ಬಾಳ ಠಾಕ್ರೆ, ವಾಜಪೇಯಿ ಅವರನ್ನು ನೆನೆದ ಶಿವಸೇನೆ ! ಬಿಜೆಪಿ ಪಕ್ಷಕ್ಕೆ ಹೇಳಿದ್ದೇನು ಗೊತ್ತಾ??

ಬಾಳ ಠಾಕ್ರೆ, ವಾಜಪೇಯಿ ಅವರನ್ನು ನೆನೆದ ಶಿವಸೇನೆ ! ಬಿಜೆಪಿ ಪಕ್ಷಕ್ಕೆ ಹೇಳಿದ್ದೇನು ಗೊತ್ತಾ??

ಇದೀಗ ಶಿವಸೇನ ಪಕ್ಷವು ಮಹಾರಾಷ್ಟ್ರ ರಾಜ್ಯದಲ್ಲಿ ತನ್ನ ಸರ್ಕಾರವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಹಲವಾರು ಕಡೆ ಈಗಾಗಲೇ ತನ್ನ ಸಿದ್ಧಾಂತ ಹಾಗೂ ನಡೆಗಳಿಗೆ ವಿರುದ್ಧವಾಗಿಯೇ ನಡೆಯುತ್ತಿದೆ. ಇತ್ತೀಚೆಗಷ್ಟೇ ಲೋಕಸಭಾ ಕಲಾಪದಲ್ಲಿ ಪೌರತ್ವ ತಿದ್ದುಪಡಿ ಮಸೂದೆಯ ಪರವಾಗಿ ಮತ ಚಲಾವಣೆ ಮಾಡಿದ್ದ ಶಿವಸೇನಾ ಪಕ್ಷವು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಿಂದ ಆದೇಶ ಬಂದ ತಕ್ಷಣ ತನ್ನ ನಿಲುವನ್ನು ಬದಲಾವಣೆ ಮಾಡಿಕೊಂಡು ಪೌರತ್ವ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಮಂಡನೆಯಾದಾಗ ಮತದಾನ ಮಾಡದೇ ಮಸೂದೆಗೆ ವಿರೋಧ ವ್ಯಕ್ತಪಡಿಸಿ ಕಲಾಪದಿಂದ ಹೊರನಡೆದಿತ್ತು. ಇದರಿಂದ ತಾನು ಹಿಂದುತ್ವದ ವಾದಿ ಎಂದು ರಾಜಕೀಯ ಮಾಡುವ ಶಿವಸೇನಾ ಪಕ್ಷವು ತನ್ನ ಸಿದ್ಧಾಂತಗಳಿಗೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ ಎಂಬ ಟೀಕೆಗಳು ಕೇಳಿಬಂದಿದ್ದವು.

ಈ ಎಲ್ಲಾ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿರುವ ಶಿವಸೇನಾ ಪಕ್ಷದ ಹಿರಿಯ ನಾಯಕ ಸಂಜಯ್ ರಾವತ್ ರವರು, ನಾವು ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿದ್ದೇವೆ. ಆದರೆ ಇದರಿಂದ ನಾವು ಹಿಂದುತ್ವದ ಬದ್ಧತೆ ಹಾಗೂ ದೇಶಭಕ್ತಿಯನ್ನು ಸಾಬೀತು ಮಾಡುವು ಸಂದರ್ಭ ಇಲ್ಲ, ಬಿಜೆಪಿ ಪಕ್ಷವು ಮಸೂದೆಯನ್ನು ಬೆಂಬಲಿಸದೇ ಇರುವವರು ಪಾಕಿಸ್ತಾನದ ಭಾಷೆಯಲ್ಲಿ ಮಾತನಾಡುತ್ತಾರೆ ಎಂಬ ಹೇಳಿಕೆ ನೀಡಿದೆ. ಆದರೆ ಹಿಂದುತ್ವ ಹಾಗೂ ದೇಶಭಕ್ತಿಯನ್ನು ಸಾಬೀತು ಮಾಡುವುದಕ್ಕೆ ನನಗೆ ಪ್ರಮಾಣಪತ್ರ ಅಗತ್ಯವಿಲ್ಲ, ಬಿಜೆಪಿ ಪಕ್ಷದ ನಾಯಕರು ಹಾಜರಾಗುವ ಹಿಂದುತ್ವದ ಶಾಲೆಗೆ ಶಿವಸೇನಾ ಪಕ್ಷವು ಹೆಡ್ ಮಾಸ್ಟರ್. ಬಾಳಾ ಠಾಕ್ರೆ, ಅಟಲ್ ಬಿಹಾರಿ ವಾಜಪೇಯಿ ಹಾಗೂ ಶಾಮ್ ಪ್ರಸಾದ್ ಮುಖರ್ಜಿ ಅವರೆಲ್ಲರೂ ನಮ್ಮ ಶಾಲೆಯ ಹೆಡ್ ಮಾಸ್ಟರ್ ಗಳು, ಇದೇ ಶಾಲೆಗೆ ಇದೀಗ ಬಿಜೆಪಿ ನಾಯಕರು ಹಾಜರಾಗುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.