ಮಹಾ ಮೈತ್ರಿಗೆ ಭಾರಿ ಮುಖಭಂಗ ! ಬಿಜೆಪಿ ಬೆಂಬಲಕ್ಕೆ ನಿಂತ ಸುಪ್ರೀಂಕೋರ್ಟ್ ! ಹೊರಡಿಸಿದ ಸೂಚನೆ ಏನು ಗೊತ್ತಾ?

ಕೊನೆಯ ಕ್ಷಣಗಳಲ್ಲಿ ಮಹತ್ವದ ತಿರುವುಗಳನ್ನು ಪಡೆದುಕೊಂಡು ಮಹಾರಾಷ್ಟ್ರ ರಾಜಕೀಯವು ಇದೀಗ ಸುಪ್ರೀಂ ಕೋರ್ಟಿನ ಮೆಟ್ಟಿಲೇರಿತ್ತು. ರಾಷ್ಟ್ರಪತಿ ಆಡಳಿತವನ್ನು ಯಾವುದೇ ಕ್ಯಾಬಿನೆಟ್ ಸಭೆ ಕರೆಯದೆ ರದ್ದು ಮಾಡುವ ಮೂಲಕ ಬಿಜೆಪಿ ಪಕ್ಷವು ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತಿದೆ ಎಂಬ ಆರೋಪ ಮಾಡಿ ಹಾಗೂ ಈ ಕೂಡಲೇ ಬಹುಮತ ಸಾಬೀತು ಮಾಡಲು ತಾಕೀತು ಮಾಡುವಂತೆ ಮೂರು ಪಕ್ಷಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

sc

ಶಿವಸೇನ ಪಕ್ಷವು ಈ ಕೇಸಿನ ಮುಂದಾಳತ್ವವನ್ನು ವಹಿಸಿಕೊಂಡು ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳ ಬೆಂಬಲದೊಂದಿಗೆ ಸುಪ್ರೀಂಕೋರ್ಟ್ ನಲ್ಲಿ ತುರ್ತು ವಿಚಾರಣೆ ನಡೆಸುವಂತೆ ಮನವಿ ಮಾಡಿದ ಕಾರಣ ಭಾನುವಾರ ರಜಾ ದಿನವಾದರೂ ಕೂಡ ಸುಪ್ರೀಂಕೋರ್ಟ್ ತುರ್ತು ಅರ್ಜಿಯ ವಿಚಾರಣೆಯನ್ನು ತೆಗೆದುಕೊಂಡಿತ್ತು. ಈ ಮೂರು ಪಕ್ಷಗಳ ಪರ ಕಾಂಗ್ರೆಸ್ ಪಕ್ಷದ ವಕೀಲ ಕಪಿಲ್ ಸಿಬಲ್ ಅವರು ವಾದ ಮಂಡಿಸಿದರು, ಬಿಜೆಪಿ ಪಕ್ಷವು ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವಂತಹ ಕೆಲಸಗಳನ್ನು ಮಾಡುತ್ತಿದೆ, ಈ ಕೂಡಲೇ ಬಿಜೆಪಿ ಪಕ್ಷವನ್ನು ಬಹುಮತ ಸಾಬೀತುಪಡಿಸುವಂತೆ ಆದೇಶ ಹೊರಡಿಸಬೇಕು ಹಾಗೂ ರಾಷ್ಟ್ರಪತಿ ಆಡಳಿತವನ್ನು ಹಿಂತೆಗೆದುಕೊಂಡ ಬಗ್ಗೆ ಸಂಪೂರ್ಣ ವರದಿ ಕೇಳಿ ಪರಿಶೀಲನೆ ನಡೆಸಬೇಕು ಎಂಬ ಒತ್ತಾಯ ಮಾಡಿದ್ದರು. ಆದರೆ ಇವರ ಮನವಿಗೆ ಸಂಪೂರ್ಣ ಮಾಹಿತಿಗಳ ಮೂಲಕ ತೀರ್ಪು ನೀಡಿರುವ ಸುಪ್ರೀಂಕೋರ್ಟ್ ಸರಿಯಾದ ಉತ್ತರ ನೀಡಿದೆ.

ತುರ್ತು ಅರ್ಜಿಯ ವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ರಾಷ್ಟ್ರಪತಿ ರವರು ಸಂವಿಧಾನದ ಪ್ರಕಾರ ರಾಷ್ಟ್ರಪತಿ ಆಡಳಿತವನ್ನು ಹಿಂತೆಗೆಯುವ ಕ್ಯಾಬಿನೆಟ್ ಸಭೆ ಕರೆದಿದ್ದಾರೆ. ಕ್ಯಾಬಿನೆಟ್ ಸಭೆಯ ನಂತರವೇ ರಾಷ್ಟ್ರಪತಿ ಆಡಳಿತವನ್ನು ರದ್ದು ಮಾಡಲಾಗಿದೆ. ಇದರಲ್ಲಿ ಯಾವುದೇ ಲೋಪದೋಷಗಳು ನಮಗೆ ಕಾಣಿಸುತ್ತಿಲ್ಲ, ಅಷ್ಟೇ ಅಲ್ಲದೇ ಬಿಜೆಪಿ ಪಕ್ಷವು ಎನ್ಸಿಪಿ ಪಕ್ಷಗಳ ಶಾಸಕರ ಸಹಿಯೊಂದಿಗೆ ಅಧಿಕಾರ ಸ್ವೀಕರಿಸಿರುವ ಕಾರಣ ಬಿಜೆಪಿ ಪಕ್ಷಕ್ಕೆ ಕೂಡಲೇ ಬಹುಮತ ಸಾಬೀತು ಮಾಡಬೇಕಾದ ಅಗತ್ಯವಿಲ್ಲ. ಮುಂದಿನ ವಿಧಾನಸಭಾ ಸಮಾವೇಶದಲ್ಲಿ ಬಿಜೆಪಿ ಪಕ್ಷವು ಹೇಗಿದ್ದರೂ ಬಹುಮತವನ್ನು ಸಾಬೀತುಪಡಿಸುತ್ತದೆ. ಅಲ್ಲಿಯವರೆಗೂ ಯಾರೂ ತಕರಾರು ತೆಗೆಯುವಂತಿಲ್ಲ. ಸಂವಿಧಾನದ ಪ್ರಕಾರ ಎಲ್ಲವೂ ನಡೆಯಲಿ ಎಂದು ಶಿವಸೇನಾ, ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳಿಗೆ ಆದೇಶ ಹೊರಡಿಸಿದೆ. ಅಷ್ಟೇ ಅಲ್ಲದೇ ಬಿಜೆಪಿ ಸೇರಿದಂತೆ ನಾಲ್ಕು ಪಕ್ಷಗಳಿಗೆ ನೋಟಿಸ್ ಹೊರಡಿಸಿ ಎಲ್ಲಾ ಪಕ್ಷಗಳು ಶಾಸಕರ ಸಹಿಯೊಂದಿಗೆ ಉತ್ತರಿಸುವಂತೆ ಆದೇಶ ನೀಡಿದೆ. ತುರ್ತು ಅರ್ಜಿ ಸಲ್ಲಿಸಿರುವ ಕಾರಣ ನ್ಯಾಯಾಲಯ ಸಂವಿಧಾನವನ್ನು ತಿಳಿದುಕೊಂಡು ತುರ್ತು ಅರ್ಜಿಯ ಮನವಿ ಮಾಡಬೇಕು ಎಂದು ತರಾಟೆಗೆ ತೆಗೆದುಕೊಂಡಿದೆ.

Post Author: Ravi Yadav