ಪಾಕಿಸ್ತಾನ ಚೀನಾಗೆ ಮರ್ಮಾಘಾತ ! ಏಟಿಗೆ ತಕ್ಕ ತಿರುಗೇಟು ನೀಡಿದ ಮೋದಿ ಸರ್ಕಾರ !

ಪಾಕಿಸ್ತಾನಕ್ಕೆ ಇತ್ತೀಚಿಗೆ ನರೇಂದ್ರ ಮೋದಿ ರವರ ನೇತೃತ್ವದ ಸರ್ಕಾರ ನೀಡುತ್ತಿರುವ ಹೊಡೆತಗಳಿಗೆ ದಿಕ್ಕೇ ತೋಚದಂತಾಗಿದೆ. ಏನೇ ಹೊಸ ಕುತಂತ್ರ ಮಾಡಿದರೂ ಸಹ ಭಾರತ ನೀಡುತ್ತಿರುವ ಹೊಡೆತಗಳಿಗೆ ತತ್ತರಿಸಿಹೋಗಿದೆ. ಇತ್ತೀಚಗಷ್ಟೇ ಕಾಶ್ಮೀರದ ವಿಚಾರದಲ್ಲಿ ಭಾರಿ ಮುಖಭಂಗ ಅನುಭವಿಸಿದ ನಂತರ ಪಾಕಿಸ್ತಾನವು ಎಂದಿನಂತೆ ಭಾರತದ ವಿರುದ್ಧ ಹೋರಾಡಲು ಸಾಧ್ಯವಾಗದೆ ಬೆನ್ನಿಗೆ ಚೂರಿ ಹಾಕಲು ಉಗ್ರರಿಗೆ ಬೆಂಬಲ ನೀಡಲು ಮುಂದಾಗಿತ್ತು. ತನ್ನ ಒಬ್ಬನ ಕೈಯಲ್ಲಿ ಏನು ಮಾಡಲು ಸಾಧ್ಯವಿಲ್ಲ ಎಂಬುದನ್ನು ಅರಿತ ಪಾಕಿಸ್ತಾನವು ಮತ್ತೊಂದು ಕುತಂತ್ರಿ ರಾಷ್ಟ್ರವಾದ ಚೀನಾ ದೇಶದ ಸಹಾಯವನ್ನು ಪಡೆದುಕೊಂಡು ಚೀನಾ ದೇಶದಿಂದ ಆಮದು ಮಾಡಿಕೊಳ್ಳಲಾದ ಡ್ರೋನ್ ಗಳ ಮೂಲಕ ಭಾರತದ ರೇಡಾರ್ ವ್ಯವಸ್ಥೆಗಳನ್ನು ಕಣ್ಣುತಪ್ಪಿಸಿ ಅತಿ ಕೆಳಗೆ ಡ್ರೋನ್ ಗಳನ್ನು ಹಾರಿಸಿ ಉಗ್ರರಿಗೆ ಶಸ್ತ್ರಾಸ್ತ್ರ ಪೂರೈಕೆ ಸೇರಿದಂತೆ ಗಡಿಯುದ್ದಕ್ಕೂ ಹಲವಾರು ಅಕ್ರಮ ನಡೆಗಳನ್ನು ಅನುಸರಿಸುತ್ತಿತ್ತು. ಈ ಡ್ರೋನ್ ಗಳನ್ನು ಕಂಡ ಭಾರತೀಯ ಸೇನೆಯು ಕ್ಷಣಮಾತ್ರದಲ್ಲಿ ಹೊಡೆದುರುಳಿಸಿ ತಕ್ಕ ತಿರುಗೇಟು ನೀಡಿದ್ದು ನಿಮಗೆಲ್ಲರಿಗೂ ತಿಳಿದೇ ಇದೆ.

ಆದರೆ ಪಾಕಿಸ್ತಾನವು ಖಂಡಿತ ಇಷ್ಟಕ್ಕೇ ಸುಮ್ಮನಾಗುವುದಿಲ್ಲ, ಮತ್ತಷ್ಟು ಡ್ರೋನ್ ಗಳನ್ನು ಬಳಸಿಕೊಂಡು ಇದೇ ರೀತಿಯ ಕುತಂತ್ರಗಳನ್ನು ನಡೆಸುವ ಸಾಧ್ಯತೆ ಹೆಚ್ಚಾಗಿರುವ ಕಾರಣ ನರೇಂದ್ರ ಮೋದಿ ರವರ ಸರ್ಕಾರ ಇದೀಗ ಭಾರತೀಯ ಸೇನೆಗೆ ಹೊಸದೊಂದು ಯೋಜನೆ ಜಾರಿ ಮಾಡಿದೆ. ಈ ಯೋಜನೆಯಡಿಯಲ್ಲಿ ಈ ಕೂಡಲೇ ಗಡಿಯುದ್ದಕ್ಕೂ ಡ್ರೋನ್ ಗಳನ್ನು ತಡೆ ಹಿಡಿಯಲು ಡ್ರೋನ್ ವಿರೋಧಿ ಶಸ್ತ್ರಾಸ್ತ್ರಗಳಾಗಿರುವ ಸ್ಕೈ ಬೇಲಿ ಹಾಗೂ ಡ್ರೋನ್ ಗನ್ ಗಳನ್ನು ನಿಯೋಜನೆ ಮಾಡಲು ಸೂಚನೆ ನೀಡಿದೆ. ಡ್ರೋನ್ ಗಳು ಇತ್ತೀಚಿಗೆ ಹೆಚ್ಚಾಗುತ್ತಿರುವ ಕಾರಣ ಇದರಿಂದ ಅಪಾಯಗಳು ಸಹ ಹೆಚ್ಚಾಗುತ್ತಿವೆ. ಅದೇ ಕಾರಣದಿಂದ ಇನ್ನು ಮುಂದೆ ಭಾರತ ಹಾಗೂ ಪಾಕಿಸ್ತಾನದ ಗಡಿಯುದ್ದಕ್ಕೂ ಯಾವುದೇ ಡ್ರೋನ್ ಗಳು ಓಡಾಡದಂತೆ ಸ್ಕೈ ಬೇಲಿ , ಡ್ರೋನ್ ಗನ್, ಡ್ರೋನ್ ಕ್ಯಾಚರ್ ಗಳು ಹಾಗೂ ಸ್ಕೈವಾಕ್ 100 ನಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ಭಾರತೀಯ ಸೇನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಭಾರತ ಸೇನೆಯ ಕಷ್ಟಕ್ಕೆ ಕೂಡಲೇ ಸ್ಪಂದಿಸಿರುವ ಕೇಂದ್ರ ಸರ್ಕಾರಕ್ಕೆ ತುಂಬು ಹೃದಯದ ಧನ್ಯವಾದಗಳು.

Post Author: Ravi Yadav