ಕಾವೇರಿ ಕೂಗಿಗೆ ಬೆಂಬಲ ನೀಡಲು ಮುಂದೆ ಬಂದ ಭಾರತದ ಖ್ಯಾತ ನಟಿಮಣಿಯರು ಯಾರು ಗೊತ್ತಾ?

ಕಾವೇರಿ ಕೂಗಿಗೆ ಬೆಂಬಲ ನೀಡಲು ಮುಂದೆ ಬಂದ ಭಾರತದ ಖ್ಯಾತ ನಟಿಮಣಿಯರು ಯಾರು ಗೊತ್ತಾ?

ಈಶ ಎನ್ನುವ ಫೌಂಡೇಶನ್ ಆಯೋಜಿಸಿರುವ ಈ ಕಾವೇರಿ ಕೂಗಿನ ಅಭಿಯಾನಕ್ಕೆ ಸಿನಿ ರಂಗದವರು ಕೈ ಜೋಡಿಸಿರುವುದು ಖುಷಿಯ ವಿಷಯ. ನೀರು ಬಹಳ ಮುಖ್ಯವಾದದ್ದು ಆದರೆ 2020 ರ ವೇಳೆಗೆ ಇಂಡಿಯಾದಲಿನ ಸುಮಾರು 21 ಪಟ್ಟಣಗಳಲ್ಲಿ ನೀರಿನ ಅಭಾವ ಉಂಟಾಗುವುದು ಕಟ್ಟಿಟ್ಟ ಬುತ್ತಿ. ಇನ್ನು ಈಗಾಗಲೇ ಚೆನ್ನಯ್’ನಲ್ಲಿ ನೀರಿನ ಅಭಾವ ಉಂಟಾಗಿದ್ದು ಇನ್ನೇನು ಕೆಲವೇ ಕೆಲವು ವರ್ಷಗಳಲ್ಲಿ ಬೆಂಗಳೂರಿಗೂ ಇದೆ ಗತಿ ಬರುವ ಲಕ್ಷಣ ಇದೆ. ಇನ್ನು ಇದನ್ನು ತಡೆಗಟ್ಟಲು ನಮಗೆ ಇರುವ ಒಂದು ಒಳ್ಳೆ ಉಪಾಯ ಎಂದರೆ ಮರಗಳನ್ನು ಬೆಳೆಸುವುದು ಎಂದು ನೀರಿನ ಪ್ರಾಬ್ಲಮ್ ಬಗ್ಗೆ ಈ ಒಂದು ಅಭಿಯಾನದ ಮೂಲಕ ಅರಿವನ್ನು ಮೂಡಿಸಲು ಪಣ ತೊಟ್ಟಿದ್ದಾರೆ.

ಇನ್ನು ಸುಮಾರು 100 ವರ್ಷಗಳ ಹಿಂದೆ ಬೀಳುತ್ತಿದ್ದ ಮಳೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಇನ್ನು ಮಳೆಯಿಂದ ಬಂದ ನೀರನ್ನು ಹಿಡಿದಿಟ್ಟು ಕೊಳ್ಳುವ ಶಕ್ತಿ ಭೂಮಿಗಿಲ್ಲದಂತಾಗಿದೆ. ಇದಕ್ಕೆ ಮುಖ್ಯ ಕಾರಣ ಮರಗಳನ್ನು ಕಡಿಯುವುದು ಎಂದು ಸದ್ಗುರು ಹೇಳಿದ್ದಾರೆ.

ಇನ್ನು ಈ ಕಾವೇರಿ ಕೂಗು ಎಂಬ ಅಭಿಯಾನಕ್ಕೆ ಅನೇಕ ಕನ್ನಡದ ಸ್ಟಾರ್ ನಟ ನಟಿಯರು ಭಾಗಿಯಾಗಿ ಕೈ ಜೋಡಿಸಿದ್ದಾರೆ . ನಟರಾದ ಪುನೀತ್ ರಾಜ್’ಕುಮಾರ್ , ರಕ್ಷಿತ್ ಶೆಟ್ಟಿ , ದಿಗಂತ್ ,ಉಪೇಂದ್ರ ಅವರು ಈ ಅಭಿಯಾನಕ್ಕೆ ಸಾಥ್ ಕೊಟ್ಟಿದ್ದಾರೆ. ಇನ್ನು ನಟಿಯರಾದ ಶ್ರೀನಿಧಿ ಶೆಟ್ಟಿ , ಸುಹಾಸಿನಿ , ಪ್ರಣಿತಾ , ರಾಗಿಣಿ ಸೇರಿದಂತೆ ಇನ್ನು ಹಲವರು ಈ ಅಭಿಯಾನಕ್ಕೆ ಸಾಥ್ ಕೊಟ್ಟಿದ್ದಾರೆ.

ಕಾವೇರಿ ಕೂಗಿಗೆ ಸಪೋರ್ಟ್ ಮಾಡಲು ಬರಿ ತಮ್ಮ ಕನ್ನಡದ ಸ್ಟಾರ್ ನಟ ನಟಿಯರ ಜೊತೆ ಕಂಗನಾ , ತಮನ್ನಾ ಹಾಗೂ ಕಾಜಲ್ ಅವರು ಈ ಒಂದು ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.

ಇನ್ನು ಖುಷಿಯ ವಿಷಯ ಏನೆಂದರೆ ಕ್ವೀನ್ ಎಂದು ಕರೆಯಲ್ಪಡುವ ಕಂಗನಾ , ತಮನ್ನಾ , ಹಾಗೂ ಕಾಜಲ್ ಸಹ ಕಾವೇರಿ ಕೂಗು ಎಂಬ ಅಭಿಯಾನಕ್ಕೆ ಜೊತೆಯಾಗಿದ್ದಾರೆ. ಇನ್ನು ಈ ನಟಿಯರನ್ನು ಕ್ವೀನ್ ಎಂದು ಕರೆಯಲು ಕಾರಣ ಕಂಗಾನ ಅವರು ನಟಿಸಿದ ಕ್ವೀನ್ ಸಿನಿಮಾದ ರೀಮೇಕ್ ಸಿನಿಮಾದಲ್ಲಿ ನಟಿ ತಮನ್ನಾ ಹಾಗೂ ಕಾಜಲ್ ನಟಿಸಿರುವುದು.