ಬಿಗ್ ಬ್ರೇಕಿಂಗ್: ಡಿಕೆಶಿ ರೀತಿ ಜೈಲು ಸೇರಲಿದ್ದಾರಾ ಮತ್ತೊಬ್ಬ ಪ್ರಭಾವಿ ಮಾಜಿ ಕಾಂಗ್ರೆಸ್ ಸಚಿವ??

ಇದೀಗ ಕನಕಪುರ ಬಂಡೆ, ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಎಂದೆಲ್ಲಾ ಹೆಸರು ಪಡೆದುಕೊಂಡು ಕರ್ನಾಟಕ ರಾಜಕೀಯದಲ್ಲಿ ಮೆರೆದಿದ್ದ ಡಿ ಕೆ ಶಿವಕುಮಾರ್ ರವರು, ತಿಹಾರ್ ಜೈಲು ಸೇರಿದ ಮೊದಲ ಕನ್ನಡಿಗ ಎಂಬ ಕುಖ್ಯಾತಿಗೆ ಇಂದು ಒಳಗಾಗಿದ್ದಾರೆ. ನ್ಯಾಯಾಲಯ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಕಾರಣ, ಅಕ್ರಮ ಹಣ ವರ್ಗಾವಣೆ ಕೇಸಿನಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಡಿ ಕೆ ಶಿವಕುಮಾರ್ ರವರು ಇಂದು ಏಷ್ಯಾದ ಅತಿ ದೊಡ್ಡ ಜೈಲಾದ ತಿಹಾರ್ ಜೈಲಿನಲ್ಲಿ ಸಂಖ್ಯೆ 7 ರ ಕೊಠಡಿಯಲ್ಲಿ ಬಂಧನವಾಗಿರುವ ಬೆನ್ನಲ್ಲೇ ಇದೀಗ ಮತ್ತೊಬ್ಬ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ ಹಾಗೂ ಮೈತ್ರಿ ಸರ್ಕಾರದ ಅವಧಿಯಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ ಶಾಸಕರೊಬ್ಬರು ಜೈಲಿಗೆ ಹೋಗುವ ಸಾಧ್ಯತೆಗಳು ಹೆಚ್ಚಾಗಿವೆ.

ಹೌದು, ಇದೀಗ ಮಾಜಿ ಸಚಿವ ಹಾಗೂ ಇಂದಿನ ಶಾಸಕರಾಗಿರುವ ಜಮೀರ್ ಅಹ್ಮದ್ ರವರು, ಜೈಲು ಸೇರುವ ಸಾಧ್ಯತೆಗಳು ಹೆಚ್ಚಾಗಿವೆ. ಜನ ಸಾಮಾನ್ಯರಿಗೆ ಕೋಟ್ಯಂತರ ರೂ ಮೋಸ ಮಾಡಿ ವಂಚನೆ ಮಾಡಿರುವ ಮನ್ಸೂರ್ ಪ್ರಕರಣದಲ್ಲಿ ಜಮೀರ್ ಅಹ್ಮದ್ ಜೈಲು ಸೇರುವ ಸಾಧ್ಯತೆಗಳು ಹೆಚ್ಚಾಗಿವೆ. CBI ಸಂಸ್ಥೆಯು ಜಮೀರ್ ಅಹ್ಮದ್ ರವರನ್ನು ಬಾರಿ ವಿಚಾರಣೆಗೆ ಒಳಪಡಿಸಿದ್ದು, ಮನ್ಸೂರ್ ರವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದಷ್ಟೇ ಅಲ್ಲದೇ, ಹಲವಾರು ವ್ಯವಹಾರಗಳನ್ನು ಮನ್ಸೂರ್ ರವರ ಜೊತೆ ನಡೆಸಿದ್ದಾರೆ ಎಂಬುದಕ್ಕೆ CBI ಸಂಸ್ಥೆಯು ದಾಖಲೆಗಳನ್ನು ಕಲೆ ಹಾಕಿದೆ ಎನ್ನಲಾಗಿದೆ. ಇದೀಗ ಜಮೀರ್ ಅಹ್ಮದ್ ರವರನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಿಸಲು ಬಂಧನ ಮಾಡುವ ಉದ್ದೇಶವನ್ನು CBI ಸಂಸ್ಥೆ ಹೊಂದಿದೆ ಎನ್ನಲಾಗುತ್ತಿದೆ. ಒಂದು ವೇಳೆ ಅದೇ ನಡೆದಲ್ಲಿ, ಡಿಕೆಶಿ ಹಾದಿಯಲ್ಲಿ ನಡೆಯಬೇಕಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.

Post Author: Ravi Yadav