ಸೋನಿಯಾ ಭದ್ರಕೋಟೆ ಗೆ ಮತ್ತೊಮ್ಮೆ ಎಂಟ್ರಿಕೊಟ್ಟ ಇಡಿ ಅಧಿಕಾರಿಗಳು ! ನಡೆಯುತ್ತಿದೆ ಮತ್ತೊಂದು ಮಹಾ ಬೇಟೆ

ಸೋನಿಯಾ ಭದ್ರಕೋಟೆ ಗೆ ಮತ್ತೊಮ್ಮೆ ಎಂಟ್ರಿಕೊಟ್ಟ ಇಡಿ ಅಧಿಕಾರಿಗಳು ! ನಡೆಯುತ್ತಿದೆ ಮತ್ತೊಂದು ಮಹಾ ಬೇಟೆ

ಇದೀಗ ಎಲ್ಲಿ ನೋಡಿದರೂ ಈ.ಡಿ ಅಧಿಕಾರಿಗಳು ಭರ್ಜರಿ ಬೇಟೆ ಮಾಡುತ್ತಿರುವ ಸುದ್ದಿಗಳು ಕಾಣಸಿಗುತ್ತಿವೆ. ಭ್ರಷ್ಟರ ಬೆನ್ನತ್ತಿರುವ ಅಧಿಕಾರಿಗಳು ಈಗಾಗಲೇ ಹಲವಾರು ಪ್ರತಿಷ್ಠಿತ ರಾಜಕೀಯ ನಾಯಕರನ್ನು ಜೈಲಿಗೆ ಕಳುಹಿಸಿದೆ. ಇನ್ನು ಕೆಲವು ಪ್ರತಿಷ್ಠಿತ ನಾಯಕರು ಜಾಮೀನು ಅರ್ಜಿಗಾಗಿ ನ್ಯಾಯಾಲಯಕ್ಕೆ ಅಲೆದಾಡುವಂತೆ ಮಾಡಿದೆ. ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎನ್ನಲಾಗುತ್ತಿರುವ ಆರೋಪಿಗಳು ಎಷ್ಟು ಬಾರಿ ಜಾಮೀನು ಪಡೆಯಲು ನ್ಯಾಯಾಲಯದ ಮೊರೆ ಹೋದರೂ ಸಹ ಈ.ಡಿ ಅಧಿಕಾರಿಗಳು ದಿನಕ್ಕೊಂದು ಹೊಸ ದಾಖಲೆಗಳನ್ನು ಸಂಗ್ರಹಣೆ ಮಾಡಿ ನ್ಯಾಯಾಲಯದ ಮುಂದೆ ವಾದ ಮಂಡಿಸುತ್ತಿರುವ ಕಾರಣ ಪ್ರತಿಷ್ಠಿತ ನಾಯಕರು ಜಾಮೀನು ಸಿಗದೇ ಜೈಲಿನಲ್ಲಿ ಕೂರುವಂತಹ ಪರಿಸ್ಥಿತಿ ಎದುರಾಗಿದೆ. ಹೀಗಿರುವಾಗ ಮತ್ತೊಂದು ಭರ್ಜರಿ ಬೇಟೆಗೆ ಈ.ಡಿ ಅಧಿಕಾರಿಗಳು ಸಿದ್ಧರಾಗಿದ್ದಾರೆ.

ಇದೀಗ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ರವರ ಭದ್ರಕೋಟೆಗೆ ಎಂಟ್ರಿ ಕೊಟ್ಟಿರುವ ಈ.ಡಿ ಅಧಿಕಾರಿಗಳು, ಈಗಾಗಲೇ ಹಲವಾರು ಪ್ರಕರಣಗಳನ್ನು ಮೈಮೇಲೆ ಎಳೆದುಕೊಂಡು, ಇಡೀ ದೇಶದಲ್ಲಿ ಸದ್ದು ಮಾಡಿರುವ ಸೋನಿಯಾ ಗಾಂಧಿ ರವರ ಅಳಿಯ ರಾಬರ್ಟ್ ವಾದ್ರ ರವರ ಬಂಧನಕ್ಕೆ ಬಲೆ ಬೀಸಿದ್ದಾರೆ. ಈಗಾಗಲೇ ಹಲವಾರು ಬಾರಿ ರಾಬರ್ಟ್ ವಾದ್ರಾ ಅವರು ಜಾಮೀನು ಪಡೆದು ಕೊಂಡಿರುವ ಕಾರಣ ಈ ಬಾರಿಯಾದರೂ ತನಿಖೆ ನಡೆಸಲು ಅವಕಾಶ ನೀಡಬೇಕು ಹಾಗೂ ಯಾವುದೇ ಕಾರಣಕ್ಕೂ ಮತ್ತೊಮ್ಮೆ ರಾಬರ್ಟ್ ವಾದ್ರಾ ರವರಿಗೆ ಜಾಮೀನು ನೀಡಿ, ತನಿಖೆಯನ್ನು ಮುಂದೂಡ ಬಾರದು ಎಂದು ಈ.ಡಿ ಅಧಿಕಾರಿಗಳು ವಾದ ಮಂಡಿಸಿದ್ದಾರೆ. ಈ ಮೂಲಕ ಇದೀಗ ಸೋನಿಯಾ ಗಾಂಧಿ ರವರ ಅಳಿಯ ರಾಬರ್ಟ್ ವಾದ್ರಾ ರವರಿಗೆ ಬಂಧನ ಭೀತಿ ಎದುರಾಗಿದ್ದು, ನ್ಯಾಯಾಲಯದ ಮುಂದಿನ ಹೆಜ್ಜೆ ಅಥವಾ ನಿರ್ಧಾರ ಏನಾಗಿರುತ್ತದೆ ಎಂದು ಇಡೀ ದೇಶದ ಜನರು ಕಾದು ಕುಳಿತಿದ್ದಾರೆ.