ಅಮೆರಿಕ ವಿರುದ್ಧ ಸಿಡಿದೆದ್ದ ಅಮಿತ್ ಶಾ ! ಖಡಕ್ಕಾಗಿ ಹೇಳಿದ್ದೇನು ಗೊತ್ತಾ??

ಅಮೆರಿಕ ವಿರುದ್ಧ ಸಿಡಿದೆದ್ದ ಅಮಿತ್ ಶಾ ! ಖಡಕ್ಕಾಗಿ ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಭಾರತದ ಪೌರತ್ವದ ಕುರಿತು ಕೇಂದ್ರ ಸರ್ಕಾರವು ಮಂಡಿಸುತ್ತಿರುವ ಪೌರತ್ವ ತಿದ್ದುಪಡಿ ಮಸೂದೆ ಕೇವಲ ಭಾರತದಲ್ಲಷ್ಟೇ ಅಲ್ಲದೆ ಇದೀಗ ವಿಶ್ವದ ಎಲ್ಲೆಡೆ ಸದ್ದು ಮಾಡಲಾರಂಭಿಸಿದೆ. ಎಂದಿನಂತೆ ಪಾಕಿಸ್ತಾನ, ಚೀನಾ ಹಾಗೂ ಬಾಂಗ್ಲಾದೇಶ ದೇಶಗಳು ಭಾರತದ ಈ ನಡೆಯನ್ನು ವಿರೋಧಿಸುತ್ತಿವೆ.

ಆದರೆ ಇಲ್ಲಿ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳ ಆಯೋಗ ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಕಠಿಣವಾಗಿ ಟೀಕೆ ಮಾಡಿ, ಯಾವುದೇ ಕಾರಣಕ್ಕೂ ಈ ರೀತಿಯ ಪೌರತ್ವ ತಿದ್ದುಪಡಿ ವಿಧೇಯಕವನ್ನು ನರೇಂದ್ರ ಮೋದಿ ರವರ ಸರ್ಕಾರ ಮಂಡಿಸಬಾರದು ಎಂದು ಆಕ್ರೋಶ ವ್ಯಕ್ತಪಡಿಸಿತು. ಆದರೆ ಇದ್ಯಾವುದಕ್ಕೂ ಜಗ್ಗದ ಕೇಂದ್ರ ಸರ್ಕಾರವು ಈಗಾಗಲೇ ಲೋಕಸಭಾದಲ್ಲಿ ಮಸೂದೆಯನ್ನು ಮಂಡಿಸಿ ತಡರಾತ್ರಿಯವರೆಗೂ ನಡೆದ ಮತದಾನದಲ್ಲಿ ಮತಗಳ ಎಣಿಕೆಯ ಆಧಾರದ ಮೇಲೆ ಮಸೂದೆ ಅಂಗೀಕಾರ ಮಾಡಿಕೊಂಡಿದೆ. ಇನ್ನು ಕೆಲವೇ ಕೆಲವು ಗಂಟೆಗಳಲ್ಲಿ ರಾಜ್ಯಸಭೆಯಲ್ಲಿಯೂ ಕೂಡ ಕೇಂದ್ರ ಸರ್ಕಾರವು ಇದೇ ಮಸೂದೆಯನ್ನು ಮಂಡಿಸಿ ಅಂಗೀಕಾರ ಪಡೆಯುವುದು ಬಹುತೇಕ ಖಚಿತವಾಗಿದೆ. ಹೀಗಿರುವಾಗ ಒಂದು ವೇಳೆ ಅದೇ ನಡೆದಲ್ಲಿ ಅಮಿತ್ ಶಾ ರವರನ್ನು ಅಮೇರಿಕ ದೇಶ ನಿಷೇಧ ಮಾಡಬೇಕು ಎಂದು ಅಮೆರಿಕಾದ ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳ ಮಾಡಿದ ಮನವಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರಿ ಚರ್ಚೆಗೆ ಗುರಿಯಾಗಿತ್ತು.

ಇದೀಗ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅಮಿತ್ ಶಾ ರವರು ಈ ಮಸೂದೆಯನ್ನು ಮಂಡಿಸಿಯೇ ತೀರುತ್ತೇವೆ. ಈ ಮಸೂದೆಯಿಂದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವ ನೀಡುವ ಮೂಲಕ ಎಲ್ಲರನ್ನೂ ರಕ್ಷಣೆ ಮಾಡುವ ಕೆಲಸ ಭಾರತ ದೇಶ ಮಾಡುತ್ತದೆ. ಅದು ನಮ್ಮ ಆದ್ಯತೆಯಾಗಿದೆ. ಈ ವಿಚಾರದಲ್ಲಿ ಅಮೇರಿಕಾ ದೇಶದ ಧಾರ್ಮಿಕ ಸ್ವಾತಂತ್ರ ಹಕ್ಕುಗಳ ಆಯೋಗ ಯಾವುದೇ ಹಕ್ಕುಗಳನ್ನು ಪಡೆದಿಲ್ಲ, ಅಮೇರಿಕಾ, ಪಾಕಿಸ್ತಾನ, ಚೀನಾ ಅಥವಾ ವಿಶ್ವದ ಇನ್ನಿತರ ಯಾವುದೇ ದೇಶಗಳು ಭಾರತೀಯ ಪೌರತ್ವದ ತಿದ್ದುಪಡಿಯ ವಿಚಾರದಲ್ಲಿ ಮೂಗು ತೂರಿಸುವ ಅಗತ್ಯವಿಲ್ಲ ಎಂದು ಖಡಕ್ಕಾಗಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ಅಮೇರಿಕ ದೇಶ ಭಾರತೀಯ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಯೋಜನೆಯನ್ನು ಅಮಿತ್ ಶಾ ರವರು ಖಡಾ ಖಂಡಿತವಾಗಿ ನಿರಾಕರಿಸಿ, ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಸ್ಪಷ್ಟ ಸಂದೇಶವನ್ನು ರವಾನೆ ಮಾಡಿದ್ದಾರೆ.