ಬಿಜೆಪಿ ಯುವ ನಾಯಕ ವಿಜಯೇಂದ್ರ ರವರಿಗೆ ಕುಲಾಯಿಸಿದ ಅದೃಷ್ಟ ! ನಡೆದ್ದದ್ದೇನು ಗೊತ್ತಾ?

ಇದೀಗ ಹಲವಾರು ವರ್ಷಗಳಿಂದ ಮಂಡ್ಯ ಜಿಲ್ಲೆಯಲ್ಲಿ ತನ್ನ ಅಸ್ತಿತ್ವವನ್ನು ಪಡೆಯಲು ಹೆಣಗಾಡುತ್ತಿದ್ದ ಬಿಜೆಪಿ ಪಕ್ಷವು ಕೊನೆಗೂ ಮಂಡ್ಯ ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಅರಳಿಸುವುದರಲ್ಲಿ ಯಶಸ್ವಿಯಾಗಿದೆ. ಇದೇ ಮೊದಲ ಬಾರಿಗೆ ಇಲ್ಲಿ ಗೆಲುವು ಕಂಡಿರುವ ಕಾರಣ ಹೈ ಕಮಾಂಡ್ ಫುಲ್ ಕುಶ್ ಆಗಿದೆ.

ಹೌದು, ಕೆ ರ್ ಪೇಟೆಯಲ್ಲಿ ಜೆಡಿಎಸ್ ಪಕ್ಷದಿಂದ ಹೊಲಸೆ ಬಂದಿರುವ ಅಭ್ಯರ್ಥಿಯನ್ನು ಜೆಡಿಎಸ್ ಭದ್ರಕೋಟೆಯಲ್ಲಿಯೇ ಸೋಲಿಸುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಆದರೆ ಬಿಜೆಪಿ ಪಕ್ಷದ ಯುವ ನಾಯಕರಾದ ವಿಜಯೇಂದ್ರ , ಶಾಸಕ ಪ್ರೀತಂ ಗೌಡ ಹಾಗೂ ಉಪ ಮುಖ್ಯ ಮಂತ್ರಿ ಅಶ್ವಥ್ ನಾರಾಯಣ ರವರ ಪರಿಶ್ರಮದಿಂದ ಬಿಜೆಪಿ ಪಕ್ಷವು ಮಂಡ್ಯ ಜಿಲ್ಲೆಯಲ್ಲಿ ಇಂದು ಗೆದ್ದು ಬೀಗಿದೆ. ಅದೇ ಕಾರಣಕ್ಕಾಗಿ ಇದೀಗ ವಿಜಯೇಂದ್ರ ರವರ ಅದೃಷ್ಟ ಕುಲಾಯಿಸಿದಂತೆ ಕಾಣುತ್ತಿದೆ.

ಕಳೆದ ಚುನಾವಣೆಯಲ್ಲಿ ವರುಣ ಕ್ಷೇತ್ರದಿಂದ ಗೆಲ್ಲುವ ಫೇವರಿಟ್ ಆಗಿದ್ದರೂ ಕೂಡ ಬಿಜೆಪಿ ಪಕ್ಷದ ಹೈಕಮಾಂಡ್ ಇವರಿಗೆ ಟಿಕೆಟ್ ನೀಡಿರಲಿಲ್ಲ. ಆದರೆ ಇವರು ಇದೀಗ ಪ್ರಚಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕೆ ರ್ ಪೇಟೆಯಲ್ಲಿ ಗೆಲ್ಲಿಸಿರುವ ಕಾರಣ ಹೈಕಮಾಂಡ್ ಫುಲ್ ಖುಷಿಯಾಗಿದೆ. ಅದೇ ಕಾರಣಕ್ಕೆ ಇದೀಗ ಬಿಜೆಪಿ ಪಕ್ಷದ ಹಿರಿಯ ನಾಯಕ ಹಾಗೂ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ರವರು ತಮ್ಮ ಬ್ಯುಸಿ ಷೆಡ್ಯೂಲ್ ನಲ್ಲಿಯೂ ದೆಹಲಿಗೆ ಬಂದು ಭೇಟಿಯಾಗುವಂತೆ ಬುಲಾವ್ ನೀಡಿದ್ದಾರೆ. ವಿಜಯೇಂದ್ರ ರವರಿಗೆ ಕರೆ ಮಾಡಿರುವ ಅಮಿತ್ ಶಾ ರವರು, ದೆಹಲಿಗೆ ಕೂಡ ಬಂದು ಸಂಜೆ ಮಾತುಕತೆ ನಡೆಸಲು ಹೇಳಿದ್ದಾರೆ. ಇನ್ನು ಪಕ್ಷದಲ್ಲಿಯೂ ವಿಜಯೇಂದ್ರ ರವರಿಗೆ ಉನ್ನತ ಮಟ್ಟದ ಜವಾಬ್ದಾರಿ ನೀಡುವ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದು ಪಕ್ಷದ ಮೂಲ ಮಾಹಿತಿಗಳಿಂದ ತಿಳಿದು ಬಂದಿದೆ.

Post Author: Ravi Yadav