ಬೀದಿಗೆ ಬಿದ್ದ ಶಿವಸೇನೆಗೆ ಮರ್ಮಾಘಾತ ! ಬಿಗ್ ಶಾಕ್ ನೀಡಿದ ಇಪ್ಪತ್ತಕ್ಕೂ ಹೆಚ್ಚು ಶಾಸಕರು ! ಮಾಡುತ್ತಿರುವುದಾದರೂ ಏನು ಗೊತ್ತಾ??

ಇದೀಗ ಮಹಾರಾಷ್ಟ್ರ ರಾಜಕೀಯದಲ್ಲಿ ಇಂದು ಮಹತ್ವದ ವಿದ್ಯಮಾನಗಳು ನಡೆದು ಹೋಗಿವೆ. ರಾಜ್ಯಪಾಲರು ಎನ್ಸಿಪಿ ಪಕ್ಷಕ್ಕೆ ಸರ್ಕಾರ ರಚಿಸಲು ಆಹ್ವಾನ ನೀಡಿದ ನಂತರ ಎನ್ಸಿಪಿ ಪಕ್ಷದ ಅಧ್ಯಕ್ಷ ಶರದ್ ಪವಾರ್ ಅವರು ಮೂರು ದಿನಗಳ ಕಾಲಾವಕಾಶ ನೀಡಿದರೇ ಮಾತ್ರ ನಾವು ಸರ್ಕಾರ ರಚನೆ ಮಾಡುತ್ತೇವೆ ನಮ್ಮ ಮೈತ್ರಿಯಲ್ಲಿ ಇನ್ನೂ ಹಲವಾರು ಮಾತುಕತೆಗಳು ಬಾಕಿ ಉಳಿದಿವೆ ಎಂದು ಕಾರಣ ಸಮಯ ನೀಡಲು ಸಾಧ್ಯವಿಲ್ಲ ಎಂದು ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದ್ದರು.

ರಾಜ್ಯಪಾಲರ ಶಿಫಾರಸಿಗೆ ರಾಷ್ಟ್ರಪತಿ ಅಂಕಿತ ವಾಗಿರುವ ಕಾರಣ ಇದೀಗ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಒಂದು ರಾಜ್ಯದಲ್ಲಿ ಸರ್ಕಾರ ರಚನೆಯ ಅತಂತ್ರದಿಂದ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂದರೇ ಆರು ತಿಂಗಳವರೆಗೂ ಎಲ್ಲಾ ಪಕ್ಷಗಳಿಗೂ ಸರ್ಕಾರ ರಚಿಸುವ ಸಮಾನ ಹಕ್ಕು ಇರುತ್ತದೆ. ಯಾವುದೇ ಪಕ್ಷಗಳು ಇತರ ಪಕ್ಷಗಳ ಬೆಂಬಲವನ್ನು ಪಡೆದುಕೊಂಡು ಸರ್ಕಾರವನ್ನು ರಚನೆ ಮಾಡುವ ಪ್ರಯತ್ನ ಮಾಡಬಹುದು. ಆದರೆ ಕೇವಲ ಬೆಂಬಲ ಪತ್ರ ನೀಡಿದರೇ ಸಾಲುವುದಿಲ್ಲ ವಿಧಾನಸಭಾ ಕಲಾಪದಲ್ಲಿ ಒಮ್ಮತವಾಗಿ ಬಹುಮತವನ್ನು ಸಾಬೀತುಪಡಿಸಿದ ನಂತರವಷ್ಟೇ ರಾಷ್ಟ್ರಪತಿ ಆಡಳಿತವನ್ನು ನಿಲ್ಲಿಸಿ, ಸರ್ಕಾರವನ್ನು ರಚಿಸಿ ಅಧಿಕಾರ ನಡೆಸಬಹುದು.

ಈ ರೀತಿಯ ಕಾನೂನು ಜಾರಿಗೆ ಇದ್ದರೂ ಸಹ ಶಿವಸೇನಾ ಪಕ್ಷವು ಸುಖಾ ಸುಮ್ಮನೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಪ್ರಯತ್ನ ಮಾಡುತ್ತಿದೆ. ಯಾಕೆಂದರೆ ಒಂದು ವೇಳೆ ಶಿವಸೇನಾ ಪಕ್ಷಕ್ಕೆ ಬಹುಮತ ಸಾಬೀತುಪಡಿಸಲು ಸಾಧ್ಯವಾದರೇ ನೇರವಾಗಿ ರಾಜ್ಯಪಾಲರ ಬಳಿ ತೆರಳಿ ವಿಧಾನಸಭಾ ಕಲಾಪವನ್ನು ನಡೆಸುವಂತೆ ಕೋರಿ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಅನುಮತಿ ಮಾಡಿಕೊಡುವಂತೆ ಮನವಿ ಮಾಡಬಹುದು. ಆದರೆ ರಾಷ್ಟ್ರಪತಿ ಆಡಳಿತ ಜಾರಿಗೆ ತಂದಿರುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಿರ್ಧಾರ ಮಾಡಿದೆ. ಆದರೆ ಈ ವಿದ್ಯಮಾನಗಳ ಬೆನ್ನಲ್ಲೇ ಶಿವಸೇನಾ ಪಕ್ಷಕ್ಕೆ ಆಂತರಿಕ ಜಗಳದ ಭೀತಿ ಎದುರಾಗಿದೆ. ಶಿವಸೇನಾ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಈಗಾಗಲೇ ಭಾರಿ ಮುಖಭಂಗ ಅನುಭವಿಸುತ್ತಿರುವ ಶಿವಸೇನಾ ಪಕ್ಷಕ್ಕೆ ಮತ್ತೊಂದು ಆಘಾತ ಎದುರಾಗಿದೆ.

ಈಗಾಗಲೇ ಶಿವಸೇನಾ ಪಕ್ಷವು ಮತ್ತೊಂದು ಚುನಾವಣೆಯನ್ನು ಎದುರಿಸಲು ಸಿದ್ಧವಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಯಾಕೆಂದರೆ ತನ್ನ ಸಿದ್ಧಾಂತಗಳಿಗೆ ತದ್ವಿರುದ್ಧವಾಗಿ ನಡೆಯುತ್ತಿದ್ದ ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದ ಕಾರಣ ಛತ್ರಪತಿ ಶಿವಾಜಿ ಅವರ ಅನುಯಾಯಿಗಳು ಹಾಗೂ ಬಾಳಠಾಕ್ರೆ ರವರ ಅಭಿಮಾನಿಗಳು ಶಿವಸೇನಾ ಪಕ್ಷದ ವಿರುದ್ಧ ಸಿಡಿದೆದ್ದಿದ್ದಾರೆ. ಅದರಲ್ಲಿಯೂ ಬಹುತೇಕ ಕ್ಷೇತ್ರಗಳಲ್ಲಿ ಶಿವಸೇನಾ ಪಕ್ಷದ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳಬಹುದು ಎಂದು ಒತ್ತಾಯ ಮಾಡಿದ್ದಾರೆ.

ಇದರ ಬೆನ್ನಲ್ಲೇ ಶಿವಸೇನಾ ಪಕ್ಷದ 23 ಶಾಸಕರು ಬಿಜೆಪಿ ಪಕ್ಷದ ಕದ ತಟ್ಟಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ 15ಕ್ಕೂ ಹೆಚ್ಚು ಪಕ್ಷೇತರ ಶಾಸಕರು ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಲು ನಿರ್ಧಾರ ಮಾಡಿರುವ ಕಾರಣ, ಒಂದು ವೇಳೆ ಶಿವಸೇನಾ ಪಕ್ಷದ 25 ಶಾಸಕರು ರಾಜೀನಾಮೆ ನೀಡಿದರೇ ಮಹಾರಾಷ್ಟ್ರ ರಾಜ್ಯದಲ್ಲಿ ಮತ್ತೊಂದು ಚುನಾವಣೆ ಖಚಿತವಾಗಲಿದೆ. ಇದೀಗ ಹೇಗಾದರೂ ಮಾಡಿ ಕೆಲವು ದಿನಗಳ ನಂತರವಾದರೂ ಸರ್ಕಾರ ರಚಿಸುವ ಕನಸು ಕಾಣುತ್ತಿದ್ದ ಶಿವಸೇನಾ ಪಕ್ಷಕ್ಕೆ ಶಾಸಕರ ನಡೆ ಬಾರಿ ತಲೆ ನೋವಾಗಿ ಪರಿಣಮಿಸಿದೆ. ಈ ಮೊದಲು ರೆಸಾರ್ಟ್ ರಾಜಕೀಯವನ್ನು ಆರಂಭ ಮಾಡಿದ್ದ ಶಿವಸೇನ ಪಕ್ಷವು ಇದೀಗ ಯಾವ ರೀತಿ ತನ್ನ ಪಕ್ಷದ ಶಾಸಕರನ್ನು ಹಿಡಿದುಕೊಳ್ಳಲು ಇದೆ ಎಂಬುದನ್ನು ಕಾದುನೋಡಬೇಕಿದೆ.

Post Author: Ravi Yadav