾರೀ ಪ್ರಶಂಸೆಗೆ ಕಾರಣವಾದ ಶಾಸಕರ ನಡೆ

ನೂತನ ಶಾಸಕ ಅರುಣ್ ಕುಮಾರ್ ವಿಧಾನಸೌಧಕ್ಕೆ ಮೊದಲ ಬಾರಿ ಭೇಟಿ ನೀಡಿದಾಗ ಮಾಡಿದ್ದೇನು ಗೊತ್ತಾ?? ಭಾರೀ ಪ್ರಶಂಸೆಗೆ ಕಾರಣವಾದ ಶಾಸಕರ ನಡೆ

ನಮಸ್ಕಾರ ಸ್ನೇಹಿತರೇ, ನೀವು ನಾಲ್ಕು ಜನರನ್ನು ಪ್ರತಿ ನಿಧಿಸುವ ನಾಯಕರಾಗಿದ್ದೀರ ಎಂದರೇ ಆ ಕುರ್ಚಿಗೆ ಒಂದು ಮಹತ್ವ ಇರುತ್ತದೆ. ಜನ ನಾಯಕನಾಗಿ ಆಯ್ಕೆಯಾಗುವುದು ಅಷ್ಟು ಸುಲಭದ ಕೆಲಸವಲ್ಲ, ಲಕ್ಷಾಂತರ ಜನ ನಿಮ್ಮನ್ನು ಹಾಗೂ ನಿಮ್ಮ ವ್ಯಕ್ತಿತ್ವವನ್ನು ನಂಬಿದ ನಂತರ ನೀವು ಜನ ನಾಯಕನಾಗಿ ಆಯ್ಕೆಯಾಗುತ್ತೀರೀ. ಅದರಲ್ಲಿಯೂ ಒಂದು ಕ್ಷೇತ್ರಕ್ಕೆ ಶಾಸಕರಾಗಬೇಕು ಎಂದರೇ ಸುಲಭದ ಮಾತಲ್ಲ.

ಲಕ್ಷಾಂತರ ಜನರು ಇರುವ ಕ್ಷೇತ್ರದಿಂದ ನೀವು ಶಾಸಕರಾಗಿದ್ದೀರಾ ಎಂದರೇ ನೀವು ಲಕ್ಷಾಂತರ ಜನರನ್ನು ಸರ್ಕಾರದ ಮುಂದೆ ಪ್ರತಿನಿಧಿಸುವ ಜನ ಪ್ರತಿನಿಧಿ. ಇನ್ನು ಈ ಎಲ್ಲಾ ಜನರ ಸಮಸ್ಯೆಯನ್ನು ಹಾಗೂ ಇಡೀ ಕ್ಷೇತ್ರದ ಅಭಿವೃದ್ಧಿಯ ಜವಾಬ್ದಾರಿ ನಿಮ್ಮ ಮೇಲೆ ಇರುತ್ತದೆ. ಪ್ರತಿಯೊಂದು ಸಮಸ್ಯೆಗಳನ್ನು ಹಾಗೂ ಅಭಿವೃದ್ಧಿಯ ಕಾರ್ಯಗಳನ್ನು ವಿಧಾನಸೌಧ ಎಂಬ ದೇಗುಲಕ್ಕೆ ತೆಗೆದುಕೊಂಡು ಹೋಗಿ ಸರ್ಕಾರದ ಬಳಿ ವಾದ ಮಂಡಿಸಿ ಎಲ್ಲಾ ಸವಾಲುಗಳನ್ನು ಗೆದ್ದು ಕ್ಷೇತ್ರ ಅಭಿವೃದ್ಧಿ ಮಾಡಬೇಕಾಗಿರುತ್ತದೆ. ಅದೇ ಕಾರಣಕ್ಕೆ ಸರ್ಕಾರಿ ಕೆಲಸ ದೇವರ ಕೆಲಸ ಎನ್ನುತ್ತಾರೆ, ಇದೇ ಕಾರಣಕ್ಕಾಗಿ ನರೇಂದ್ರ ಮೋದಿರವರು ತಾವು ಪ್ರಧಾನಿಯಾಗಿ ಸಂಸತ್ ಎಂಬ ದೇಗುಲಕ್ಕೆ ಪಾದರ್ಪಣೆ ಮಾಡುವಾಗ ಮಂಡಿಯೂರಿ ನಮಸ್ಕರಿಸಿ ಪ್ರವೇಶ ಮಾಡಿದ್ದರು.

ಇದನ್ನು ಕಂಡ ತೇಜಸ್ವಿ ಸೂರ್ಯ ರವರು ಕೂಡ ತಾವು ಮೊಟ್ಟ ಮೊದಲ ಬಾರಿಗೆ ಸಂಸತ್ ಪ್ರವೇಶ ಮಾಡುವಾಗ, ಮಂಡಿಯೂರಿ ನಮಸ್ಕರಿಸಿ ಸಂಸತ್ ಪ್ರವೇಶ ಮಾಡಿದ್ದರು. ಇದೀಗ ಇವರ ಹಾದಿಯಲ್ಲಿಯೇ ಇದೇ ಮೊಟ್ಟ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ರಾಣಿಬೆನ್ನೂರು ಕ್ಷೇತ್ರದ ನೂತನ ಶಾಸಕ ಅರುಣ್ ಕುಮಾರ್ ರವರು ತಮ್ಮ ಬೆಂಬಲಿಗರೊಂದಿಗೆ ಬೆಂಗಳೂರಿಗೆ ಆಗಮಿಸಿ ಮುಖ್ಯಮಂತ್ರಿ ಗಳನ್ನು ಭೇಟಿ ಮಾಡಿದ ನಂತರ ವಿಧಾನಸೌಧಕ್ಕೆ ತೆರಳಿದ್ದರು. ಆಗ ಮೊಟ್ಟ ಮೊದಲ ಬಾರಿಗೆ ಶಾಸಕನಾಗಿ ವಿಧಾನಸೌಧ ಮಾಡುವಾಗ ಮಂಡಿಯೂರಿ ನಮಸ್ಕಾರ ಮಾಡಿದ್ದಾರೆ, ಶಾಸಕರ ಈ ನಡಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅರುಣ್ ಕುಮಾರ್ ರವರು ವಿಧಾನಸೌಧವೂ ಒಂದು ದೇಗುಲವಿದ್ದಂತೆ, ಮೊದಲ ಬಾರಿಗೆ ನನ್ನ ಕ್ಷೇತ್ರದ ಜನರು ಶಾಸಕರಾಗಿ ಆಯ್ಕೆ ಮಾಡಿದ್ದಾರೆ. ಕ್ಷೇತ್ರದ ಪ್ರತಿಯೊಬ್ಬರ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡುತ್ತೇನೆ. ಹೀಗಾಗಿ ಈ ದೇವಾಲಯಕ್ಕೆ ಶಿರಬಾಗಿ ನಮಸ್ಕರಿಸಿ ಪ್ರವೇಶ ಮಾಡಿದ್ದಾಗಿ ಹೇಳಿದ್ದಾರೆ.