ಡಿ ಕೆ ಶಿ ಹಾಗೂ ಕುಮಾರಸ್ವಾಮಿ ಗೆ ಒಂದೇ ಬಲೆ ಬೀಸಿದ ಬಿ ಸ್ ವೈ : ಮಹಾ ಹಗರಣ ಹೊರಕ್ಕೆ ಎಳೆಯಲು ಸಿದ್ದವಾದ ಬಿಜೆಪಿ

ಡಿ ಕೆ ಶಿ ಹಾಗೂ ಕುಮಾರಸ್ವಾಮಿ ಗೆ ಒಂದೇ ಬಲೆ ಬೀಸಿದ ಬಿ ಸ್ ವೈ : ಮಹಾ ಹಗರಣ ಹೊರಕ್ಕೆ ಎಳೆಯಲು ಸಿದ್ದವಾದ ಬಿಜೆಪಿ

ಬಿ ಸ್ ಯಡಿಯೂರನಪ್ಪ ರವರು ಮುಖ್ಯಮಂತ್ರಿಯಾದ ಮೇಲೆ ಹಲವಾರು ದಿಟ್ಟ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ಅದರಲ್ಲಿಯೂ ಕಳೆದ ಮೈತ್ರಿ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷ ಅಧಿಕಾರ ನಡೆಸಿದ ಸಮಯದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಹಗರಣಗಳ ಬಗ್ಗೆ ಬಹಳ ಒತ್ತು ನೀಡುತ್ತಿರುವ ಬಿ ಸ್ ಯಡಿಯೂರಪ್ಪನವರು, ಈಗಾಗಲೇ ಹಲವಾರು ಹಗರಣಗಳನ್ನು ತನಿಖೆಗೆ ಆದೇಶ ನೀಡಿದ್ದಾರೆ. ಇನ್ನು ಸಿಬಿಐ ಸಂಸ್ಥೆಯನ್ನು ಬಹಳ ನೆಚ್ಚಿಕೊಂಡಿರುವ ಬಿ ಸ್ ಯಡಿಯೂರನಪ್ಪ ರವರು ಹಲವಾರು ಹಗರಣಗಳನ್ನು ಸಂಸ್ಥೆಯ ಹೆಗಲಿಗೆ ಏರಿಸಿದ್ದಾರೆ. ಇದೀಗ ಇದೇ ರೀತಿಯಲ್ಲಿ ಮತ್ತೊಂದು ಹಗರಣದ ತನಿಖೆಗೆ ಆದೇಶ ನೀಡಿರುವ ಬಿ ಸ್ ಯಡಿಯೂರನಪ್ಪ ರವರು ಒಂದೇ ಆದೇಶದ ಮೂಲಕ ಡಿ ಕೆ ಶಿ ರವರಿಗೆ ಹಾಗೂ ಮಾಜಿ ಮುಖ್ಯಮಂತ್ರಿ ಹಾಗೂ ಇಂದಿನ ಚೆನ್ನಪಟ್ಟಣದ ಶಾಸಕ ಕುಮಾರಸ್ವಾಮಿ ರವರಿಗೆ ಶಾಕ್ ನೀಡಿದ್ದಾರೆ.

ಈಗಾಗಲೇ ಇ.ಡಿ ಅಧಿಕಾರಿಗಳ ಕೈಯಲ್ಲಿ ಸಿಲುಕಿ ಹಾಕಿಕೊಂಡಿರುವ ಡಿ ಕೆ ಶಿವಕಿಮಾರ್ ರವರು ಹಾಗೂ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ರವರ ಕೊರಳಿಗೆ ಹೊಸ ಹಗರಣ ಸುತ್ತಿಕೊಂಡಿದೆ. ಕುಮಾರ ಸ್ವಾಮಿ ರವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದ ಹಾಗೇ ಹಲವಾರು ನಿಯಮಗಳನ್ನು ಸಡಿಲಿಸಿ ಜಲಸಂಪನ್ಮೂಲ ಇಲಾಖೆಯಲ್ಲಿ ಟೆಂಡರ್ ನೀಡಲಾಗಿದೆ. ಟೆಂಡರ್ ನೀಡುವಾಗ ಸರ್ಕಾರೀ ನಿಯಮಗಳನ್ನು ಪಾಲಿಸಿಲ್ಲ. ಅಷ್ಟೇ ಅಲ್ಲದೆ, ೯೦೦೦ ಕೋಟಿ ರೂ ಇದ್ದ ನಿರ್ಮಾಣದ ವೆಚ್ಚವನ್ನು ಏಕಾಏಕಿ 23000 ಕೋಟಿ ಗಳಿಗೆ ಏರಿಸಲಾಗಿದೆ. ಈ ಮೂಲಕ ಅವ್ಯವಹಾರದ ಸೂಚಿನಗಳು ಸಿಕ್ಕಿವೆ. ಇದರ ಕುರಿತು ಈಗಾಗಲೇ ನೂರಾರು ದೂರುಗಳು ಬಂದಿದ್ದು, ಬಿ ಸ್ ವೈ ರವರು ಕಠಿಣ ಕ್ರಮದ ಭರವಸೆ ನೀಡಿದ್ದಾರೆ ಎನ್ನಲಾಗಿದೆ ಹಾಗೂ ಈ ಹಗರಣವನ್ನು ಸಿಬಿಐ ಸಂಸ್ಥೆಗೆ ವಹಿಸಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.