ಬಿಗ್ ಬ್ರೇಕಿಂಗ್: ಮುಖ್ಯಮಂತ್ರಿ ಸ್ಥಾನ ಸಿಕ್ಕ ಕೆಲವೇ ಕ್ಷಣಗಳಲ್ಲಿ ಶಿವಸೇನಾ ಪಕ್ಷಕ್ಕೆ ಬಾರಿ ಶಾಕ್ ! ಏನು ಗೊತ್ತಾ??

ಬಿಗ್ ಬ್ರೇಕಿಂಗ್: ಮುಖ್ಯಮಂತ್ರಿ ಸ್ಥಾನ ಸಿಕ್ಕ ಕೆಲವೇ ಕ್ಷಣಗಳಲ್ಲಿ ಶಿವಸೇನಾ ಪಕ್ಷಕ್ಕೆ ಬಾರಿ ಶಾಕ್ ! ಏನು ಗೊತ್ತಾ??

ಇದೀಗ ಶಿವಸೇನಾ ಪಕ್ಷವು ತನ್ನ ಎಲ್ಲಾ ಮೂಲ ಸಿದ್ಧಾಂತ ಗಳನ್ನು ಮರೆತು ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳ ಜೊತೆ ಮೈತ್ರಿಯನ್ನು ಮಾಡಿ ಕೊಂಡು ಸರ್ಕಾರ ರಚನೆ ಮಾಡಲು ಮುಂದಾಗಿದೆ. ಮೂಲಗಳ ಪ್ರಕಾರ ಆದಿತ್ಯ ಠಾಕ್ರೆ ರವರ ಬದಲು ಶಿವಸೇನಾ ಪಕ್ಷದ ನಾಯಕ ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿ ಸ್ಥಾನವನ್ನು ಏರಲಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.

ಚುನಾವಣಾ ಪೂರ್ವ ಮೈತ್ರಿಯನ್ನು ಬಿಜೆಪಿ ಪಕ್ಷದ ಜೊತೆ ಮಾಡಿಕೊಂಡು ಚುನಾವಣೆಯನ್ನು ಎದುರಿಸಿದ ಬಳಿಕ ಬಿಜೆಪಿ ಪಕ್ಷ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸ್ಥಾನ ನೀಡುವುದಿಲ್ಲ ಎಂದು ತಿಳಿದ ಮೇಲೆ ಶಿವಸೇನಾ ಪಕ್ಷವು ಮಹಾರಾಷ್ಟ್ರ ರಾಜ್ಯದಲ್ಲಿ ಮಹಾ ಮೈತ್ರಿಯನ್ನು ರಚನೆ ಮಾಡಿಕೊಂಡು ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳ ಜೊತೆ ಅಧಿಕಾರಕ್ಕೆ ಏರುತ್ತಿದೆ. ಕಾಂಗ್ರೆಸ್ ಪಕ್ಷವು ಶಿವಸೇನಾ ಪಕ್ಷಕ್ಕೆ ಬಾಹ್ಯ ಬೆಂಬಲವನ್ನು ಸೂಚಿಸಿರುವ ಕಾರಣ ಮ್ಯಾಜಿಕ್ ನಂಬರ್ ಪಡೆದುಕೊಂಡು ಅಧಿಕಾರದ ಗದ್ದುಗೆ ಏರುತ್ತಿದೆ. ಇದರ ಬೆನ್ನಲ್ಲೇ ಶಿವಸೇನಾ ಪಕ್ಷದಲ್ಲಿ ಭಾರಿ ಮಟ್ಟದ ಆಂತರಿಕ ಯುದ್ಧ ಆರಂಭವಾಗಿದೆ ಎಂಬ ಸುದ್ದಿ ಹೊರ ಬಿದ್ದಿದೆ.

ಶಿವಸೇನಾ ಪಕ್ಷವು ಮೊದಲಿನಿಂದಲೂ ತನ್ನ ಸಿದ್ಧಾಂತಗಳನ್ನು ಪಾಲಿಸುತ್ತಾ ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳ ಸಿದ್ಧಾಂತದ ವಿರುದ್ಧ ಕಿಡಿಕಾರುತ್ತಿತ್ತು. ಹಿಂದುತ್ವದ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದ ಕಾರಣ ಶಿವಸೇನಾ ಪಕ್ಷಕ್ಕೆ ಇಷ್ಟು ದಿವಸ ಜನರು ಮತ ನೀಡುತ್ತಿದ್ದರು. ಪಕ್ಕಾ ಹಿಂದುತ್ವದ ಸಿದ್ಧಾಂತಿ ಯಾಗಿದ್ದ ಶಿವಸೇನಾ ಪಕ್ಷವು, ಕೇವಲ ಹಿಂದುತ್ವ ಹಿಂದುತ್ವ ಎಂದು ಹೇಳಿ ಮತಗಳನ್ನು ಪಡೆಯುತ್ತಿತ್ತು. ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುತ್ತೇವೆ, ರಾಮಮಂದಿರ ನಿರ್ಮಾಣವಾಗುತ್ತದೆ ಎಂದೆಲ್ಲ ಹೇಳಿ ಮಹಾರಾಷ್ಟ್ರದಲ್ಲಿ ನೆಲೆಸಿರುವ ಛತ್ರಪತಿ ಶಿವಾಜಿ ರವರ ಅನುಯಾಯಿಗಳ ಬೆಂಬಲವನ್ನು ಪಡೆದುಕೊಂಡು ಇಷ್ಟು ದಿವಸ ರಾಷ್ಟ್ರೀಯ ಪಕ್ಷಗಳ ಆರ್ಭಟ ವಿದ್ದರೂ ತನ್ನ ಅಸ್ತಿತ್ವವನ್ನು ಉಳಿಸಿ ಕೊಂಡಿತ್ತು. ಆದರೆ ಇದೀಗ ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುತ್ತಿರುವ ಕಾರಣ ಶಿವಸೇನಾ ಪಕ್ಷದ ಕಾರ್ಯಕರ್ತರು ಭಾರಿ ಪ್ರಮಾಣದಲ್ಲಿ ಸಿಡಿದೆದ್ದಿದ್ದಾರೆ. ಅದರಲ್ಲಿಯೂ ಬಾಳಾಠಾಕ್ರೆ ಅಭಿಮಾನಿಗಳು ರೊಚ್ಚಿಗೆದ್ದು ಶಿವಸೇನಾ ಪಕ್ಷದ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡಿ, ಮೈತ್ರಿ ಸರ್ಕಾರ ಬೇಡ ಎನ್ನುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.