ಮೋದಿ ಅಲ್ಲಾ, ಶಾ ಅಲ್ಲಾ – ರಫೇಲ್ ಯುದ್ಧ ವಿಮಾನ ಬಂದ ಸಂತಸದಲ್ಲಿ ಮೂಲ ಅಪ್ರತಿಮ ನಾಯಕನ್ನು ಎಲ್ಲರೂ ಮರೆತು ಬಿಟ್ಟರೇ??

ಈಗ ಎಲ್ಲಿ ನೋಡಿದರೂ ಇಡೀ ದೇಶದಲ್ಲಿ ರಫೇಲ್ ಯುದ್ಧ ವಿಮಾನ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡ ಸುದ್ದಿ ಹರಿದಾಡುತ್ತಿದೆ. ದೇಶದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಫ್ರಾನ್ಸ್ ದೇಶಕ್ಕೆ ತೆರಳಿ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿದು ಆಯುಧ ಪೂಜೆಯನ್ನು ನೆರವೇರಿಸಿ, ಮೊದಲ ಬಾರಿಗೆ ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿ ವಾಪಸ್ಸಾಗಿದ್ದಾರೆ. ಇವರ ಈ‌ ನಡೆ ಭಾರಿ ವಿವಾದವನ್ನು ಸಹ ಸೃಷ್ಟಿಸಿದೆ. ಸತ್ಯ ಹೇಳಬೇಕು ಎಂದರೆ, ತಮ್ಮ ತಮ್ಮ ಮನೆಗಳಲ್ಲಿ ತಮ್ಮ ತಮ್ಮ ಆಯುಧಗಳಿಗೆ ಪೂಜೆ ಸಲ್ಲಿಸಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿರುವ ನಾಯಕರು ದೇಶದ ಹಬ್ಬವನ್ನೂ ಮರೆತು ಕೇವಲ ಬಿಜೆಪಿ ಪಕ್ಷದ ನಡೆಯನ್ನು ಟೀಕಿಸುವ ಭರದಲ್ಲಿ ಮನಬಂದಂತೆ ವಾಗ್ದಾಳಿ ನಡೆಸಿದ್ದಾರೆ. ಇಷ್ಟೆಲ್ಲಾ ವಿದ್ಯಮಾನಗಳ ನಡುವೆ ದೇಶದ ಬಹುತೇಕ ಜನ ರಫೇಲ್ ಯುದ್ಧ ವಿಮಾನಗಳ ಸೇರಿಸುವಿಕೆಯನ್ನು ಸಂಭ್ರಮಿಸುತ್ತಿದ್ದಾರೆ.

ಆದರೆ, ಈ ಎಲ್ಲಾ ಸಂಭ್ರಮ ಹಾಗೂ ವಿವಾದಗಳ ನಡುವೆ ಎಲ್ಲರೂ ರಫೇಲ್ ಯುದ್ಧ ವಿಮಾನಗಳ ಮೂಲವನ್ನು ಮರೆತ್ತೀದ್ದೇವೆ. ಹೌದು, ರಫೇಲ್ ಯುದ್ಧ ವಿಮಾನಗಳು ಹಲವಾರು ವರ್ಷಗಳಿಂದ ಭಾರತೀಯ ವಾಯುಪಡೆಯು ಕನಸಾಗಿದ್ದವು, ಈ ಕನಸನ್ನು ನನಸು ಮಾಡಿದ್ದು, ಅಭಿವೃದ್ಧಿಯ ಹರಿಕಾರ ಎಂದೇ ಖ್ಯಾತಿ ಪಡೆದಿರುವ ಅಜಾತಶತ್ರು ದಿವಂಗತ ಮನೋಹರ್ ಪರಿಕ್ಕರ್. ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ರವರು ರಫೇಲ್ ಯುದ್ಧ ವಿಮಾನಗಳನ್ನು ಭಾರತಕ್ಕೆ ತರಲು ಹರಸಾಹಸ ಮಾಡಿ ವಿಶ್ವದ ಅತೀ ದೊಡ್ಡ ರಕ್ಷಣಾ ಒಪ್ಪಂದಗಳಲ್ಲಿ ಒಂದಾದ ರಫೇಲ್ ಒಪ್ಪಂದಕ್ಕೆ ಸಹಿ ಹಾಕಿ, ಭಾರತೀಯ ವಾಯುಪಡೆಗೆ ಸೇರಿಸಲು ಮಹತ್ವದ ಹೆಜ್ಜೆ ಇಟ್ಟಿದ್ದರು. ಇವರೇ ಕಾರಣದಿಂದಾಗಿಯೇ ಇಂದು ಭಾರತೀಯ ಸೇನೆಯ ಕನಸು ನನಸಾಗಿದೆ ಹಾಗೂ ನೆರೆಯ ಶತ್ರು ರಾಷ್ಟ್ರಗಳಿಗೆ ನಡುಕ ಆರಂಭವಾಗಿದೆ. ಮನೋಹರ್ ಪರಿಕ್ಕರ್ ಸರ್ ರವರಿಗೆ ನಮ್ಮ ತಂಡದ ವತಿಯಿಂದ ಅನಂತ ನಮಸ್ಕಾರಗಳು.

Post Author: Ravi Yadav