ಭಾರತೀಯ ಸೇನೆಗೆ ಭರ್ಜರಿ ಉಡುಗೊರೆ ನೀಡಿದ ಇಸ್ರೇಲ್: ಆಪ್ತಮಿತ್ರನ ಉಡುಗೊರೆಯ ಪವರ್ ಏನು ಗೊತ್ತಾ? ಪಾಕ್ ಗಡ ಗಡ

ಭಾರತೀಯ ಸೇನೆಗೆ ಭರ್ಜರಿ ಉಡುಗೊರೆ ನೀಡಿದ ಇಸ್ರೇಲ್: ಆಪ್ತಮಿತ್ರನ ಉಡುಗೊರೆಯ ಪವರ್ ಏನು ಗೊತ್ತಾ? ಪಾಕ್ ಗಡ ಗಡ

ನಮಸ್ಕಾರ ಸ್ನೇಹಿತರೇ, ಇದೀಗ ಮತ್ತೊಮ್ಮೆ ನಮ್ಮ ದೇಶದ ಆಪ್ತಮಿತ್ರರ ಅಗ್ರ ಸಾಲಿನಲ್ಲಿ ನಿಲ್ಲುವ ಇಸ್ರೇಲ್ ದೇಶ ಭಾರತೀಯ ಸೇನೆಗೆ ಪಾಕಿಸ್ತಾನದ ಪುಂಡಾಟ ಅಡಗಿಸಲು ಬಹು ಮುಖ್ಯವಾದ ಸಾಧನವನ್ನು ಬತ್ತಳಿಕೆಗೆ ಕಳುಹಿಸಿದೆ. ಈಗಾಗಲೇ ಇದು ಭಾರತ ಹಾಗೂ ಪಾಕಿಸ್ತಾನದ ಗಡಿಯಲ್ಲಿ ನಿಯೋಜನೆ ಮಾಡಲಾಗಿದ್ದು, ಪಾಕಿಸ್ತಾನ ಒಂದು ಹೆಜ್ಜೆ ಮುಂದಿಟ್ಟರು ಕ್ಷಣ ಮಾತ್ರದಲ್ಲಿ ಉಡೀಸ್ ಮಾಡಿರುತ್ತದೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಕೆಲವು ತಿಂಗಳುಗಳ ಹಿಂದೆ ಭಾರತೀಯ ಸೇನೆಯ ಮೇಲೆ ಪುಲ್ವಾಮಾ ಪ್ರದೇಶದಲ್ಲಿ ದಾಳಿ ನಡೆದ ನಂತರ ಪಾಕಿಸ್ತಾನಕ್ಕೆ ಬುದ್ದಿ ಕಲಿಸಲು ಮತ್ತಷ್ಟು ಅಸ್ತ್ರಗಳನ್ನು ಆಮದು ಮಾಡಿಕೊಳ್ಳಲು ನಿರ್ಧಾರ ಮಾಡಲಾಗಿತ್ತು. ಆದರೆ ಬೇರೆ ಯಾವ ದೇಶಗಳು ತಿಂಗಳುಗಳ ಲೆಕ್ಕದಲ್ಲಿ ಶಸ್ತ್ರಾಸ್ತ್ರ ಗಳನ್ನೂ ರಫ್ತು ಮಾಡಲು ಮುಂದಾಗಲಿಲ್ಲ. ಆದರೆ ಭಾರತದ ಸ್ನೇಹಿತ ಇಸ್ರೇಲ್ ದೇಶ ಮಾತ್ರ ತನ್ನ ದಾಸ್ತಾನುಗಳಿಂದ ಕೆಲವೊಂದು ಶಸ್ತ್ರಾಸ್ತ್ರ ಗಳನ್ನು ರಫ್ತ್ತು ಮಾಡಿತು. ಅದೇ ರೀತಿ ಇದೀಗ ಮತ್ತೊಂದು ಅಸ್ತ್ರವನ್ನು ಭಾರತೀಯ ಸೇನೆಯ ಬತ್ತಳಿಕೆಗೆ ಕಳುಹಿಸಿರುವ ಇಸ್ರೇಲ್ ದೇಶ ಕೇವಲ 280 ಕೋಟಿಗಳನ್ನು ಪಡೆದುಕೊಂಡು ಶತ್ರು ಟ್ಯಾಂಕರ್ ಗಳನ್ನು ಉಡಾಯಿಸಲು ಅಸ್ತ್ರ ನೀಡಿದೆ. ಈ ಅಸ್ತ್ರ ಚಿಕ್ಕದಾದರೂ ವಿಶ್ವದಲ್ಲಿಯೇ ಖ್ಯಾತಿ ಪಡೆದುಕೊಂಡಿದೆ. ಅಷ್ಟಕ್ಕೂ ಅದರ ಮಹತ್ವಗಳೇನು ಗೊತ್ತಾ?? ತಿಳಿಯಲು ಕೆಳಗಡೆ ಓದಿ.

ಇಸ್ರೇಲ್ ದೇಶವು ಬರೋಬ್ಬರಿ ೨೧೦ ಕ್ಷಿಪಣಿ ಗಳನ್ನು ರಫ್ತ್ತು ಮಾಡಿದ್ದು, 12 ಲಾಂಚರ್ಗಳನ್ನು ಕಳುಹಿಸಿದೆ. ಈ ಕ್ಷಿಪಣಿಗಳು ಚಿಕ್ಕ ಕಂಪ್ಯೂಟರ್ ವ್ಯವಸ್ಥೆಯನ್ನು ಹೊಂದಿದ್ದು, ಇಡೀ ವಿಶ್ವದಲ್ಲಿಯೇ ಅತಿ ನಿಖರವಾದ ಗುರಿ ಛೇದಿಸಬಲ್ಲ ಎಟಿಜಿಎಂ ಗಳೆಂಬ ಖ್ಯಾತಿ ಪಡೆದುಕೊಂಡಿವೆ. ಅಂದರೇ, ಎಟಿಜಿಎಂ ಕ್ಷಿಪಣಿಗಳನ್ನು ಯುದ್ಧ ಟ್ಯಾಂಕರ್ ಹಾಗೂ ಬಂಕರ್ ಗಳನ್ನು ಕ್ಷಣ ಮಾತ್ರದಲ್ಲಿ ಉಡಾಯಿಸುತ್ತವೆ.ಇವುಗಳನ್ನು ಸೈನಿಕರು ಅಲ್ಲಿಯೇ ಕೂತು ಕಂಟ್ರೋಲ್ ಮಾಡಬಹುದು ಅಥವಾ ಕಂಟ್ರೋಲ್ ರೂಮ್ ನಿಂದ ಕಂಟ್ರೋಲ್ ಮಾಡಿ, ನಿಖರವಾಗಿ ಗುರಿ ತಲುಪಿಸಬಹುದು.

ಅಷ್ಟೇ ಅಲ್ಲದೇ ಒಂದು ವೇಳೆ ಗುರಿ ಬದಲಾಯಿಸಬೇಕಾದರೇ ಯಾವುದೇ ಕ್ಷಣದಲ್ಲಿ ಬೇಕಾದರೂ ಚಿಕ್ಕ ಬಟನ್ ನ ಮೂಲಕ ಮತ್ತೊಂದು ಗುರಿ ಕಡೆ ವರ್ಗಾಯಿಸಬಹುದು. ಇದು ಬಹಳ ಸಣ್ಣವಿರುವ ಕಾರಣ ಬಹಳ ಸುಲಭವಾಗಿ ಯುದ್ಧ ಭೂಮಿಗಳಲ್ಲಿ ಸಾಗಿಸಬಹುದಾಗಿದೆ. ಇವುಗಳು ನಿಯೋಜನೆ ಗೊಂಡ ನಾಲ್ಕು ಕಿಲೋಮೀಟರು ಗಳಷ್ಟು ದೂರ ಯಾರು ಹೆಜ್ಜೆ ಇಡಲು ಕೂಡ ಇವು ಬಿಡುವುದಿಲ್ಲ. ಇದೇ ಅಸ್ತ್ರವನ್ನು ಬಳಸಿಕೊಂಡು ಇದೀಗ ಉಗ್ರರ ಅಡಗು ದಾಣ ಅಥವಾ ಪಾಕ್ ನ ಗುಪ್ತ ನೆಲೆಗಳನ್ನು ಧ್ವಂಸಗೊಳಿಸಲು ಸದ್ಯಕ್ಕೆ ಬಳಸಲು ಸೇನೆ ನಿರ್ಧಾರ ಮಾಡಿದೆ.