ತಮಿಳರಾದ ನೀವು ಎಂದು ಪ್ರಶ್ನೆ ಆರಂಭಿಸಿದ ಸಂದರ್ಶಕನಿಗೆ ಇಸ್ರೋ ಅಧ್ಯಕ್ಷ ಶಿವನ್ ಉತ್ತರ ಹೇಗಿತ್ತು ಗೊತ್ತಾ?

ನಮ್ಮ ದೇಶ, ಹಲವು ಧರ್ಮ, ಭಾಷೆ, ಸಂಸ್ಕತಿಗಳನ್ನು ತನ್ನ ಹೊಡಲಲ್ಲಿ ಇಟ್ಟಿಕೊಂಡಿರುವ ಮಹಾ ದೇಶ. ಇಡೀ ವಿಶ್ವವೇ ಇದರ ಬಗ್ಗೆ ಭಾರತ ದೇಶವನ್ನು ಕೊಂಡಾಡುತ್ತದೆ. ಆದರೆ  ಇಲ್ಲಿನ ಕೆಲವೇ ಕೆಲವು ಜನರು, ತಮಗೆ ತಾವೇ ತಾವಿರುವ ಪ್ರದೇಶ ಹಾಗೂ ತಮ್ಮ ಭಾಷೆಯ ಆಧಾರದ ಮೇಲೆ ತಮ್ಮನ್ನು ತಾವು ವಿಂಗಡಣೆ ಮಾಡಿಕೊಂಡಿರುತ್ತಾರೆ. ಇದೇ ರೀತಿಯ ಘಟನೆ ಇದೀಗ ಇಡೀ ವಿಶ್ವವೇ ಇಂದು ನಿಬ್ಬೆರಗಾಗಿ ನೋಡುತ್ತಿರುವ ಸಂಸ್ಥೆಯಾದ ಇಸ್ರೋ ಸಂಸ್ಥೆಯ ಅಧ್ಯಕ್ಷ ಕೆ. ಶಿವನ್ ರವರಿಗೆ ಎದುರಾಗಿದೆ. ಆದರೆ ಅವರು ಆ ಪರಿಸ್ಥಿತಿಯ ಪ್ರಶ್ನೆಗೆ ಉತ್ತರ ನೀಡಿದ ಪರಿ ಕಂಡು ಮತ್ತೊಮ್ಮೆ ದೇಶದ ಜನರು ಕೆ ಶಿವನ್ ರವರನ್ನು ಕೊಂಡಾಡುತ್ತಿದ್ದಾರೆ. ಅಷ್ಟಕ್ಕೂ ನಡೆದದ್ದೇನು ಗೊತ್ತಾ?? ಸಂಪೂರ್ಣ ವಿವರಿಗಳಿಗಾಗಿ ಕೆಳಗಡೆ ಓದಿ, ಇವರ ಉತ್ತರಕ್ಕೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ, ಸುದ್ದಿ ಇಷ್ಟವಾದರೇ ನಿಮ್ಮ ಸ್ನೇಹಿತರ ಜೊತೆ ಶೇರ್ ಮಾಡಿ ಹಂಚಿಕೊಳ್ಳಿ.

ಇದೀಗ ಇಡೀ ವಿಶ್ವವೇ ಕೆ ಶಿವನ್ ರವರ ಬಗ್ಗೆ ಮಾತನಾಡುತ್ತಿದೆ, ಸಾಮಾನ್ಯ ರೈತನ ಮಗ ಇಸ್ರೋ ಸಂಸ್ಥೆಯ ಮುಖ್ಯಸ್ಥನಾಗಿ ಕಾರ್ಯ ನಿರ್ವಹಿಸುತ್ತಿರುವ ವಿಷಯ ತಿಳಿದ ಮೇಲಂತೂ ಕೆ ಶಿವನ್ ರವರಿಗೆ ರಾತ್ರೋ ರಾತ್ರಿ ಕೋಟ್ಯಂತರ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಇದ್ಯಾವುದು ಸುಮ್ಮನೆ ಬಂದಿದ್ದಲ್ಲ, ಹಲವಾರು ವರ್ಷಗಳ ಸಾಧನೆಯಿಂದ ಇದನ್ನು ಸಾಧಿಸಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಹೀಗಿರುವಾಗ ಸಂದರ್ಶಕನೊಬ್ಬ, ಇವರನ್ನು ಪ್ರಶ್ನೆ ಮಾಡುವಾಗ, ನೀವು ತಮಿಳರಾಗಿ ಇಂಥ ಉನ್ನತ ಹುದ್ದೆಯಲ್ಲಿದ್ದೀರಿ, ತಮಿಳುನಾಡಿನ ಜನರಿಗೆ ಏನು ಹೇಳಲು ಬಯಸುತ್ತೀರಿ ಎಂದು ಪ್ರಶ್ನೆ ಮಾಡಿದಾಗ ಕೂಡಲೇ, ಮೊದಲು ನಾನೊಬ್ಬ ಭಾರತೀಯ, ನಾನು ಇಸ್ರೋ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವುದು ಭಾರತೀಯನಾಗಿ, ಇಸ್ರೋ ಅಲ್ಲಿ ಬೇರೆ ಬೇರೆ ಪ್ರದೇಶದ ಭಾಷೆಯ ಜನರು ಒಟ್ಟಾಗಿ ಕೆಲಸ ಮಾಡುತ್ತಾರೆ, ನಾವು ಒಟ್ಟಾಗಿಯೇ ಇದ್ದೇವೆ ಎಂದು ಉತ್ತರ ನೀಡುವ ಮೂಲಕ ದೇಶ ಐಕ್ಯತೆಯನ್ನು ಸಾರಿ ಹೇಳಿದರು.

Post Author: Ravi Yadav