ಠಾಕ್ರೆ ತೋಡಿದ ಹಳ್ಳಕ್ಕೆ ಠಾಕ್ರೆಯನ್ನೇ ತಳ್ಳಿದ ಎನ್ಸಿಪಿ ! ಬಿಜೆಪಿ ಫುಲ್ ಕುಶ್ ! ಸೋನಿಯಾ ಆರಂಭಿಸಿದ ಅಸಲಿ ಆಟ ಏನು ಗೊತ್ತಾ?

ಠಾಕ್ರೆ ತೋಡಿದ ಹಳ್ಳಕ್ಕೆ ಠಾಕ್ರೆಯನ್ನೇ ತಳ್ಳಿದ ಎನ್ಸಿಪಿ ! ಬಿಜೆಪಿ ಫುಲ್ ಕುಶ್ ! ಸೋನಿಯಾ ಆರಂಭಿಸಿದ ಅಸಲಿ ಆಟ ಏನು ಗೊತ್ತಾ?

ಮಹಾರಾಷ್ಟ್ರ ರಾಜ್ಯದಲ್ಲಿ ಇದೀಗ ರಾಷ್ಟ್ರಪತಿ ಆಡಳಿತ ಜಾರಿ ಯಾಗಿದೆ. ಭಾರತ ಸಂವಿಧಾನದ ಪ್ರಕಾರ ಚುನಾವಣೆ ಫಲಿತಾಂಶದ ನಂತರ ಯಾವುದೇ ಪಕ್ಷಗಳು ಸರ್ಕಾರ ರಚನೆ ಮಾಡಲು ಮುಂದೆ ಬರದೇ ಇದ್ದಲ್ಲಿ ಪ್ರತಿಯೊಂದು ಪಕ್ಷಗಳಿಗೂ ರಾಜ್ಯಪಾಲರು ಕರೆ ನೀಡಿ 24 ಗಂಟೆಗಳ ಕಾಲಾವಕಾಶ ನೀಡುತ್ತಾರೆ. ಆದರೆ ಮಹಾರಾಷ್ಟ್ರ ರಾಜ್ಯಪಾಲರು ಸರ್ಕಾರ ರಚನೆಗೆ ನೀಡಿದ ಮನವಿಯ ಸಮಯದಲ್ಲಿ ಯಾವುದೇ ಪಕ್ಷಗಳು ಸರ್ಕಾರ ರಚನೆ ಮಾಡುವಲ್ಲಿ ವಿಫಲವಾದ ಕಾರಣ ರಾಷ್ಟ್ರಪತಿ ಆಡಳಿತ ಜಾರಿ ಯಾಗಿದೆ.

ಆದರೆ ರಾಷ್ಟ್ರಪತಿ ಆಡಳಿತ ಜಾರಿಯಾಗಿದ್ದರೂ ಮೈತ್ರಿ ಮಾಡಿಕೊಂಡು ಯಾವ ಪಕ್ಷಗಳು ಬೇಕಾದರೂ ಸರ್ಕಾರ ರಚನೆ ಮಾಡುವ ಅವಕಾಶ ಇದೆ. ಇದೇ ಕಾರಣಕ್ಕೆ ಈಗಲೂ ಶಿವಸೇನಾ, ಎನ್ಸಿಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಸರ್ಕಾರ ರಚನೆ ಮಾಡುವ ಆಸಕ್ತಿಯನ್ನು ಹೊಂದಿವೆ. ಆದರೆ ಎನ್ಸಿಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಇದೀಗ ತಮ್ಮ ರಾಜಕೀಯ ದಾಳವನ್ನು ಉರುಳಿಸುವ ಮೂಲಕ ಶಿವಸೇನಾ ಪಕ್ಷವನ್ನು ಕಟ್ಟಿ ಹಾಕುವ ಮೂಲಕ ಶಿವಸೇನಾ ಪಕ್ಷ ತೋಡಿದ ಹಳ್ಳಕ್ಕೆ ಶಿವಸೇನಾ ಪಕ್ಷವನ್ನು ತಳ್ಳಲು ಸಿದ್ಧ ಮಾಡಿಕೊಂಡಿದ್ದಾರೆ ಎಂಬ ಶಾಕಿಂಗ್ ಮಾಹಿತಿ ಹೊರಬಿದ್ದಿದೆ. ಅಧಿಕೃತ ಮೂಲಗಳಿಂದ ತಿಳಿದು ಬಂದ ವಿಷಯವೇನೆಂದರೇ,

ಎನ್ಸಿಪಿ ಪಕ್ಷವು ಶಿವಸೇನಾ ಪಕ್ಷದಂತೆ ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಲು ಆಗ್ರಹಿಸಿದೆ, ಅಷ್ಟೇ ಅಲ್ಲದೆ ಕಾಂಗ್ರೆಸ್ ಪಕ್ಷವು 13 ಕ್ಯಾಬಿನೆಟ್ ಮಂತ್ರಿಗಳ ಸ್ಥಾನವನ್ನು ನೀಡಿ, ಅದರ ಜೊತೆ ಸ್ಪೀಕರ್ ಸ್ಥಾನವನ್ನು ತನಗೆ ನೀಡಬೇಕು ಎಂದು ಒತ್ತಾಯ ಮಾಡಿದೆ. ಅಷ್ಟೇ ಅಲ್ಲದೇ ಹಿಂದುತ್ವದ ಸಿದ್ಧಾಂತದ ಕುರಿತು ಎಲ್ಲಿಯೂ ಮಾತನಾಡಬಾರದು ಎಂದು ಕಾಂಗ್ರೆಸ್ ಪಕ್ಷ ಒತ್ತಾಯ ಮಾಡಿದೆ. ಈ ಮೂಲಕ ಐದು ವರ್ಷ ಅಧಿಕಾರದ ಕನಸಿನಲ್ಲಿ ತೇಲಾಡುತ್ತಿದ್ದ ಶಿವಸೇನಾ ಪಕ್ಷಕ್ಕೆ ಭಾರೀ ಹೊಡೆತ ಬಿದ್ದಂತಾಗಿದ್ದು, ಎನ್ಸಿಪಿ ಪಕ್ಷವು ಮತ್ತಷ್ಟು ಕ್ಯಾಬಿನೆಟ್ ಹುದ್ದೆಗಳನ್ನು ಪಡೆಯಲು ಶಿವಸೇನಾ ಪಕ್ಷದ ಜೊತೆ ಮಾತುಕತೆಯಲ್ಲಿ ತೊಡಗಿದೆ ಎನ್ನಲಾಗುತ್ತಿದೆ. ಮುಖ್ಯಮಂತ್ರಿ ಹುದ್ದೆಗಾಗಿ ಬಿಜೆಪಿ ಸಖ್ಯ ತೊರೆದ ಶಿವಸೇನಾ ಪಕ್ಷಕ್ಕೆ ಇದೀಗ ಅದೇ ಬಾಣವನ್ನು ಅದರ ಜೊತೆ ಮತ್ತಷ್ಟು ಸಚಿವ ಸ್ಥಾನಗಳನ್ನು ಒತ್ತಾಯ ಮಾಡಿ ಶಿವಸೇನಾ ಪಕ್ಷಕ್ಕೆ ಶಾಕ್ ನೀಡಲಾಗಿದೆ.