ಶರತ್ ಬಚ್ಚೇಗೌಡ ರವರಿಗೆ ಬಿಗ್ ಶಾಕ್ ನೀಡಿದ ಬಿಎಸ್ವೈ !

ಇದೀಗ ರಾಜ್ಯದಲ್ಲಿ ಚುನಾವಣೆ ಫಲಿತಾಂಶದ ನಂತರ ಖಾತೆ ಹಂಚಿಕೆಯ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ನವರು ನಿರತರಾಗಿದ್ದಾರೆ. ಯಾವ ಶಾಸಕರಿಗೆ ಯಾವ ಖಾತೆ ಹಂಚಬೇಕು ಹಾಗೂ ಮುಂದಿನ ಯೋಜನೆ ಯಾವ ರೀತಿ ಇರಬೇಕು ಎನ್ನುವ ಲೆಕ್ಕಾಚಾರದಲ್ಲಿ ತೊಡಗಿಕೊಂಡಿರುವ ಯಡಿಯೂರಪ್ಪನವರು ಇದೀಗ ತಮ್ಮ ಗಮನವನ್ನು ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಬಂದಿರುವ ಶರತ್ ಬಚ್ಚೇಗೌಡ ರವರ ಕಡೆ ಹರಿಸಿದ್ದಾರೆ. ಬಿಜೆಪಿ ಪಕ್ಷವು ವಲಸೆ ಬಂದ ಶಾಸಕರಿಗೆ ಟಿಕೆಟ್ ನೀಡಿದ ಬಹುತೇಕ ಕ್ಷೇತ್ರಗಳಲ್ಲಿ ಯಾವುದೇ ಬಂಡಾಯ ಕಾಣಿಸಿರಲಿಲ್ಲ. ಆದರೆ ಹೊಸಪೇಟೆಯಲ್ಲಿ ತಾನು ಒಬ್ಬ ಸಂಸದರ ಮಗ ಎಂಬುದನ್ನು ಮರೆತು ಶರತ್ ಬಚ್ಚೇಗೌಡ ರವರು ಬಿಜೆಪಿ ಪಕ್ಷದ ಹಲವಾರು ನಾಯಕರ ಮನವೊಲಿಕೆಯ ಪ್ರಯತ್ನಕ್ಕೆ ಕೂಡ ಜಗ್ಗದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುನಾವಣೆಯಲ್ಲಿ ಗೆದ್ದು ಬೀಗಿದ್ದಾರೆ.

ಇದರಿಂದ ಕೆಂಡಾ ಮಂಡಲವಾಗಿರುವ ಬಿಜೆಪಿ ಪಕ್ಷದ ಅಭ್ಯರ್ಥಿ ಎಂ ಟಿ ಬಿ ನಾಗರಾಜ್ ರವರು ಒಂದು ಕಡೆ ಸಂಸದ ಬಚ್ಚೇಗೌಡ ರವರನ್ನು ಬಿಜೆಪಿ ಪಕ್ಷವು ಉಚ್ಛಾಟನೆ ಮಾಡಿ ಬುದ್ಧಿ ಕಲಿಸಬೇಕು ಎಂದು ಒತ್ತಾಯ ಮಾಡುತ್ತಿದ್ದರೆ, ಮತ್ತೊಂದು ಕಡೆ ಶರತ್ ಬಚ್ಚೇಗೌಡ ರವರು ಬಿಜೆಪಿ ಪಕ್ಷ ಸೇರಿಕೊಳ್ಳುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಇದನ್ನು ಕಂಡು ಮತ್ತಷ್ಟು ಕೆಂಡಾ ಮಂಡಲವಾದ ಎಂ ಟಿ ಬಿ ನಾಗರಾಜ್ ಅವರು ಬಿಎಸ್ವೈ ರವರ ಕದ ತಟ್ಟಿದ್ದರು. ಇವರ ಮನವಿಗೆ ಸ್ಪಂದನೆ ನೀಡಿರುವ ಯಡಿಯೂರಪ್ಪ ನವರು ಪಕ್ಷದ ಮಾತಿಗೆ ಯಾವುದೇ ಮನ್ನಣೆ ನೀಡದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಗೆದ್ದಿರುವ ಶರತ್ ಬಚ್ಚೇಗೌಡ ರವರು ಯಾವುದೇ ಕಾರಣಕ್ಕೂ ನಾನು ಬಿಜೆಪಿ ಪಕ್ಷದಲ್ಲಿ ಇರುವವರೆಗೂ ಪಕ್ಷದ ಒಳಗಡೆ ಮತ್ತೊಮ್ಮೆ ಪ್ರವೇಶ ಮಾಡಲು ಬಿಡುವುದಿಲ್ಲ ಎಂದು ಗುಡುಗಿದ್ದಾರೆ. ಈ ಮೂಲಕ ಗೆದ್ದ ಬಳಿಕ ಬಿಜೆಪಿ ಪಕ್ಷದ ಸೇರ್ಪಡೆಯ ಕನಸಿನಲ್ಲಿ ಇದ್ದ ಶರತ್ ಬಚ್ಚೇಗೌಡರವರ ಕನಸು ನುಚ್ಚುನೂರಾಗಿದೆ.

Post Author: Ravi Yadav