ಟ್ರಾಫಿಕ್ ದಂಡ ನಿಯಮದಲ್ಲಿ ಗೋವಾ ಸಿಎಂ ನಿರ್ಧಾರಕ್ಕೆ ದೇಶವೇ ಅಂದಿತು ಜೈ ! ನಮ್ಮ ರಾಜ್ಯದಲ್ಲೂ ಹೀಗೆ ಜಾರಿಯಾಗಬೇಕು ಏನಂತೀರಾ??

ಟ್ರಾಫಿಕ್ ದಂಡ ನಿಯಮದಲ್ಲಿ ಗೋವಾ ಸಿಎಂ ನಿರ್ಧಾರಕ್ಕೆ ದೇಶವೇ ಅಂದಿತು ಜೈ ! ನಮ್ಮ ರಾಜ್ಯದಲ್ಲೂ ಹೀಗೆ ಜಾರಿಯಾಗಬೇಕು ಏನಂತೀರಾ??

ಇದೀಗ ಜನರು ಟ್ರಾಫಿಕ್ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದು ಇಡೀ ದೇಶದಲ್ಲಿ ದಂಡದ ಪಾವತಿ ಮೊತ್ತವನ್ನು ಭಾರಿ ಹೆಚ್ಚಳ ಮಾಡಲಾಗಿದೆ. ಏಕಾ ಏಕಿ ದಂಡದ ಪಾವತಿ ಮೊತ್ತವನ್ನು ಹೆಚ್ಚಳ ಮಾಡಿರುವ ಕಾರಣ, ಸಾಮಾನ್ಯ ಜನರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಸೂಕ್ತ ದಾಖಲೆಗಳನ್ನು ಹೊಂದಿರದೆ, ವಾಹನಗಳನ್ನು ಚಲಾಯಿಸುವ ಕಾರಣ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಅಷ್ಟೇ ಅಲ್ಲದೆ, ಇವರು ಮಾಡಿದ ತಪ್ಪು ಗಳಿಂದಾಗಿ ಮತ್ತೊಬ್ಬರು ಜೀವನ ಪೂರ್ತಿ ಅದರ ಪರಿಣಾಮವನ್ನು ಅನುಭವಿಸುತ್ತಾರೆ ಎಂದು ಈ ಹೊಸ ಟ್ರಾಫಿಕ್ ನಿಯಮಗಳನ್ನು ಸಮರ್ಥನೆ ಮಾಡಿಕೊಂಡರೆ, ಇನ್ನು ಕೆಲವರು ದಂಡ ಬಹಳ ಹೆಚ್ಚಾಗಿದೆ, ತಪ್ಪುಗಳು ಸಹಜ ಎಂಬ ಮಾತುಗಳನ್ನು ಆಡುತ್ತಾರೆ.

ಇನ್ನು ಕೆಲವು ಜನರು ಇದರ ಬಗ್ಗೆ ಬಾರಿ ಆಕ್ರೋಶವನ್ನು ಹೊರ ಹಾಕುವ ಮೂಲಕ, ಸರ್ಕಾರವು ನಮಗೆ ಟ್ರಾಫಿಕ್ ನಿಯಮಗಳನ್ನು ಪಾಲಿಸದೆ ಹೋದರೆ, ದಂಡ ವಿಧಿಸುತ್ತದೆ. ಆದರೆ ಸರ್ಕಾರ ರೋಡ್ ಸರಿ ಮಾಡುವುದಿಲ್ಲ, ಹಾಗೂ ಸಾರ್ವಜನಿಕ ವಾಹನಗಳಲ್ಲಿ ಮನಬಂದಂತೆ ಜನರನ್ನು ತುಂಬಿಸಿಕೊಂಡು ಹೋಗುತ್ತಾರೆ. ಇದನ್ನು ಪ್ರಶ್ನೆ ಮಾಡಿದರೆ ನಮಗೆ ಉತ್ತರ ಸಿಗುವುದಿಲ್ಲ ಎಂಬ ಆಕ್ರೋಶದ ಮಾತುಗಳನ್ನು ಹೊರಹಾಕಿದ್ದಾರೆ. ಇನ್ನು ಕೆಲವರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ದಂಡ ವಿಧಿಸುವ ಬದಲು ಸ್ಥಳದಲ್ಲಿ ಹೆಲ್ಮೆಟ್ ನೀಡಿ, ಇನ್ಶೂರೆನ್ಸ್ ನೀಡಿ ಎಂದೆಲ್ಲ ಪೋಸ್ಟ್ಗಳನ್ನು ಹರಿದು ಬಿಡುತ್ತಿದ್ದಾರೆ. ಇದನ್ನೇ ಲಾಭವನ್ನಾಗಿ ಮಾಡಿಕೊಂಡ ವಿಮಾ ಸಂಸ್ಥೆಗಳು ಕೂಡ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದರೆ, ಇನ್ಶೂರೆನ್ಸ್ ಹಣವನ್ನು ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿವೆ.

ಆದರೆ ಈ ಎಲ್ಲ ವಾದ ವಿವಾದಗಳ ನಡುವೆ ಗೋವಾ ಮುಖ್ಯಮಂತ್ರಿಗಳು ಜನರ ಕೂಗನ್ನು ಕೇಳಿಸಿಕೊಂಡಿದ್ದಾರೆ, ಎಲ್ಲರಿಗೂ ಒಂದೇ ನ್ಯಾಯ ಎಂಬ ನಿಟ್ಟಿನಲ್ಲಿ, ಬೇರೆಯೊಬ್ಬರ ತಪ್ಪನ್ನು ಪ್ರಶ್ನೆ ಮಾಡುವ ಮುನ್ನ ನಮ್ಮ ತಪ್ಪುಗಳನ್ನು ಸರಿ ಮಾಡಿಕೊಳ್ಳಬೇಕು ಎಂದು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಇವರ ಹೇಳಿಕೆಗೆ ದೇಶದ ಎಲ್ಲಡೆ ಬಾರಿ ಪ್ರಶಂಸೆಗಳು ವ್ಯಕ್ತವಾಗಿದ್ದು, ಈಗಾಗಲೇ ಪೊಲೀಸ್ ಇಲಾಖೆ ಕೋಟಿ ಕೋಟಿ ಹಣವನ್ನು ದಂಡವನ್ನಾಗಿ ತೆಗೆದುಕೊಂಡಿವೆ, ಆದರೆ ಸರ್ಕಾರ ಸರಿಯಾದ ರಸ್ತೆಗಳನ್ನು ಮಾಡದೇ, ದಂಡ ವಿಧಿಸಿದರೆ ಹೇಗೆ ಎಂಬುದನ್ನು ಅರಿತುಕೊಂಡ ಗೋವಾ ಮುಖ್ಯಮಂತ್ರಿ, 15 ರಿಂದ 20 ದಿನಗಳ ಒಳಗೆ ರಸ್ತೆ ರಿಪೇರಿ ಮಾಡುವಂತೆ PWD ಎಂಜಿನಿಯರ್‌ಗಳಿಗೆ ಸೂಚನೆ ನೀಡಿ ಆದೇಶ ಹೊರಡಿಸಲಾಗಿದ್ದು, ಗೋವಾ ರಾಜ್ಯದ ಪ್ರತಿಯೊಂದು ರಸ್ತೆಗಳು ಸಂಪೂರ್ಣ ಗುಂಡಿ ಮುಕ್ತವಾದ ಮೇಲೆ ಹೊಸ ಟ್ರಾಫಿಕ್ ನಿಯಮ ಜಾರಿಗೆ ತರುವುದಾಗಿ ಘೋಷಣೆ ಮಾಡಿದ್ದಾರೆ.

ಮುಂದಿನ ಡಿಸೆಂಬರ್ ವೇಳೆಗೆ, ಎಲ್ಲ ರಸ್ತೆಗಳ ಗುಣಮಟ್ಟವನ್ನು ಪರೀಕ್ಷಿಸಿ ತದನಂತರ ನಿರ್ಧಾರ ಕೈಗೊಳ್ಳುವುದಾಗಿ ಹೇಳಿರುವ ಕಾರಣ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಇಡೀ ದೇಶದಲ್ಲೇ ಇದೇ ಕೂಗು ಕೇಳಿಬಂದಿದ್ದು ಜನರು ಈ ನಿರ್ಧಾರಕ್ಕೆ ಒಪ್ಪಿಗೆ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳನ್ನು ಆರಂಭಿಸಿದ್ದಾರೆ. ಈ ನಿರ್ಧಾರದ ನಂತರ, ನಮ್ಮ ಕರ್ನಾಟಕ ರಾಜ್ಯದಲ್ಲಿಯೂ ಈ ಕಾನೂನು ಜಾರಿಯಾಗಬೇಕು ಎಂಬ ಒತ್ತಾಯ ಕೇಳಿಬಂದಿದೆ. ಇದಕ್ಕೆ ನಮ್ಮ ಬೆಂಬಲ ಸಹ ಇದ್ದು, ದಯವಿಟ್ಟು ನೀವು ಸಹ ಈ ಅಭಿಯಾನಕ್ಕೆ ಕೈ ಜೋಡಿಸಿ. ಸರ್ಕಾರಕ್ಕೆ ಈ ಪೋಸ್ಟ್ ಅನ್ನು ಶೇರ್ ಮಾಡಿ ತಲುಪಿಸಿ. ಈ ವಿಷಯ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರ ಜೊತೆ ಶೇರ್ ಮಾಡಿ ಹಂಚಿಕೊಳ್ಳಿ, ಮತ್ತಷ್ಟು ಸುದ್ದಿಗಳಿಗಾಗಿ ಕರುನಾಡ ವಾಣಿ ಲೈಕ್ ಮಾಡಿ ಫಾಲೋ ಮಾಡಿ.