ಇತಿಹಾಸ ಸೃಷ್ಟಿಸಿದ ನೌಕಾಪಡೆ ! ವಿಶ್ವವೇ ಭಾರತದ ಕಡೆ ತಿರುಗಿ ನೋಡಿದ್ದು ಆದರೆ ನಮ್ಮ ಮಾಧ್ಯಮಗಳಿಗೆ ಕಾಣಿಸಲಿಲ್ಲ ಯಾಕೆ??

ಇತಿಹಾಸ ಸೃಷ್ಟಿಸಿದ ನೌಕಾಪಡೆ ! ವಿಶ್ವವೇ ಭಾರತದ ಕಡೆ ತಿರುಗಿ ನೋಡಿದ್ದು ಆದರೆ ನಮ್ಮ ಮಾಧ್ಯಮಗಳಿಗೆ ಕಾಣಿಸಲಿಲ್ಲ ಯಾಕೆ??

ಇದೀಗ ಭಾರತೀಯ ನೌಕಾಪಡೆಯು ಇತಿಹಾಸವನ್ನು ಸೃಷ್ಟಿಸಿದೆ, ಈ ಕ್ಷಣವನ್ನು ನೋಡಿದರೇ, ವಿದೇಶಗಳಿಂದ ಆಮದು ಮಾಡಿಕೊಂಡು ಸೇನೆಯನ್ನು ಮುನ್ನಡೆಸುವ ಕಾಲ ಹೊರಟು ಹೋಗುವ ಸಂದರ್ಭ ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಬರಲಿದೆ ಎನಿಸುತ್ತದೆ.. ಅಷ್ಟೇ ಅಲ್ಲದೇ, ಭಾರತ ದೇಶವು ಮುಂದೊಂದು ದಿನ ಬಲಾಢ್ಯ ರಾಷ್ಟ್ರವಾಗಿ ಮಾರ್ಪಟ್ಟು ವಿದೇಶಗಳಿಗೆ ಬಾರಿ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುವಂತಹ ದೊಡ್ಡ ರಾಷ್ಟ್ರವಾಗಿ ಬೆಳೆದು ನಿಲ್ಲಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ.

ಹೌದು ಸ್ನೇಹಿತರೇ, ಇದೀಗ ಭಾರತೀಯ ಡಿಆರ್ಡಿಓ ಸಂಸ್ಥೆಯು ಹಲವಾರು ಕ್ಷಿಪಣಿ ಪರೀಕ್ಷೆಗಳನ್ನು ನಡೆಸುತ್ತಿದೆ, ಇದರ ಕುರಿತು ವಿಶ್ವ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಭಾರತ ದೇಶದಲ್ಲಿ ಲಘು ಯುದ್ಧ ವಿಮಾನ ದಿಂದ ಹಿಡಿದು ಬಾರಿ ಗಾತ್ರದ ಹಾಗೂ ಸಾವಿರಾರು ಕೆಜಿ ತೂಕಗಳನ್ನು ಹೊತ್ತುಕೊಂಡು ಹೋಗಿ ಶತ್ರುಗಳನ್ನು ನಾಶ ಪಡಿಸುವಂತಹ ಕ್ಷಿಪಣಿಗಳ ತಯಾರಿ ನಡೆಯುತ್ತಿದೆ. ವಿಶ್ವಮಟ್ಟದಲ್ಲಿ ಇದು ಸದ್ದು ಮಾಡುತ್ತಿದ್ದರೂ ಕೂಡ ಭಾರತೀಯ ಮಾಧ್ಯಮಗಳಿಗೆ ಮಾತ್ರ ಕಾಣಿಸುತ್ತಿಲ್ಲ, ಇದೀಗ ಭಾರತೀಯ ನೌಕಾಪಡೆಯು ನಡೆಸಿದ ಮತ್ತೊಂದು ಪರೀಕ್ಷೆಯಲ್ಲಿ ಡಿಆರ್ ಡಿಓ ಸಂಸ್ಥೆ ಯಶಸ್ವಿಯಾಗಿದ್ದು, ಭಾರತೀಯ ನೌಕಾಪಡೆಯು ಮತ್ತೊಂದು ಇತಿಹಾಸವನ್ನು ಸೃಷ್ಟಿಸಿದೆ. ಭಾರತದ ಲಘು ಯುದ್ಧ ವಿಮಾನವಾದ ತೇಜಸ್ ವಿಮಾನದಲ್ಲಿ ನಿನ್ನೆ ನಡೆದ ಪರೀಕ್ಷೆಯಲ್ಲಿ ಐಎಂಎಸ್ ಹಂಸದಿಂದ 4 ಯುದ್ಧ ಕ್ಷಿಪಣಿಗಳನ್ನು ಹೊತ್ತು ಹಾರುವ ಪರೀಕ್ಷೆ ನಡೆಸಿದೆ..

ಈ ಬಗ್ಗೆ ಖುದ್ದು ರಕ್ಷಣಾ ಸಂಶೋಧನಾ ಹಾಗೂ ಅಭಿವೃದ್ಧಿ ಸಂಸ್ಥೆ ಖಚಿತಪಡಿಸಿದ್ದು ತೇಜಸ್ ಯುದ್ಧ ವಿಮಾನ 2 BVRAAM ಹಾಗೂ ಎರಡು CCM ಕ್ಷಿಪಣಿಗಳನ್ನು ಹೊತ್ತು ಆಗಸಕ್ಕೆ ಹಾರಿದೆ. ಈ ಪರೀಕ್ಷೆ ಭಾರತೀಯ ಲಘು ಯುದ್ಧ ವಿಮಾನಗಳ ಕುರಿತು ಮಹತ್ವದ ಪರೀಕ್ಷೆಯಾಗಿತ್ತು, ಈಗಾಗಲೇ ಹಲವಾರು ದೇಶಗಳಿಂದ ತೇಜಸ್ ವಿಮಾನಗಳಿಗೆ ಬೇಡಿಕೆ ಕೇಳಿಬಂದಿದ್ದು, ಈ ಪರೀಕ್ಷೆ ಲಘು ಯುದ್ಧ ವಿಮಾನಗಳ ಸಾಮರ್ಥ್ಯ ವಿಸ್ತರಣೆ ಮಾಡುವುದರಲ್ಲಿ ಮಹತ್ವದ ಹೆಜ್ಜೆ ಎನಿಸಿಕೊಂಡಿದೆ. ಇದರ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಷ್ಯಾ ಹಾಗೂ ಇಸ್ರೇಲ್ ನಿರ್ಮಿತ ಕ್ಷಿಪಣಿಗಳನ್ನು ಯಶಸ್ವಿಯಾಗಿ ಹೊತ್ತುಕೊಂಡು ಆಗಸಕ್ಕೆ ಜಿಗಿದಿರುವ ತೇಜಸ್ ಯುದ್ಧ ವಿಮಾನ ಮುಂದೊಂದು ದಿನ ಶತ್ರುಗಳಿಗೆ ಎಷ್ಟು ಅಪಾಯಕಾರಿ ಆಗಬಲ್ಲೇ ಎಂಬುದನ್ನು ಸಾರಿ ಹೇಳಿದೆ. ಈ ಸಾಧನೆ ಮಾಡಿದ ರಕ್ಷಣಾ ಸಂಸ್ಥೆ (ಡಿಆರ್ಡಿಒ) ಹಾಗೂ ಭಾರತೀಯ ನೌಕಾಪಡೆಗೆ ನಮ್ಮ ತಂಡದ ಪರವಾಗಿ ವಂದನೆಗಳು ನಿಮ್ಮ ಈ ಸಾಹಸ ಹೀಗೆ ಮುಂದುವರೆಯಲಿ.