ಬಿಜೆಪಿ ಸರ್ಕಾರ ಸತ್ತಿದೆ ಎಂದ ದಿನೇಶ್ ಗುಂಡೂರಾವ್ ವಿರುದ್ಧ ಕಿಡಿಕಾರಿ ಸುಧಾಕರ್ ಹೇಳಿದ್ದೇನು ಗೊತ್ತಾ??

ದಿನೇಶ್ ಗುಂಡೂರಾವ್ ರವರು ಮತ್ತೊಮ್ಮೆ ಮಾಧ್ಯಮಗಳ ಮುಂದೆ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಎಂದಿನಂತೆ ಮಾಧ್ಯಮಗಳ ಮುಂದೆ ಬಿಜೆಪಿ ಸರ್ಕಾರವನ್ನು ಕಟು ಮಾತುಗಳಿಂದ ನಿಂದನೆ ಮಾಡಿದ ದಿನೇಶ್ ಗುಂಡೂರಾವ್ ರವರು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸತ್ತು ಹೋಗಿದೆ, ಅಧಿಕಾರ ನಡೆಸಲು ಕೈಯಲ್ಲಿ ಸಾಧ್ಯವಾಗಿಲ್ಲ ಎಂದರೆ ಯಡಿಯೂರಪ್ಪ ನವರು ತಮ್ಮ ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟು ಕೆಳಗೆ ಇಳಿಯಬೇಕು. ಅದನ್ನು ನಾವು ಸಮರ್ಥವಾಗಿ ನಿರ್ವಹಣೆ ಮಾಡುತ್ತೇವೆ ಎಂದು ಮಾಧ್ಯಮಗಳ ಮುಂದೆ ಕಿಡಿಕಾರಿದರು. ಇದನ್ನು ಗಮನಿಸಿದ ಸುಧಾಕರ್ ಅವರು ಇಂದು ಚಿಕ್ಕಬಳ್ಳಾಪುರ ಗ್ರಾಮದಲ್ಲಿ ನೂತನ ಕಾಲೇಜಿನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿ ಸುಧಾಕರ್ ಅವರು ಬಿಜೆಪಿ ಸರ್ಕಾರವನ್ನು ಟೀಕಿಸಿದ ದಿನೇಶ್ ಗುಂಡೂರಾವ್ ರವರಿಗೆ ಅವರ ಯೋಗ್ಯತೆಗೆ ತಕ್ಕಂತೆ ಮಾತನಾಡಲಿ ಎಂದು ಮಾತನ್ನು ಆರಂಭಿಸಿ ಕಠಿಣವಾದ ಶಬ್ದಗಳಿಂದ ತಿರುಗೇಟು ನೀಡಿದ್ದಾರೆ. ಈ ಮೂಲಕ ಮೊದಲಿನಿಂದಲೂ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ದಿನೇಶ್ ಗುಂಡೂರಾವ್ ರವರ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ಕಿಡಿ ಕಾರುತ್ತಿರುವ ಸಾಲಿಗೆ ಇದೀಗ ಸುಧಾಕರ್ ಅವರು ಸೇರಿಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್ ಅವರು, ದಿನೇಶ್ ಗುಂಡೂರಾವ್ ರವರು ಮೊದಲು ತಮ್ಮ ಯೋಗ್ಯತೆಯನ್ನು ಅರಿತುಕೊಂಡು ಮಾತನಾಡಲಿ, ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ನಿಭಾಯಿಸುವುದನ್ನು ಕಲಿತುಕೊಳ್ಳಲಿ. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಇಂದು ಅದೋಗತಿ ತಲುಪಲು ನೇರವಾಗಿ ದಿನೇಶ್ ಗುಂಡೂರಾವ್ ರವರು ಕಾರಣ. ಇಡೀ ಕರ್ನಾಟಕ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಕೇವಲ ಒಂದು ಸ್ಥಾನ ಗೆದ್ದಾಗಲೇ ದಿನೇಶ್ ಗುಂಡೂರಾವ್ ರವರು ತಮ್ಮ ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ರಾಜೀನಾಮೆಯನ್ನು ನೀಡಿ ಕೆಳಗೆ ಇಳಿಯ ಬೇಕಿತ್ತು. ಮುಖ್ಯಮಂತ್ರಿ ಯಡಿಯೂರಪ್ಪನವರ ಬಗ್ಗೆ ಮಾತನಾಡಲು ದಿನೇಶ್ ಗುಂಡೂರಾವ್ ರವರಿಗೆ ಯಾವುದೇ ನೈತಿಕತೆ ಇಲ್ಲ. ಪ್ರವಾಹ ಪರಿಸ್ಥಿತಿಯನ್ನು ಬಿ.ಎಸ್ ಯಡಿಯೂರಪ್ಪ ನವರು ಬಹಳ ಸಮರ್ಥವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಮಂತ್ರಿ ಮಂಡಲ ಸಂಪೂರ್ಣ ಜನ ಪರವಾಗಿ ಕೆಲಸ ಮಾಡುತ್ತಿದೆ. ಕೇವಲ ಎರಡು ತಿಂಗಳಲ್ಲಿ ಯಾವುದೇ ಸರ್ಕಾರದ ಮೌಲ್ಯ ಮಾಪನ ಮಾಡಲು ಸಾಧ್ಯವೇ ಇಲ್ಲ ಎಂದು ಬಿಜೆಪಿ ಸರ್ಕಾರದ ಪರ ಮಾತನಾಡಿದ್ದಾರೆ.

Post Author: Ravi Yadav