ಆಟೋಗ್ರಾಫ್ ಕೇಳಿದ ವಿಶೇಷ ಅಭಿಮಾನಿಯನ್ನು ಕಂಡು ಕೊಹ್ಲಿ ಮಾಡಿದ್ದೇನು ಗೊತ್ತಾ??

ವಿರಾಟ್ ಕೊಹ್ಲಿ ರವರು ಇಂದಿನ ಕ್ರಿಕೆಟ್ ರಾಜನಂತೆ ಮೆರೆಯುತ್ತಿದ್ದಾರೆ, ಈಗಾಗಲೇ ಹಲವಾರು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಮೈದಾನಲ್ದಲ್ಲಿ ಫುಲ್ ಅಗ್ರೆಸ್ಸಿವ್ ಆಗಿ ಆಟ ಆಡುವ ವಿರಾಟ್ ಕೊಹ್ಲಿ ರವರ ಆಟದ ವೈಖರಿಯನ್ನು ಕಂಡರೆ ಕೆಲವರು ಟೀಕೆ ಮಾಡುತ್ತಾರೆ. ಹೌದು ಕೊಹ್ಲಿ ರವರ ಆಕ್ರಮಣಕಾರಿ ಆಟವನ್ನು ಹಲವಾರು ಜನ ಎಂಜಾಯ್ ಮಾಡುತ್ತಾ ನೋಡುತ್ತಾರೆ. ಇನ್ನು ಕೆಲವರು ಕೊಹ್ಲಿ ರವರ ಆಕ್ರಮಣಕಾರಿ ಆಟವನ್ನು ಇಷ್ಟ ಪಡುವುದಿಲ್ಲ. ಆದರೆ ಮೈದಾನದ ಹೊರಗೆ ಮಾತ್ರ ಅದರಲ್ಲಿಯೂ ಅಭಿಮಾನಿಗಳನ್ನು ಕಂಡಾಗ ಕಿಂಗ್ ವಿರಾಟ್ ಕೊಹ್ಲಿ ರವರ ನಡುವಳಿಕೆಯನ್ನು ಯಾರು ಟೀಕೆ ಮಾಡಲು ಸಾಧ್ಯವೇ ಇಲ್ಲ. ಹೀಗಿರುವಾಗ ಇದೇ ರೀತಿಯ ಘಟನೆಗೆ ಮತ್ತೊಮ್ಮೆ ಸಾಕ್ಷಿಯಾಗಿದ್ದಾರೆ ಕಿಂಗ್ ಕೊಹ್ಲಿ.

ಅಭಿಮಾನಿಗಳ ವಿಷಯದಲ್ಲಿ ಮಾತ್ರ ಕೊಂಚ ಭಿನ್ನವಾಗಿ ಇರುವ ವಿರಾಟ್ ಕೊಹ್ಲಿ ರವರು, ಜಮೈಕಾ ದಲ್ಲಿ ವೆಸ್ಟ್ ವಿಂಡೀಸ್ ವಿರುದ್ಧ ಜಯಗಳಿಸಿದ ನಂತರ ವಿರಾಟ್ ಕೊಹ್ಲಿ ರವರ ಬಳಿ ಆಟೋಗ್ರಾಫ್ ಕೇಳಲು ಬಂದಿದ್ದರು ಒಬ್ಬ ವಿಶೇಷ ಅತಿಥಿ, ಹೌದು 7 ವರ್ಷದ ಪುಟ್ಟ ಬಾಲಕ. ಈ ಪುಟ್ಟ ಬಾಲಕ ಆಟೋಗ್ರಾಫ್ ಕೇಳಲು ವಿರಾಟ್ ಕೊಹ್ಲಿ ಬಳಿ ಬಂದ ತಕ್ಷಣ ಕೊಹ್ಲಿ ಆಶ್ಚರ್ಯ ಚಕಿತ ರಾಗಿ ಬಾಲಕನಿಗೆ ಆಟೋಗ್ರಾಫ್ ನೀಡುವ ಬದಲು ತಾನೇ ಆತನಿಂದ ಆಟೋಗ್ರಾಫ್ ಪಡೆದರು. ಇದನ್ನು ಕಂಡ ವಿರಾಟ್ ಕೊಹ್ಲಿ ರವರ ಪತ್ನಿ ಅನುಷ್ಕಾ ರವರು ಕೂಡ ಜೋರಾಗಿ ನಕ್ಕರು. ಆದರೆ ಆ ಪುಟ್ಟ ಬಾಲಕ ಮಾತ್ರ ಆಟೋಗ್ರಾಫ್ ನೀಡಲಿಲ್ಲ ಎಂದು ದಿಟ್ಟವಾಗಿ ದಿಟ್ಟಿಸುತ್ತಿದ್ದ.

Post Author: Ravi Yadav