ಚಾಣಕ್ಯ ನೀತಿ! ಅತೃಪ್ತ ಶಾಸಕರಿಗೆ ಟಿಕೆಟ್ ನೀಡಲು ಕಠಿಣ ಷರತ್ತು ವಿಧಿಸಿದ ಅಮಿತ್ ಶಾ ! ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ !!

ಚಾಣಕ್ಯ ನೀತಿ! ಅತೃಪ್ತ ಶಾಸಕರಿಗೆ ಟಿಕೆಟ್ ನೀಡಲು ಕಠಿಣ ಷರತ್ತು ವಿಧಿಸಿದ ಅಮಿತ್ ಶಾ ! ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ !!

ಇದೀಗ ಎಲ್ಲಿ ನೋಡಿದರೂ ಅನರ್ಹ ಶಾಸಕರ ಭವಿಷ್ಯದ ಮಾತುಗಳು ಭಾರಿ ಸದ್ದು ಮಾಡುತ್ತಿವೆ,ಎಲ್ಲರೂ ಮುಂದೇನಾಗುತ್ತದೆ ಎಂದು ಕಾದು ಕುಳಿತಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಶಾಸಕರಾಗಿ ಗೆದ್ದು ಬಂದ 15 ಜನ ಮಾಜಿ ಶಾಸಕರು ಮೈತ್ರಿ ಸರ್ಕಾರದ ವಿರುದ್ಧ ಹಾಗೂ ಕುಮಾರಸ್ವಾಮಿ ರವರ ಆಡಳಿತದ ವಿರುದ್ಧ ತಿರುಗಿ ಬಿದ್ದು ಮುಂಬೈಗೆ ತೆರಳಿ ರಾಜೀನಾಮೆ ನೀಡಿ ಮೈತ್ರಿ ಸರ್ಕಾರವನ್ನು ಉರುಳಿಸುವ ಮೂಲಕ ಬಿಜೆಪಿ ಪಕ್ಷ ಅಧಿಕಾರಕ್ಕೆ ಏರುವಲ್ಲಿ ಸಹಾಯ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನಾಯಕರು ಎಲ್ಲಾ ಶಾಸಕರನ್ನು ಅನರ್ಹರು ಎಂದು ಘೋಷಣೆ ಮಾಡಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸದೇ ಇರುವಂತೆ ಮಾಡಲು ಪ್ರಯತ್ನ ಪಟ್ಟಿದ್ದರು. ಅದೇ ಕಾರಣದಿಂದ ಈ ಎಲ್ಲಾ ಶಾಸಕರು ಇದೀಗ ಬಿಜೆಪಿ ಪಕ್ಷದಿಂದ ಉಪ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಆದರೆ ಬಿಜೆಪಿ ಪಕ್ಷ ಈ ಎಲ್ಲಾ 15 ಶಾಸಕರಿಗೂ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದರೇ ಮೂಲ ಬಿಜೆಪಿಗರು ಹಾಗೂ ಎಲ್ಲಾ 15 ಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರು ಬಂಡಾಯ ಏಳುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಇಷ್ಟು ದಿವಸ ಬಿಜೆಪಿ ಪಕ್ಷಕ್ಕಾಗಿ ದುಡಿದು ಇದೀಗ ಬೇರೊಂದು ಪಕ್ಷದಿಂದ ಬಂದ ನಾಯಕರಿಗೆ ಮಣೆ ಹಾಕಿದರೇ ಸಾಮಾನ್ಯವಾಗಿ ಎಲ್ಲರೂ ಬಂಡಾಯ ಏಳುವ ಸೂಚನೆಗಳು ಹೆಚ್ಚಾಗಿರುತ್ತವೆ. ಅಷ್ಟೇ ಅಲ್ಲದೆ ಇಂತಹ ಸನ್ನಿವೇಶಗಳನ್ನು ವಿರೋಧ ಪಕ್ಷಗಳಾಗಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಲಾಭ ಪಡೆಯಲು ಬಳಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಇನ್ನು ಈ ಬಿಜೆಪಿ ನಾಯಕರು ಬೇರೊಂದು ಪಕ್ಷಕ್ಕೆ ವಲಸೆ ಹೋದಲ್ಲಿ ಎಲ್ಲಾ ಅನರ್ಹ ಶಾಸಕರು ಗೆದ್ದು ಬರುವುದು ಬಹುತೇಕ ಅನುಮಾನವಾಗಲಿದೆ‌.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಪಕ್ಷದ ಚಾಣಕ್ಯ ಎಂದೇ ಖ್ಯಾತಿ ಪಡೆದು ಕೊಂಡಿರುವ ಅಮಿತ್ ಶಾ ರವರು, ಬಿಜೆಪಿ ಪಕ್ಷದಲ್ಲಿ ಬಂಡಾಯವನ್ನು ಹತ್ತಿಕ್ಕಲು ಹಾಗೂ ಅನರ್ಹ ಶಾಸಕರ ನಾಯಕತ್ವದ ಗುಣಗಳು ಸೇರಿದಂತೆ ಇನ್ನಿತರ ರಾಜಕೀಯ ತಂತ್ರಗಳನ್ನು ಅರಿಯಲು ಅನರ್ಹ ಶಾಸಕರು ಬಿಜೆಪಿ ಪಕ್ಷದಿಂದ ಟಿಕೆಟ್ ಪಡಿಯಬೇಕು ಎಂದರೇ ಕಠಿಣ ಶರತ್ತನ್ನು ವಿಧಿಸಿದ್ದಾರೆ. ಈ ಮೂಲಕ ಬಿಜೆಪಿ ಪಕ್ಷದಲ್ಲಿ ಭುಗಿಲೇಳುವ ಅಸಮಾಧಾನವನ್ನು ಹತ್ತಿಕ್ಕಿ, ಉಪಚುನಾವಣೆಯಲ್ಲಿ ಭರ್ಜರಿ ಗೆಲುವನ್ನು ದಾಖಲಿಸುವ ಮೂಲಕ ಕರ್ನಾಟಕ ರಾಜ್ಯದಲ್ಲಿ ಸಂಪೂರ್ಣ ನಾಲ್ಕು ವರ್ಷಗಳ ಅಧಿಕಾರ ನಡೆಸಲು ನೀತಿ ಹೆಣೆದಿದ್ದಾರೆ. ಅಷ್ಟಕ್ಕೂ ಅಮಿತ್ ಶಾ ರವರು ನೀಡಿರುವ ಜವಾಬ್ದಾರಿ ಏನು ಗೊತ್ತಾ?

ಬಿಜೆಪಿ ಪಕ್ಷದಲ್ಲಿ ಅನರ್ಹ ಶಾಸಕರಿಗೆ ಟಿಕೆಟ್ ನೀಡಿದರೇ ಮೂಲ ಬಿಜೆಪಿಗರು ಬಂಡಾಯ ಏಳುವ ಸಾಧ್ಯತೆ ಇದೆ, ಆದ ಕಾರಣದಿಂದ ಎಲ್ಲಾ ಅನರ್ಹ ಶಾಸಕರು ಟಿಕೆಟ್ ಪಡೆಯುವ ಮುನ್ನ ಮೂಲ ಬಿಜೆಪಿ ಪಕ್ಷದ ಅಭ್ಯರ್ಥಿ ಸ್ಥಾನದ ಆಕಾಂಕ್ಷಿ ಗಳಾಗಿರುವ ಬಿಜೆಪಿ ಪಕ್ಷದ ನಾಯಕರನ್ನು ಮನವೊಲಿಸಿ ತದನಂತರ ಬಿಜೆಪಿ ಪಕ್ಷದಿಂದ ಟಿಕೆಟ್ ಕೇಳಬೇಕು ಎಂದು ಆದೇಶ ಹೊರಡಿಸಿದ್ದಾರೆ. ಒಂದು ವೇಳೆ ಅನರ್ಹ ಶಾಸಕರು ಮೂಲ ಬಿಜೆಪಿಗರ ಮನವೊಲಿಸಲು ವಿಫಲವಾದಲ್ಲಿ, ಅನರ್ಹ ಶಾಸಕರಿಗೆ ಟಿಕೆಟ್ ಪಡೆಯುವ ದಾರಿ ಕಠಿಣವಾಗಲಿದೆ. ಅಷ್ಟೇ ಅಲ್ಲದೆ ಕ್ಷೇತ್ರದ ಎಲ್ಲ ಬಿಜೆಪಿ ಮುಖಂಡರು ಸೇರಿದಂತೆ, ಕಾರ್ಯ ಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡರೇ ಮಾತ್ರ ಬಿಜೆಪಿ ಪಕ್ಷದಿಂದ ಟಿಕೆಟ್ ನೀಡಲಾಗುತ್ತದೆ ಎಂದು ಆದೇಶ ಹೊರಡಿಸಿದ್ದಾರೆ.