ಬಿಗ್ ಗುಡ್ ನ್ಯೂಸ್: ಅಯೋಧ್ಯೆಯ ರಾಮ ಮಂದಿರದ ನಂತರ ಮುಂದಿನ ಗುರಿ ತಿಳಿಸಿದ ಸುಬ್ರಹ್ಮಣ್ಯ ಸ್ವಾಮಿ

ಇದೀಗ ಕೋಟ್ಯಂತರ ಹಿಂದೂಗಳ ದಶಕಗಳ ಕನಸು ನನಸಾಗುವ ಸಮಯ ಇದೇ ವರ್ಷದ ನವೆಂಬರ್ ತಿಂಗಳಿನಲ್ಲಿ ಬಂದೇ ಬಿಟ್ಟಿದೆ. ಹೌದು ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ತೀರ್ಪನ್ನು ಸುಪ್ರೀಂ ಕೋರ್ಟ್ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಹೊರ ಹಾಕಲಿದೆ. ಇದರ ಕುರಿತು ಇದೀಗ ಸುಬ್ರಹ್ಮಣ್ಯಂ ಸ್ವಾಮಿ ರವರು ಮಾತನಾಡಿ ರಾಮ ಮಂದಿರ ನಿರ್ಮಾಣದ ನಂತರ ಮುಂದಿನ ಗುರಿ ಏನು ಎಂಬುದನ್ನು ತಿಳಿಸಿದ್ದಾರೆ.

ಇದೀಗ ಮಾತನಾಡಿರುವ ಹಿಂದೂ ಫೈಯರ್ ಬ್ರಾಂಡ್ ಖ್ಯಾತಿಯ ಸುಬ್ರಹ್ಮಣ್ಯನ್ ಸ್ವಾಮಿ ರವರು ತಮ್ಮ ಹೋರಾಟ ಕೇವಲ ಅಯೋಧ್ಯೆ ಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ಖಚಿತ ಪಡಿಸಿದ್ದಾರೆ. ಇಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಸುಬ್ರಹ್ಮಣ್ಯನ್ ಸ್ವಾಮಿ ರವರು ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಲಿದೆ, ಈಗಾಗಲೇ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಬೇಕಾದ ಎಲ್ಲಾ ತಯಾರಿ ನಡೆದು ಹೋಗಿರುವ ಕಾರಣ ಕೇವಲ ಎರಡು ವರ್ಷಗಳಲ್ಲಿ ನಾವು ರಾಮ ಮಂದಿರವನ್ನು ನಿರ್ಮಾಣ ಮಾಡಿ ಪೂರ್ಣಗೊಳಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

ತದ ನಂತರ ಮಾತನ್ನು ಮುಂದುವರಿಸಿದ ಸುಬ್ರಹ್ಮಣ್ಯನ್ ಸ್ವಾಮಿ ರವರು, ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಮರು ಕ್ಷಣದಿಂದ ನಾವು ಕಾಶಿಯಲ್ಲಿ ವಿಶ್ವನಾಥ ದೇವಾಲಯ ಹಾಗೂ ಮಥುರಾದಲ್ಲಿ ಕೃಷ್ಣ ದೇಗುಲವನ್ನು ನಿರ್ಮಿಸುವ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದೇವೆ, ಒಂದು ವೇಳೆ ಸುಪ್ರೀಂ ಕೋರ್ಟ್ ರಾಮ ಮಂದಿರ ನಿರ್ಮಾಣಕ್ಕೆ ವಿರೋಧ ಸೂಚಿಸಿ ತೀರ್ಪನ್ನು ನೀಡಿದರೇ ಭಾರತೀಯ ಸಂವಿಧಾನದ 300ನೇ ವಿಧಿ ಪ್ರಕಾರ ಭೂಮಿಯನ್ನು ರಾಷ್ಟ್ರೀಕರಣ ಮಾಡಿ ಕೇಂದ್ರ ಸರ್ಕಾರದಿಂದ ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಗ್ನೆ ಹೊರಡಿಸುವಂತೆ ಮಾಡಬಹುದು ಎಂದು ಹೇಳಿದ್ದಾರೆ.

ಮೊಘಲರ ಆಡಳಿತದಲ್ಲಿ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ 40,000 ದೇವಾಲಯಗಳನ್ನು ಧ್ವಂಸ ಮಾಡಲಾಗಿದೆ, ಇದೀಗ ನಾವು ಕಾಶಿ ವಿಶ್ವನಾಥ ದೇವಾಲಯ ಕ್ಕಾಗಿ ಹೋರಾಟ ಮಾಡಲು ಸಿದ್ಧವಿದ್ದೇವೆ. ಆದರೆ ರಾಮ ಮಂದಿರ ದಂತೆ ಈ ಹೋರಾಟ ದೊಡ್ಡದಾಗಿರುವುದಿಲ್ಲ ಅತ್ಯಂತ ಸುಲಭವಾಗಿ ನಾವು ಈ ಹೋರಾಟದಲ್ಲಿ ಗೆಲುವು ಕಾಣಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Post Author: Ravi Yadav