ರಫೆಲ್ ಯುದ್ಧ ವಿಮಾನದ ಹಾರಾಟ ಹಾಗೂ ಪೂಜೆಯ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು ಗೊತ್ತಾ??

ಭಾರತೀಯ ಹಿಂದೂ ಸಂಪ್ರದಾಯ ದಂತೆ ಪ್ರತಿ ವರ್ಷ ಇಡೀ ದೇಶದಲ್ಲಿ ಎಲ್ಲಾ ರೀತಿಯ ಜನರು ತಮ್ಮ ತಮ್ಮ ಆಯುಧಗಳಿಗೆ ಪೂಜೆ ಸಲ್ಲಿಸಿ ದೇವರ ಬಳಿ ಪ್ರಾರ್ಥನೆ ಸಲ್ಲಿಸುತ್ತಾರೆ. ಇದೇ ಆಚಾರ-ವಿಚಾರವನ್ನು ಕೇಂದ್ರ ಸರ್ಕಾರ ಯುದ್ಧ ವಿಮಾನಗಳಿಗೆ ಪೂಜೆ ಮಾಡುವ ಮೂಲಕ ಎತ್ತಿ ಹಿಡಿದಿದೆ. ಅದರಲ್ಲಿಯೂ, ಭಾರತಕ್ಕೆ ಆಗಮಿಸುತ್ತಿರುವ ವಿಶ್ವದ ಅತಿ ಬಲಾಢ್ಯ ಯುದ್ಧ ವಿಮಾನ ಎಂದೇ ಖ್ಯಾತಿ ಪಡೆದು ಕೊಂಡಿರುವ ರಫೆಲ್ ಯುದ್ಧ ವಿಮಾನಕ್ಕೆ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರವರು ಫ್ರಾನ್ಸ್ ದೇಶಕ್ಕೆ ತೆರಳಿ ಹಿಂದು ಆಚರಣೆಯ ಪ್ರಕಾರ ರಫೆಲ್ ಯುದ್ಧ ವಿಮಾನಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ವಿಮಾನದಲ್ಲಿ ಹಾರಾಟ ನಡೆಸಿದ್ದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ಆದರೆ ಇದೀಗ ರಾಜನಾಥ್ ಸಿಂಗ್ ರವರ ಈ ನಡೆಯ ಕುರಿತು ಪರ-ವಿರೋಧದ ಹೇಳಿಕೆಗಳು ಹೆಚ್ಚಾಗಿವೆ.

ಇದರ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆಯವರು, ನಾವು ಇಲ್ಲಿಯವರೆಗೂ ಯಾವುದೇ ಶಸ್ತ್ರಾಸ್ತ್ರ ಗಳನ್ನು ಖರೀದಿ ಮಾಡಿದಾಗ ಅವುಗಳನ್ನು ಪೂಜೆ ಮಾಡಿರಲಿಲ್ಲ. ಆದರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಫೆಲ್ ಯುದ್ಧ ವಿಮಾನಗಳಿಗೆ ಆಯುಧ ಪೂಜೆ ಮಾಡುವ ಮೂಲಕ ನಾಟಕ ಮಾಡಿದ್ದಾರೆ, ಇದರ ಅಗತ್ಯ ಇರಲಿಲ್ಲ. ಭಾರತೀಯ ವಾಯುಪಡೆಯ ಅಧಿಕಾರಿಗಳು, ರಫೆಲ್ ಯುದ್ಧ ವಿಮಾನಗಳನ್ನು ಪರಿಶೀಲಿಸಿ ಸಾಮರ್ಥ್ಯವನ್ನು ಅಳೆದು ತೂಗಿ ಸಂಪೂರ್ಣ ವರದಿಯನ್ನು ಸಲ್ಲಿಸುತ್ತಿದ್ದರು. ಆದರೆ ರಾಜನಾಥ್ ಸಿಂಗ್ ಅವರು ಫ್ರಾನ್ಸ್ ದೇಶಕ್ಕೆ ತೆರಳಿ, ವಿಮಾನದಲ್ಲಿ ಕುಳಿತು ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಖರ್ಗೆ ರವರ  ಹೇಳಿಕೆಗೆ ಕೆಲವೊಂದು ಕಡೆ ಪ್ರಶಂಸೆಗಳು ವ್ಯಕ್ತವಾದರೂ, ಮತ್ತೊಂದೆಡೆ ಭಾರೀ ಆಕ್ರೋಶ ವ್ಯಕ್ತವಾಗಿದೆ.