ಮೋದಿ ಕನಸಿಗೆ ತನ್ನ ವೇತನವನ್ನು ಮುಡಿಪಾಗಿಡಲು ಮುಂದಾದ ತ್ರಿಪುರ ಸಿಎಂ- ಮಾಡುತ್ತಿರುವುದಾದರೂ ಏನು ಗೊತ್ತಾ??

ಮೋದಿ ಕನಸಿಗೆ ತನ್ನ ವೇತನವನ್ನು ಮುಡಿಪಾಗಿಡಲು ಮುಂದಾದ ತ್ರಿಪುರ ಸಿಎಂ- ಮಾಡುತ್ತಿರುವುದಾದರೂ ಏನು ಗೊತ್ತಾ??

ಭಾರತದ ಅತಿ ಹೆಚ್ಚು ಜನಪ್ರಿಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ರವರ ಹಲವಾರು ಕನಸಿನ ಯೋಜನೆಗಳ ಬಗ್ಗೆ ಈಗಾಗಲೇ ನಿಮಗೆಲ್ಲರಿಗೂ ತಿಳಿದೇ ಇದೆ. ಅದರಲ್ಲಿಯೂ ನರೇಂದ್ರ ಮೋದಿ ರವರು ಇಡೀ ದೇಶವನ್ನು ಸ್ವಚ್ಛವಾಗಿ ಹಾಗೂ ಪ್ಲಾಸ್ಟಿಕ್ ಮುಕ್ತ ಮಾಡ್ಬೇಕು ಎಂದು ಹೋರಾಡುತ್ತಿದ್ದಾರೆ. ನದಿಗಳ ಸ್ವಚ್ಛತೆಯ ಬಗ್ಗೆಯೂ ಆಲೋಚನೆ ಮಾಡಿರುವ ನರೇಂದ್ರ ಮೋದಿ ರವರ ಭಾರತೀಯ ಹಿಂದೂಗಳು ತಾಯಿಯಷ್ಟೇ ಪವಿತ್ರ ಎಂದು ಅಂದುಕೊಂಡಿರುವ ಗಂಗಾ ನದಿ ಸ್ವಚ್ಛತೆ ಗಾಗಿ ತಮಗೆ ಬಂದ ಎಲ್ಲ ಪ್ರಶಸ್ತಿ ಹಣ ಹಾಗೂ ಉಡುಗೊರೆಗಳ ಮಾರಾಟದ ಮೂಲಕ ಬಂದ ಹಣವನ್ನು ಸಹ ಇದಕ್ಕಾಗಿಯೇ ಮುಡಿಪಾಗಿಟ್ಟಿದ್ದಾರೆ. ಇಂದು ಸಹ ತಮಗೆ ಬಂದ ಉಡುಗೊರೆಗಳನ್ನು ಹರಾಜಿಗೆ ಇಟ್ಟಿದ್ದಾರೆ.

ಇದೀಗ ನರೇಂದ್ರ ಮೋದಿ ರವರ ಮತ್ತೊಂದು ಕನಸಾದ ಸ್ವಚ್ಛ ಭಾರತ ಹಾಗೂ ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಮತ್ತೊಂದು ಬಲ ಸೇರಿಕೊಂಡಿದೆ. ತ್ರಿಪುರ ರಾಜ್ಯದ ಮುಖ್ಯಮಂತ್ರಿಗಳಾದ ಮೇಲೆ ತ್ರಿಪುರ ರಾಜ್ಯವನ್ನು ಹಿಂದೆಂದೂ ಕಾಣದ ವೇಗದಲ್ಲಿ ಅಭಿವೃದ್ಧಿ ಮಾಡುತ್ತಿರುವ ಮುಖ್ಯ ಮಂತ್ರಿ, ಬಿಪ್ಲಬ್​ ದೇಬ್ ರವರು ಇದೀಗ ತ್ರಿಪುರ ರಾಜ್ಯವನ್ನು ತ್ಯಾಜ್ಯ ವಿಮುಕ್ತ ಹಾಗೂ ಪ್ಲಾಸ್ಟಿಕ್ ಮುಕ್ತ ರಾಜ್ಯವನ್ನಾಗಿ ಮಾಡಲು, ರಾಜ್ಯದ ೧೧೦೦ ಹಳ್ಳಿಗಳ ಎಲ್ಲ ಮಾರುಕಟ್ಟೆಗಳಲ್ಲಿ ಪ್ರತ್ಯೇಕ ಕಸದ ಬುಟ್ಟಿಗಳ ವ್ಯವಸ್ಥೆ ಮಾಡಲು ತಮ್ಮ ಆರು ತಿಂಗಳ ವೇತನವನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಮೂಲಕ ನರೇಂದ್ರ ಮೋದಿ ರವರನ್ನು ಕನಸನ್ನು ನನಸು ಮಾಡಲು, ತ್ರಿಪುರ ರಾಜ್ಯ ಕೈ ಜೋಡಿಸಲಿದೆ ಎಂದು ಇದೇ ವೇಳೆಯಲ್ಲಿ ತಿಳಿಸಿದ್ದಾರೆ.