ನಿರ್ಮಲ ಸೀತಾರಾಮನ್ ರವರ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಸುಬ್ರಹ್ಮಣ್ಯಂ ಸ್ವಾಮಿ

ನಿರ್ಮಲ ಸೀತಾರಾಮನ್ ರವರ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಸುಬ್ರಹ್ಮಣ್ಯಂ ಸ್ವಾಮಿ

ಕೇಂದ್ರ ಸರ್ಕಾರದ ಕಾನೂನು ಹಾಗೂ ವಾಣಿಜ್ಯ ಇಲಾಖೆಯ ಮಾಜಿ ಸಚಿವರಾಗಿರುವ ಸುಬ್ರಮಣ್ಯಂ ಸ್ವಾಮಿ ರವರು ಮೊದಲಿನಿಂದಲೂ ತಮ್ಮ ನೇರವಾದ ಮಾತುಗಳಿಂದ ಪ್ರಸಿದ್ಧರು. ದೇಶ ಹಾಗೂ ಹಿಂದುತ್ವ ಎಂದ ಕೂಡಲೇ ಸಿಡಿದೇಳುವ ಸುಬ್ರಮಣ್ಯಸ್ವಾಮಿ ರವರು, ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇಷ್ಟು ದಿವಸ ಬಿಜೆಪಿ ಪಕ್ಷದ ನಿರ್ಧಾರಗಳನ್ನು ಹಾಡಿ ಹೊಗಳಿ ಬಿಜೆಪಿ ಪಕ್ಷದ ಪರವಾಗಿ ಬಹುತೇಕ ನಿಲುವನ್ನು ಪ್ರದರ್ಶನ ಮಾಡುತ್ತಿದ್ದ ಸುಬ್ರಹ್ಮಣ್ಯಂ ಸ್ವಾಮಿ ರವರು ಇದ್ದಕ್ಕಿದ್ದ ಹಾಗೇ ಇದೀಗ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಭಾರತದ ಆರ್ಥಿಕತೆಯ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿರುವ ಸುಬ್ರಹ್ಮಣ್ಯಂ ಸ್ವಾಮಿ ರವರು ನಿರ್ಮಲ ಸೀತಾರಾಮನ್ ರವರ ಬಗ್ಗೆ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ.

ಭಾರತದ ಆರ್ಥಿಕತೆ ದಿನೇ ದಿನೇ ನೆಲಕಚ್ಚುತ್ತಿದೆ, ನಿರ್ಮಲಾ ಸೀತಾರಾಮನ್ ರವರು ಇದರ ಬಗ್ಗೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದರೆ ಇತ್ತೀಚೆಗೆ ನಿರ್ಮಲ ಸೀತಾರಾಮನ್ ಕಾರ್ಪೊರೇಟ್ ಕಂಪನಿಗಳ ತೆರಿಗೆಯನ್ನು ಕಡಿಮೆ ಮಾಡಿರುವ ಬಗ್ಗೆ ಮಾತನಾಡಿರುವ ಸುಬ್ರಹ್ಮಣ್ಯಂ ಸ್ವಾಮಿ ಅವರು, ಕೇಂದ್ರ ಸರ್ಕಾರವು ಕಾರ್ಪೊರೇಟ್ ಕಂಪನಿಗಳ ತೆರಿಗೆಯನ್ನು ಕಡಿಮೆ ಮಾಡುವ ಬದಲು ಮಧ್ಯಮ ವರ್ಗದ ಜನರಿಗೆ ತೆರಿಗೆ ಇಲ್ಲ ಎಂಬ ಘೋಷಣೆ ಮಾಡಬೇಕಿತ್ತು, ಆಗ ಕಾಲಕ್ರಮೇಣ ಮಧ್ಯಮ ವರ್ಗದವರು ಬಲಿಷ್ಠವಾಗಿ ಕಾರ್ಪೊರೇಟ್ ಕಂಪನಿಗಳ ಜೊತೆ ವ್ಯವಹಾರ ನಡೆಸಲು ಮುಂದಾಗುತ್ತಿದ್ದರು, ಆದರೆ ಕಾರ್ಪೊರೇಟ್ ಕಂಪನಿಗಳ ತೆರಿಗೆಯನ್ನು ಕಡಿತಗೊಳಿಸಲಾಗಿದೆ. ಆದಾಯ ತೆರಿಗೆಯನ್ನು ಕಡಿಮೆ ಮಾಡುವುದು ಅಥವಾ ತೆಗೆಯುವುದು ಉತ್ತಮವಾದ ಹೆಜ್ಜೆ, ಮಧ್ಯಮ ವರ್ಗದವರಿಗೆ ಇದರಿಂದ ಸಂತೋಷವಾಗುತ್ತದೆ. ಏನು ಮಾಡುವುದು ಇದೆಲ್ಲ ಹಣಕಾಸು ಸಚಿವರಿಗೆ ತಿಳಿಯುವುದಿಲ್ಲ ಯಾಕೆಂದರೆ ಭಾರತದ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ರವರಿಗೆ ಅರ್ಥಶಾಸ್ತ್ರ ತಿಳಿದಿಲ್ಲ ಎಂದಿದ್ದಾರೆ.