ಶಿವಸೇನಾ ಪಕ್ಷಕ್ಕೆ ಸರಿಯಾಗಿ ಬುದ್ದಿ ಕಲಿಸಿದ ಶರದ್ ಪವರ್ ! ಬಿಜೆಪಿ ಫುಲ್ ಖುಷ್

ಶಿವಸೇನಾ ಪಕ್ಷಕ್ಕೆ ಸರಿಯಾಗಿ ಬುದ್ದಿ ಕಲಿಸಿದ ಶರದ್ ಪವರ್ ! ಬಿಜೆಪಿ ಫುಲ್ ಖುಷ್

ಮಹಾರಾಷ್ಟ್ರ ರಾಜ್ಯದಲ್ಲಿ ಹಿಂದೆಂದೂ ಕಾಣದಂತಹ ರಾಜಕೀಯ ಬಿಕ್ಕಟ್ಟು ಕಾಣಿಸಿಕೊಂಡಿದೆ. ಚುನಾವಣೆ ಮುಗಿದ ಮೇಲೆ ಮೈತ್ರಿ ಪಕ್ಷಗಳಲ್ಲಿ ಭಿನ್ನಮತ ಭುಗಿಲೆದ್ದ ಕಾರಣ ಈಗಾಗಲೇ ರಾಷ್ಟ್ರಪತಿ ಆಳ್ವಿಕೆಯನ್ನು ವಿಧಿಸಿ ಆದೇಶ ಹೊರಡಿಸಿದ ಕಾರಣ ರಾಜಕೀಯ ಅಸ್ಥಿರತೆ ಕಾಣಿಸುತ್ತಿದೆ.

ಇಷ್ಟೆಲ್ಲಾ ಅಸ್ಥಿರತೆಗೆ ಕಾರಣವಾದ ಶಿವಸೇನಾ ಪಕ್ಷವು ಇನ್ನೂ ಮುಖ್ಯಮಂತ್ರಿ ಕುರ್ಚಿಯ ಹಿಂದೆ ಬಿದ್ದಿದೆ. ಇನ್ನೇನು ಸರ್ಕಾರ ರಚಿಸುತ್ತೇವೆ ಎನ್ನುವಷ್ಟರಲ್ಲಿ ಒಂದಲ್ಲಾ ಒಂದು ವಿದ್ಯಮಾನಗಳು ಉದ್ಧವ್ ಠಾಕ್ರೆ ರವರಿಗೆ ಅಡ್ಡ ಬರುತ್ತಿವೆ. ಪಕ್ಷದ ಒಳಗಡೆ ಶಾಸಕರ ಅಸಮಾಧಾನದಿಂದ ರೆಸಾರ್ಟ್ ರಾಜಕೀಯ ಆರಂಭ ಮಾಡಿ, ಬಿಜೆಪಿ ಪಕ್ಷದ ಮೇಲೆ ಕುದುರೆ ವ್ಯಾಪಾರದ ಆರೋಪ ಮಾಡಿ ಇಷ್ಟು ದಿವಸ ಸರ್ಕಾರ ರಚನೆ ಮಾಡದೇ, ಸಭೆಗಳ ಮೇಲೆ ಸಭೆಗಳನ್ನು ನಡೆಸಿ, ತನ್ನ ಎಲ್ಲ ಹಿಂದುತ್ವದ ಮೌಲ್ಯಗಳನ್ನು ಅಧಿಕಾರಕ್ಕಾಗಿ ತ್ಯಾಗ ಮಾಡಲು ಸಿದ್ದವಾಗಿದ್ದ ಶಿವ ಸೇನಾ ಪಕ್ಷಕ್ಕೆ ಇದೀಗ ಶರದ್ ಪವರ್ ಶಾಕ್ ನೀಡಿದ್ದಾರೆ.

ಹೌದು, ಎನ್‍ಸಿಪಿ-ಕಾಂಗ್ರೆಸ್ ಪಕ್ಷಗಳು ವಿಧಿಸಿದ ಎಲ್ಲ ಷರತ್ತುಗಳಿಗೆ ಶಿವ ಸೇನಾ ಪಕ್ಷವು ಒಪ್ಪಿಗೆ ನೀಡಿದರೂ ಕೂಡ ಸೋನಿಯಾ ಗಾಂಧಿ ರವರು ಪಕ್ಷದ ಮುಂದಿನ ಭವಿಷ್ಯವನ್ನು ಗಮನದಲ್ಲಿ ಇಟ್ಟಿಕೊಂಡು ಅಲ್ಪ ಸಂಖ್ಯಾತರ ಮತಗಳನ್ನು ಕಳೆದುಕೊಳ್ಳುತ್ತೇವೆ ಎಂಬ ಭೀತಿಯಿಂದ ಇಷ್ಟು ದಿವಸ ಮೈತ್ರಿಯ ಬಗ್ಗೆ ಕಠಿಣ ನಿರ್ಧಾರ ತೆಗೆದುಕೊಂಡಿರಲಿಲ್ಲ. ಆದರೆ, ಎನ್‍ಸಿಪಿ ಪಕ್ಷ ಮಾತ್ರ ಮೈತ್ರಿಗೆ ಆಸಕ್ತಿ ತೋರಿತ್ತು. ಆದರೆ ಇದೀಗ ಶರದ್ ಪವರ್ ಉಲ್ಟಾ ಹೊಡೆದಿದ್ದಾರೆ. ಇಂದು ಮಾಧ್ಯಮಗಳೊದಿಗೆ ಮಾತನಾಡಿದ ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ರವರು ಬಿಜೆಪಿ ಹಾಗೂ ಶಿವಸೇನಾ ಪಕ್ಷಗಳು ಒಟ್ಟಾಗಿ ಚುನಾವಣೆಯನ್ನು ಎದುರಿಸಿವೆ. ಆದ ಕಾರಣದಿಂದ ಅವುಗಳು ತಮ್ಮ ಹಾದಿಯನ್ನು ಆಯ್ದುಕೊಳ್ಳಬೇಕು, ನಾವು ನಮ್ಮ ರಾಜಕಾರಣ ಮಾಡುತ್ತೇವೆ ಎಂದು ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಖಚಿತ ಪಡಿಸಿದ್ದಾರೆ.