ಪೌರತ್ವ ತಿದ್ದುಪಡಿ ಮಸೂದೆ, ರಾಜ್ಯಸಭೆಯಲ್ಲಿ ಚಾಣಕ್ಯನ ಆಟ ಶುರು, ವಿಪಕ್ಷಗಳಿಗೆ ಬಿಗ್ ಶಾಕ್ ! ನಡೆದ್ದದೇನು ಗೊತ್ತಾ?

ಪೌರತ್ವ ತಿದ್ದುಪಡಿ ಮಸೂದೆ, ರಾಜ್ಯಸಭೆಯಲ್ಲಿ ಚಾಣಕ್ಯನ ಆಟ ಶುರು, ವಿಪಕ್ಷಗಳಿಗೆ ಬಿಗ್ ಶಾಕ್ ! ನಡೆದ್ದದೇನು ಗೊತ್ತಾ?

ಇದೀಗ ಚಾಣಕ್ಯನ ರಾಜಕೀಯದಾಟ ಮತ್ತೊಮ್ಮೆ ಆರಂಭವಾಗಿದೆ. ಹೌದು, ಐತಿಹಾಸಿಕ ಮಸೂದೆಯನ್ನು ಮಂಡಿಸುತ್ತಿರುವ ಅಮಿತ್ ಶಾ ರವರು ಇದೀಗ ಮತ್ತೊಮ್ಮೆ ತಮ್ಮ ರಾಜಕೀಯ ತಂತ್ರಗಾರಿಕೆಯನ್ನು ಬಳಸಿಕೊಂಡು ಐತಿಹಾಸಿಕ ಮಸೂದೆಯನ್ನು ರಾಜ್ಯಸಭೆಯಲ್ಲಿ ಬಿಲ್ ಪಾಸ್ ಮಾಡಿಸುವ ಹಠದೊಂದಿಗೆ ಅಖಾಡಕ್ಕೆ ಇಳಿದಿದ್ದಾರೆ. ಅಮಿತ್ ಶಾ ರವರ ಈ ನಡೆ ವಿರೋಧ ಪಕ್ಷಗಳಿಗೆ ಸೋಲುಣಿಸುವುದು ಖಚಿತವಾಗಿದೆ. ಅಷ್ಟಕ್ಕೂ ನಡೆಯುತ್ತಿರುವುದಾದರೂ ಏನು ಗೊತ್ತಾ?

ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಎರಡನೇ ಬಾರಿಗೆ ಅಧಿಕಾರಕ್ಕೆ ಏರಿದ ಮೇಲೆ ಹಲವಾರು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡು ಬಹಳ ವೇಗವಾಗಿ ಮುನ್ನುಗುತ್ತಿದೆ. ಅಷ್ಟೇ ಅಲ್ಲದೇ, ಹಲವಾರು ಅಭಿವೃದ್ಧಿ ಯೋಜನೆಗಳು, ರಕ್ಷಣಾ ಒಪ್ಪಂದಗಳು ಹೀಗೆ ಒಟ್ಟಿನಲ್ಲಿ ಮೊದಲ 5 ವರ್ಷದ ಅಧಿಕಾರದ ಅವಧಿಯ ವೇಗಕ್ಕಿಂತ ಬಹಳ ಹೆಚ್ಚು ವೇಗದಲ್ಲಿ ಮುನ್ನುಗ್ಗುತ್ತಿದೆ. ಇದೀಗ ಮತ್ತೊಂದು ಮಹತ್ವದ ಮಸೂದೆಯನ್ನು ನೆನ್ನೆಯಷ್ಟೇ ಲೋಕಸಭಯಲ್ಲಿ ಮಂಡಿಸಿ ತಡರಾತ್ರಿಯ ವರೆಗೂ ಕಾದು ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಮತದಾನ ನಡೆಯುವಂತೆ ಮಾಡಿ ಭರ್ಜರಿಯಾಗಿ ಗೆದ್ದು ಬೀಗಿರುವ ಬಿಜೆಪಿ ಪಕ್ಷ ಇದೀಗ ರಾಜ್ಯಸಭೆಯಲ್ಲಿಯೂ ಬಿಲ್ ಪಾಸ್ ಮಾಡಿ ಪೌರತ್ವ ತಿದ್ದು ಮಾಡಿ ಮಾಡಲು ಕಾದು ಕುಳಿತಿದೆ.

ಆದರೆ ವಿಪಕ್ಷಗಳಿಗೆ ಈ ಮಸೂದೆಯನ್ನು ತಡೆಯಲು ಇದ್ದದ್ದು ಒಂದೇ ಒಂದು ದಾರಿ, ಅದುವೇ ರಾಜ್ಯ ಸಭೆಯಲ್ಲಿ ಬಿಜೆಪಿ ಪಕ್ಷಕ್ಕೆ ಸೋಲನ್ನು ತೋರಿಸುವುದು, ಆದರೆ ಇನ್ನು ವಿಪಕ್ಷಗಳು ಯೋಜನೆಯಲ್ಲಿ ಇರುವಾಗಲೇ ಅಖಾಡಕ್ಕೆ ಇಳಿದ ಶಾ, ತಂತ್ರಗಾರಿಕೆ ಮಾಡಿ AIADMK ಪಕ್ಷದ 11 ರಾಜ್ಯಸಭಾ ಸದಸ್ಯರು ಹಾಗೂ ಒಡಿಸ್ಸಾ ರಾಜ್ಯದ BJD ಪಕ್ಷದ 7 ಸದಸ್ಯರು, YSRP ಮತ್ತು TDP ಪಕ್ಷದ ತಲಾ ಇಬ್ಬರು ಸದಸ್ಯರನ್ನು ಪೌರತ್ವ ತಿದ್ದು ಪಡಿಯ ವಿದೇಯಕದ ಪರವಾಗಿ ಮತ ಚಲಾಯಿಸಲು ಮನವೊಲಿಸಿದ್ದಾರೆ. ಈ ಮೂಲಕ ಸರಳ ಬಹುಮತ (120) ಸದಸ್ಯರಿಗಿಂತ 7 ಹೆಚ್ಚು ಸಂಖ್ಯಾಬಲವನ್ನು ಬಿಜೆಪಿ ಪಕ್ಷ ಇದೀಗ ರಾಜ್ಯಸಭೆಯಲ್ಲಿ ಪಡೆದುಕೊಂಡಿದೆ ಹಾಗೂ ಈ ಮಸೂದೆ ಜಾರಿಗೆ ಬರುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂಬುದನ್ನು ಮತ್ತೊಮ್ಮೆ ಸಾರಿ ಹೇಳಿದೆ.